ಆ್ಯಪ್ನಗರ

ಕುಖ್ಯಾತ ರೌಡಿ ಕೋಳಿ ಫಯಾಜ್‌ ಪುತ್ರ ಸೇರಿ ಐವರು ಗಡಿಪಾರು

​​ ರೌಡಿಶೀಟರ್‌ ಅಮೀರ್‌ ಖಾನ್‌ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಅಪಹರಣ, ಕಳವು, ಪ್ರಾಣ ಬೆದರಿಕೆ ಹಾಗೂ ಮಾದಕ ವಸ್ತು ಮಾರಾಟ ಸೇರಿ 22 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರಿಸಿದ್ದ.

Vijaya Karnataka Web 14 Oct 2021, 9:25 pm
ಬೆಂಗಳೂರು: ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಕುಖ್ಯಾತ ರೌಡಿ ಕೋಳಿ ಫಯಾಜ್‌ ಪುತ್ರ ಸೇರಿ ಐವರು ರೌಡಿಶೀಟರ್‌ಗಳನ್ನು ಬೆಂಗಳೂರು ನಗರದಿಂದ ಗಡಿಪಾರು ಮಾಡಿ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತರು ಆದೇಶಿಸಿದ್ದಾರೆ.
Vijaya Karnataka Web ಪೊಲೀಸ್
ಪೊಲೀಸ್‌


ಬೆಂಗಳೂರಿನ ಶಿವಾಜಿನಗರದ ಕುಖ್ಯಾತ ರೌಡಿ ಕೋಳಿ ಫಯಾಜ್‌ ಪುತ್ರ ಅಮೀರ್‌ ಖಾನ್‌ ಅಲಿಯಾಸ್‌ ಪಪ್ಪು (36) ಗಡಿಪಾರಾದ ರೌಡಿಶೀಟರ್‌. ಈತನನ್ನು ಒಂದು ವರ್ಷದವರೆಗೆ ಬೆಂಗಳೂರು ನಗರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಅಂಗಾಂಗ ಕಸಿಗೆ ಸುಸಜ್ಜಿತ ಆಸ್ಪತ್ರೆ..!

ರೌಡಿಶೀಟರ್‌ ಅಮೀರ್‌ ಖಾನ್‌ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆ, ಅಪಹರಣ, ಕಳವು, ಪ್ರಾಣ ಬೆದರಿಕೆ ಹಾಗೂ ಮಾದಕ ವಸ್ತು ಮಾರಾಟ ಸೇರಿ 22 ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರಿಸಿದ್ದ.

ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಗೂಂಡಾ ವರ್ತನೆ ತೋರುವ ಮೂಲಕ ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದ್ದ.

ಬೆಂಗಳೂರು ವಿಮಾನ ನಿಲ್ದಾಣ: ಶಾಸಕ ಹ್ಯಾರಿಸ್ ಸಂಬಂಧಿ ಚೀಲದಲ್ಲಿ ಎರಡು ಗುಂಡು ಪತ್ತೆ

ಹಾಗಾಗಿ, ಆತನಿಂದ ಸಾರ್ವಜನಿಕ ಆಸ್ತಿ, ಜನರ ಜೀವಕ್ಕೆ ಹಾನಿಯಾಗುವ ಅಪಾಯವಿರುವ ಕಾರಣ ಪೂರ್ವ ವಿಭಾಗದ ಉಪ ಪೊಲೀಸ್‌ ಆಯುಕ್ತ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಅ. 11 ರಿಂದ 2022ರ ಅ.10 ರವರೆಗೆ ಬೆಂಗಳೂರು ನಗರದಿಂದ ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ನು, ಪೂರ್ವ ವಿಭಾಗ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿದ್ದ ಹಲಸೂರಿನ ಕಾರ್ತಿಕ್‌, ಕಮರ್ಷಿಯಲ್‌ ಸ್ಟ್ರೀಟ್‌ನ ಮೊಹಮ್ಮದ್‌ ಅವೇಜ್‌, ಅಮೀರ್‌ಖಾನ್‌, ಜೆ.ಬಿ. ನಗರದ ಜೋಶ್ವಾನನ್ನು ನಗರದಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ