ಆ್ಯಪ್ನಗರ

ಕುಸುಮಾ ಕಣ್ಣೀರಿಗೂ ಮುನಿರತ್ನ ಕಣ್ಣೀರಿಗೂ ವ್ಯತ್ಯಾಸವಿದೆ ಎಂದ ಡಿಕೆಶಿ

ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕಣ್ಣೀರಿಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರಿಗೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.

Vijaya Karnataka Web 29 Oct 2020, 7:45 pm
ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಎಚ್‌ ಕಣ್ಣೀರಿಗೂ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರಿಗೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web DK Shivakumar


ಬೆಂಗಳೂರಿನ ಆರ್‌ಆರ್‌ ನಗರದಲ್ಲಿ ಮಾತನಾಡಿದ ಅವರು, ಕುಸುಮಾ ತಮ್ಮ ಜೀವನವನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಆದರೆ ಅಂದು ಕಾಂಗ್ರೆಸ್ ನನ್ನ ಉಸಿರು, ರಕ್ತ ಅಂತ ಮುನಿರತ್ನ ಹೇಳಿದ್ದರು. ಇದೀಗ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆನಲ್ಲ ಎಂದು ಮುನಿರತ್ನ ಕಣ್ಣೀರು ಹಾಕಿರಬಹುದು ಎಂದಿದ್ದಾರೆ ಡಿಕೆಶಿ.

ಆರ್‌ ಆರ್‌ ನಗರ: ಕಾಂಗ್ರೆಸ್‌ಗೆ ಕಾರ್ಯಕರ್ತರ ಕೊರತೆಯೇ ಸವಾಲು!

ಉಪಚುನಾವಣೆಯಲ್ಲಿ ಜನರಿಗೆ ಉತ್ತರ ಕೋಡೋಕೆ ಆಗುತ್ತಿಲ್ಲ ಎಂದು ಮುನಿರತ್ನ ನೊಂದುಕೊಂಡಿರಬಹುದು. ಅದಕ್ಕೆ ಅವರು ಕಣ್ಣೀರು ಹಾಕಿರಬಹುದು ಎಂದು ಲೇವಡಿ ಮಾಡಿದ್ದಾರೆ. ಮುನಿರತ್ನ ಅವರು ಯಾಕೆ ಅಳಬೇಕು, ಇವಾಗ ಅಳುವಂತದ್ದು ಏನು ತೊಂದರೆ ಆಗಿದೆ? ಎಂದು ಪ್ರಶ್ನಿಸಿದ ಡಿಕೆ ಶಿವಕುಮಾರ್‌, ಮುನಿರತ್ನ ವೋಟರ್ ಐಡಿ ಪ್ರಿಂಟ್ ಮಾಡಿ ಹಣ ಹಂಚುತ್ತಿರುವುದು ನಿಜ. ನಕಲಿ ವೋಟರ್ ಐಡಿ ಕುರಿಯತಾಗ ಮುನಿರತ್ನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್‌ ಯಡಿಯೂರಪ್ಪ ಮಾತಾಡಿದ್ದಾರೆ. ಈಗ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಪ್ರಶಿಸಿದ್ದಾರೆ.

ನಾನು ಮತ ಕೇಳಲು ಕಣ್ಣೀರು ಹಾಕಿಲ್ಲ; ಕಾಂಗ್ರೆಸ್‌ ನಾಯಕರಿಗೆ ಮುನಿರತ್ನ ತಿರುಗೇಟು

ತನ್ನ ಮಾತೃಪಕ್ಷ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಣಕ್ಕಾಗಿ ಮಾರಾಟ ಆಗಿರುವ ಮುನಿರತ್ನ ತಾಯಿಯನ್ನು ಮಾರಿದಂತೆ ಎಂಬ ಕಾಂಗ್ರೆಸ್‌ ನಾಯಕರ ಆರೋಪವನ್ನು ನೆನೆದು ಬುಧವಾರ ಮುನಿರತ್ನ ಕಣ್ಣೀರು ಹಾಕಿದ್ದರು.
ಕಣ್ಣೀರಿಗೆ ವ್ಯಂಗ್ಯ ಮಾಡಿದ್ದ ಕಾಂಗ್ರೆಸ್‌ ಮುಖಂಡರಿಗೆ ತಿರುಗೇಟು ನೀಡಿದ ಮುನಿರತ್ನ ನಾನು ವೋಟ್‌ಗಾಗಿ ಕಣ್ಣೀರು ಹಾಕಿಲ್ಲ. 25 ವರ್ಷದ ಹಿಂದೆ ನನ್ನ ತಾಯಿ ತೀರಿ ಹೋಗಿದ್ದಾರೆ. ಅವರ ನೆನೆದು ಕಣ್ಣೀರು ಬಂದಿದೆ ಅಷ್ಟೆ. ನಾನು ನನ್ನ ಅಭಿವೃದ್ದಿ ಕೆಲಸದ ಮೇಲೆ ಮತ ಕೇಳುವ ವ್ಯಕ್ತಿಯೇ ಹೊರತು ಕಣ್ಣೀರ ಮೇಲೆ ಮತ ಕೇಳುವ ವ್ಯಕ್ತಿ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ