ಆ್ಯಪ್ನಗರ

ಹೊಸ ಉದ್ಯೋಗಗಳ ಸೃಷ್ಟಿಗೆ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಸಾ.ರಾ.ಮಹೇಶ್‌

ಯುವಜನರಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲು ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Vijaya Karnataka 16 Feb 2019, 5:00 am
ಬೆಂಗಳೂರು: ಯುವಜನರಿಗೆ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲು ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.
Vijaya Karnataka Web job creation through tourism
ಹೊಸ ಉದ್ಯೋಗಗಳ ಸೃಷ್ಟಿಗೆ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಸಾ.ರಾ.ಮಹೇಶ್‌


ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಫೆ.17 ರವರೆಗೆ ನಡೆಯಲಿರುವ 'ಟಿಟಿಎಫ್‌ ಟ್ರಾವೆಲ್‌ ಶೋ' ಉದ್ಘಾಟಿಸಿ ಮಾತನಾಡಿದ ಅವರು, ''ಸಾರಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಳೆಸಲು ಈ ಬಾರಿ ಬಜೆಟ್‌ನಲ್ಲಿ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ. ರಾಜ್ಯದ ಯುವಜನರಿಗೆ ಹೆಚ್ಚು ಉದ್ಯೋಗಾವಕಾಶ ದೊರೆಯುವ ಗುರಿಯನ್ನು ಇಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಟ್ರಾವೆಲ್‌ ಏಜೆನ್ಸಿಗಳು ತಮ್ಮ ವಹಿವಾಟನ್ನು ವಿಸ್ತರಿಸಲು ಸರಕಾರ ಸೂಕ್ತ ನೆರವು ನೀಡಲಿದೆ. ಈ ರೀತಿ ಮೇಳವನ್ನು ರಾಜ್ಯದ ಎಲ್ಲ ಭಾಗಗಳಲ್ಲಿ ನಡೆಸುವಂತೆ ಏಜೆನ್ಸಿಗಳನ್ನು ಉತ್ತೇಜಿಸಲಾಗುವುದು,'' ಎಂದರು.

ಇಲಾಖೆಯ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌, ಫೇರ್‌ಫೆಸ್ಟ್‌ ಮೀಡಿಯ ಸಿಇಒ ಸಂಜೀವ್‌ ಅಗರ್‌ವಾಲ್‌ ಹಾಜರಿದ್ದರು.

ಮೂರು ದಿನಗಳ ಮೇಳ: ಟ್ರಾವೆಲ್‌ ಏಜೆನ್ಸಿಗಳ ವಹಿವಾಟು ವಿಸ್ತರಿಸಲು ಹಾಗೂ ಜನರ ಜತೆ ಸಂಪರ್ಕವೇರ್ಪಡಿಸಲು ಮೊದಲ ಬಾರಿಗೆ ಮೂರು ದಿನಗಳ ಮೇಳ ಏರ್ಪಡಿಸಲಾಗಿದೆ. 9 ದೇಶಗಳು ಮತ್ತು 18 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 165 ಪ್ರದರ್ಶಕರು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂಡಳಿ, ನ್ಯಾಷನಲ್‌ ಟೂರಿಸ್ಟ್‌ ಆರ್ಗನೈಸೇಶನ್‌, ಖಾಸಗಿ ಪೂರೈಕೆದಾರರು, ವಾಣಿಜ್ಯ ಸಂಘಗಳು ಸೇರಿದಂತೆ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಲವಾರು ಸಂಸ್ಥೆಗಳು ಮೇಳದಲ್ಲಿ ಕೈ ಜೋಡಿಸಿವೆ. ಮೇಳಕ್ಕೆ 10 ಸಾವಿರಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ.

ಅಂಡಮಾನ್‌ ನಿಕೋಬಾರ್‌, ಆಂಧ್ರಪ್ರದೇಶ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಜಾರ್ಖಂಡ್‌, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ ಮತ್ತು ಪಂಜಾಬ್‌ ರಾಜ್ಯಗಳ ಪ್ರವಾಸೋದ್ಯಮ ಮಂಡಳಿಗಳು ಪಾಲ್ಗೊಂಡಿವೆ. ಹೊಸದಿಲ್ಲಿ ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಮೇಘಾಲಯ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಟ್ರಾವೆಲ್‌ ಪೂರೈಕೆದಾರ ಸಂಸ್ಥೆಗಳು ಭಾಗವಹಿಸಿವೆ.

ಮೇಳದ ಮೊದಲ ದಿನ 2019 ನೇ ಸಾಲಿನ ದೇಶದ ಟಾಪ್‌ 100 ಟ್ರಾವೆಲ್‌ ಪ್ರೊಡ್ಯೂಸರ್ಸ್‌ ಪ್ರಶಸ್ತಿ ಗೆದ್ದವರನ್ನು ಸನ್ಮಾನಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ