ಆ್ಯಪ್ನಗರ

ನೆರೆ ಸಂತ್ರಸ್ತರ ತಾತ್ಸಾರ, ಕೇಂದ್ರ-ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಕಡೆಗಣಿಸಿರುವುದನ್ನು ಖಂಡಿಸಿ ಧರಣಿ ನಡೆಸಲು ಕನ್ನಡ ಪರ ಹೋರಾಟಗಾರರು ತೀರ್ಮಾನಿಸಿದ್ದಾರೆ. ಕಂಡು ಕೇಳರಿಯದ ಪ್ರವಾಹಕ್ಕೆ ನಲುಗಿದವರಿಗೆ ಸರಕಾರದ ಕಡೆಯಿಂದ ಯಾವುದೇ ನೆರೆ ಪರಿಹಾರ ಸಿಗದಿರುವುದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.

Vijaya Karnataka Web 26 Sep 2019, 1:30 pm
ಬೆಂಗಳೂರು:ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಯಿಂದ ಸಂತೃಸ್ತರಾಗಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ, ಜನರ ನೋವಿಗೆ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುತ್ತಿಲ್ಲ. ಸಂತ್ರಸ್ತರನ್ನು ಸರಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಖಂಡಿಸಿ ಕನ್ನಡ ಪರ ಹೋರಾಟಗಾರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ತೆಗೆದುಕೊಂಡಿದ್ದಾರೆ.
Vijaya Karnataka Web flood


ಬೇಡಿಕೆಗೆ ಈಡೇರಿಕೆಗೆ ಆಗ್ರಹ

ನೆರೆಯ ಬಳಿಕ ಉತ್ತರ ಕರ್ನಾಟಕದ ಕೃಷ್ಣೆ, ಕಾಳಿ, ತುಂಗೆ, ಘಟಪ್ರಭಾ, ಮಲಪ್ರಭಾ ಮತ್ತು ಭೀಮಾ ನದಿ ಪಾತ್ರದ ಜನರ ಬದುಕು ಇನ್ನೂ ಕೂಡ ಸುಧಾರಣೆ ಕಂಡಿಲ್ಲ. ಪ್ರಕೃತಿ ವಿಕೋಪಕ್ಕೆ ಮಧ್ಯಮ ವರ್ಗ, ಜಾತಿ, ಧರ್ಮ, ಭೇದ ಎನ್ನದೆ ತುತ್ತು ಅನ್ನಕ್ಕಾಗಿ ಜನ ಪರದಾಡುವ ಸ್ಥಿತಿ ಇನ್ನೂ ನಿಂತಿಲ್ಲ. ಇವರೆರೆಲ್ಲರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಬೀದಿಪಾಲಾದ ಜನರೆಲ್ಲರೂ ಕನ್ನಡಿಗರು, ಅವರೆಲ್ಲ ನಮ್ಮವರು, ನಮ್ಮ ಸಹೋದರರು ಎಂದಿರುವ ಕನ್ನಡ ಪರ ಹೋರಾಟಗಾರರು ಕೇಂದ್ರ ಮತ್ತು ರಾಜ್ಯದ ಸರ್ಕಾರದ ನಡೆಯನ್ನು ಖಂಡಿಸಿ ಇದೇ ಬರುವ ಸೆಪ್ಟೆಂಬರ್ 29ರಂದು ಸಂಜೆ 3 ಗಂಟೆಯಿಂದ ನಗರದ ಟೌನ್ ಹಾಲ್ ಮುಂಬಾಗ ಧರಣಿ ನಡೆಸಲಿದ್ದಾರೆ.

ನಲುಗಿದ ರೈತರಿಗಿಲ್ಲನೆರವು

ನೆರೆಯಿಂದ ನೊಂದ ಜನರಿಗೆ ಮತ್ತು ಪ್ರದೇಶಗಳಿಗೆ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದು ತಿಳಿದಿರುವ ವಿಚಾರವೇ. ಮುಖ್ಯಮಂತ್ರಿಯಾಗಲಿ, ಇತರ ಜನಪ್ರತಿನಿಧಿಗಳಾಗಲಿ ಸಂತ್ರಸ್ತರ ಪ್ರದೇಶಗಳಿಗೆ ಕಾಟಾಚಾರದ ಭೇಟಿ ನೀಡಿದ್ದಾರೆಯೇ ಹೊರತು. ಯಾವುದೇ ಭರವಸೆಯಾಗಲಿ , ಧೈರ್ಯದ ಮಾತುಗಳನ್ನಾಗಲಿ ಹೇಳಿಲ್ಲ. ನೊಂದ ಜನರು ಬದುಕು ಕಟ್ಟಿಕೊಳ್ಳಲು ಪರದಾಡುವ ಜೊತೆಗೆ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಯಂತಹ ಕೆಲಸಕ್ಕೂ ಕೈ ಹಾಕುತ್ತಿರುವುದು ದುರಂತದ ಸಂಗತಿ.

ಹೆಬ್ಬಟಗೇರೆ ಗೋರಿ ಮಾಡಿದ ನೆರೆ: 35 ಕುಟುಂಬಗಳ್ಳಿದ್ದ ಗ್ರಾಮದಲ್ಲೀಗ ಕೇವಲ 8 ಜನರ ವಾಸ!

ಈ ಎಲ್ಲಾ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಕನ್ನಡ ಪರ ಹೋರಾಟಗಾರರು ಇದೇ ಭಾನುವಾರ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ