ಆ್ಯಪ್ನಗರ

ಚಾಲಕನ ಕೈಲಿ ಷೂ ಹಿಡಿಸಿದ ಅಧಿಕಾರಿ

ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಕಾರು ಚಾಲಕನಲ್ಲಿ ಷೂ ಹಿಡಿದುಕೊಳ್ಳಲು ಹೇಳಿ ವಿವಾದಕ್ಕೆ ಒಳಗಾಗಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 19 Jul 2017, 3:15 pm
ಬೆಂಗಳೂರು: ಕಾರು ಚಾಲಕನಲ್ಲಿ ಷೂ ಹಿಡಿದುಕೊಳ್ಳಲು ಹೇಳುವ ಮೂಲಕ ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಕೃಷ್ನೋಜಿ ರಾವ್‌ ವಿಐಪಿ ಸಂಸ್ಕೃತಿಗೆ ಕೆಟ್ಟ ಮಾದರಿಯಾಗಿದ್ದಾರೆ.
Vijaya Karnataka Web karnataka official plays the master asks car driver to carry his shoes
ಚಾಲಕನ ಕೈಲಿ ಷೂ ಹಿಡಿಸಿದ ಅಧಿಕಾರಿ


ಖಾನಾಪುರ ತಾಲೂಕಿನ ಕನಕುಂಬಿಯಲ್ಲಿ ಕಳಸಾ ನಾಲೆಯ ಪರಿಶೀಲನೆಗೆ ತೆರಳಿದ್ದಾಗ ಅಲ್ಲಿ ಮಳೆಯಿಂದಾಗಿ ಕೆಸರು ನೀರು ತುಂಬಿತ್ತು. ಆ ವೇಳೆ ಅಧಿಕಾರಿಯು ಷೂ ಬಿಚ್ಚಿ ಅದನ್ನು ಹಿಡಿದುಕೊಳ್ಳುವಂತೆ ಚಾಲಕನಿಗೆ ಹೇಳಿದ್ದಾರೆ. ಇದನ್ನು ಸ್ಥಳೀಯ ಮಾಧ್ಯಮಗಳು ಸೆರೆ ಹಿಡಿದಿವೆ.

ಅಧಿಕಾರಿಯ ಈ ದರ್ಪ ಸರಕಾರಿ ಕಾರು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೊಂದು ಆಘಾತಕಾರಿ ಘಟನೆ ಎಂದು ಬೆಳಗಾವಿ ಜಿಲ್ಲಾ ಸರಕಾರಿ ಕಾರು ಚಾಲಕರ ಸಂಘದ ಸಂಜಯ್‌ ತಲ್ವಾರ್‌ ಹೇಳಿದ್ದಾರೆ.

Karnataka official : In an ugly display of VIP culture, Krishnoji Rao, superintendent engineer of Karnataka Neeravari Nigam Ltd (KNNL), on Tuesday made his car driver, a government employee, lift his shoes.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ