ಆ್ಯಪ್ನಗರ

ಕೆಐಎನಲ್ಲಿ ಹೊಸ ಉಪಕರಣ ಸ್ಥಾಪನೆ, ನಿಷ್ಕ್ರೀಯಗೊಂಡ ವಿಮಾನ ತೆರವು ಇನ್ನು ಸುಲಭ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಷ್ಕ್ರೀಯಗೊಂಡ ವಿಮಾನವನ್ನು ತೆರವುಗೊಳಿಸುವ ಉಪಕರಣ ಸ್ಥಾಪನೆಯಾಗಲಿದೆ. ಇದು ಭಾರತದಲ್ಲೇ ಮೊದಲು ಮಾತ್ರವಲ್ಲ ದಕ್ಷಿಣ ಏಷ್ಯಾದಲ್ಲೇ ಈ ಉಪಕರಣ ಹೊಂದಿರುವ ದೇಶ ಭಾರತವಾಗಿದೆ.

Vijaya Karnataka Web 24 Feb 2021, 2:01 pm
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಷ್ಕ್ರೀಯಗೊಂಡ ವಿಮಾನವನ್ನು ತೆರವುಗೊಳಿಸುವ ಉಪಕರಣ ಸ್ಥಾಪನೆಗೆ ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರಿ ಮಾರಾರ್‌ ಚಾಲನೆ ನೀಡಿದರು.
Vijaya Karnataka Web bengaluru airport


ವರ್ಚುವಲ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ತೆರವುಗೊಳಿಸುವ ಉಪಕರಣವನ್ನು ಹೊಂದಿರುವುದು ಹೆಗ್ಗಳಿಕೆಯಾಗಿದೆ, ಎಂದು ಹೇಳಿದರು.

ಬೇಕೆಂದ ಕಡೆಗೆ ಸಾಗಿಸಬಹುದಾದ ಈ ಕಿಟ್‌, ಜಗತ್ತಿನ ಅತ್ಯಂತ ದೊಡ್ಡ ಪ್ರಯಾಣಿಕರ ವಿಮಾನವಾದ ಏರ್‌ಬಸ್‌ ಎ380 ಯನ್ನು ತೆರವುಗೊಳಿಸುವಲ್ಲಿ ನೆರವಾಗುವ ಸಾಮರ್ಥ್ಯ ಹೊಂದಿದೆ. ಜತೆಗೆ ರನ್‌ವೇನಲ್ಲಿ ವಿಮಾನಗಳ ಅವಘಡ ಸಂಭವಿಸಿದಾಗ ನೆರವಾಗಲಿದೆ. ಅವಘಡದಿಂದ ರನ್‌ವೇ ಮುಚ್ಚುವ ಸಾಧ್ಯತೆಯೂ ಕಡಿಮೆಯಾಗಿರುತ್ತದೆ. ನಿಷ್ಕ್ರೀಯಗೊಂಡ ಎಲ್ಲಾ ರೀತಿಯ ವಿಮಾನಗಳನ್ನು ಪರಿಣಾಮಕಾರಿಯಾದ ರೀತಿಯಲ್ಲಿ ತೆರವುಗೊಳಿಸುವುದರಿಂದ ದೊಡ್ಡ ಅಪಾಯಗಳನ್ನು ತಪ್ಪಿಸಬಹುದು, ಎಂದರು.

ಬೆಂಗಳೂರು ವಿಮಾನ ನಿಲ್ದಾಣದ ಹಳೇ ರನ್‌ ವೇ ಪುನರ್‌ ನಿರ್ಮಾಣ ತಿಂಗಳಾಂತ್ಯಕ್ಕೆ ಪೂರ್ಣ


2020ರಲ್ಲಿ ಬಿಐಎಎಲ್‌ ವಿಶೇಷ ಉಪಕರಣಗಳ ಉತ್ಪಾದನೆ, ಪೂರೈಕೆ ಮತ್ತು ಅದಕ್ಕೆ ಚಾಲನೆ ನೀಡುವ ಕುರಿತು ಕುಂಜ್‌ ಜಿಎಂಬಿಎಚ್‌ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದ ಭಾಗವಾಗಿ ಕುಂಜ್‌ ಜಿಎಂಬಿಎಚ್‌ ಬಿಐಎಎಲ್‌ ಜತೆಗೆ ನಿಷ್ಕ್ರೀಯ ವಿಮಾನಗಳ ತೆರವುಗೊಳಿಸುವಿಕೆ ಕುರಿತಾದ ತರಬೇತಿ ಕೇಂದ್ರ ಸ್ಥಾಪಿಸುವತ್ತ ಶ್ರಮಿಸಲಿದೆ, ಎಂದು ತಿಳಿಸಿದರು.

ಕೆಂಪೇಗೌಡ ವಿಮಾನ ನಿಲ್ದಾಣದ ದಕ್ಷಿಣ ರನ್‌ವೇ ಕ್ಯಾಟ್‌-3ಬಿ ಮೇಲ್ದರ್ಜೆಗೆ ಏರಿಕೆ

ಈ ಸಂದರ್ಭದಲ್ಲಿ ಕುಂಜ್‌ ಜಿಎಂಬಿಎಚ್‌ನ ವ್ಯವಸ್ಥಾಪಕ ನಿರ್ದೇಶಕ ಆ್ಯಂಡ್ರಿಯಾಸ್‌ ಫ್ಯೂಜ್‌, ಮಿಲೇನಿಯಂ ಏರೋ ಡೈನಾಮಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮಿಲಾನ್‌ ಆರ್‌ ಜಟಾಕಿಯಾ ಹಾಜರಿದ್ದರು.
Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ