ಆ್ಯಪ್ನಗರ

40 ವರ್ಷಗಳ ಬಳಿಕ ಕಾವೇರಿಯಲ್ಲಿ ಈಜಾಡಿ, ಹಳೆ ನೆನಪು ಮೆಲುಕು ಹಾಕಿದ ಡಿಕೆಶಿ!

ಕಾವೇರಿ ನದಿಯಲ್ಲಿ ಈಜಾಡುತ್ತ ಡಿಕೆ ಶಿವಕುಮಾರ್ ತನ್ನ ಹಳೆಯ ನೆನಪುಗಳನ್ನ ಮೆಲುಕು ಹಾಕಿದ್ದಾರೆ. ಕನಕಪುರದಲ್ಲಿ ಹಾದು ಹೋಗುವ ಕಾವೇರಿಯಲ್ಲಿ ಡಿಕೆಶಿ ಕೊಂಚ ಸಮಯ ಕಳೆದಿದ್ದಾರೆ.

Vijaya Karnataka Web 22 Jun 2020, 4:25 pm
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬ್ಯುಸಿಯಾಗಿದ್ದ ಡಿಕೆ ಶಿವಕುಮಾರ್‌ ಇದೀಗ ಬಿಡುವು ಮಾಡಿಕೊಂಡು ಕಾವೇರಿ ನದಿಯಲ್ಲಿ ಈಜಾಡಿದ್ದಾರೆ. ಜೂ.21ರ ಸಂಜೆ ಬರೋಬ್ಬರಿ 40 ವರ್ಷಗಳ ಬಳಿಕ ಡಿಕೆಶಿ ಕಾವೇರಿ ನದಿಯಲ್ಲಿ ಈಜಾಡಿ ಸಮಯ ಕಳೆದಿದ್ದಾರೆ.
Vijaya Karnataka Web QIWO0iW_


ಇನ್ನು ಶಿವಕುಮಾರ್‌ ಅವರಿಗೆ, ಅವರ ಪತ್ನಿ ಕೂಡ ಸಾಥ್‌ ನೀಡಿದರು. ಈಜಾಡುತ್ತ ತಮ್ಮ ಶಾಲಾ, ಕಾಲೇಜು ದಿನ ಮತ್ತು ತಂದೆಯ ಜೊತೆ ಕಾಲ ಕಳೆದಿದ್ದ ಕೆಲವು ಕ್ಷಣಗಳನ್ನು ಡಿಕೆಶಿ ನೆನಪಿಸಿಕೊಂಡರು. ಈ ಬಗ್ಗೆ ಮಾಜಿ ಸಚಿವ ಡಿಕೆ ಶಿವಕುಮಾರ್‌ ತಮ್ಮ ಫೇಸ್‍ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. '40 ವರ್ಷಗಳ ನಂತರ ಭಾನುವಾರ ಸಂಜೆ 4:30ಕ್ಕೆ ನಮ್ಮ ಹಳ್ಳಿಯ ಬಳಿ ಕಾವೇರಿ ನದಿಯಲ್ಲಿ ಈಜಾಡಿ ನಾನು ಕೆಲ ಸಮಯ ಕಳೆದದ್ದು ನಿಜಕ್ಕೂ ಸಂತಸ ನೀಡಿದೆ.


ನನ್ನ ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ನಾನು, ನನ್ನ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದೆ. ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ಕಣ್ಣ ಮುಂದೆ ಹಾದುಹೋದವು” ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.ಅಷ್ಟೇ ಅಲ್ಲದೇ ಭಾನುವಾರ ಸೂರ್ಯ ಗ್ರಹಣ ಸಂಭವಿಸಿದ ಹಿನ್ನೆಲೆ ಗ್ರಹಣ ಮುಗಿದ ನಂತರ, ತಮ್ಮ ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

ಸಚಿವ ಸುಧಾಕರ್‌ ತಂದೆಗೆ ಜ್ವರ - ಕೆಮ್ಮು, ಕೊರೊನಾ ತಪಾಸಣೆ

ಇನ್ನು ತಾವು ನದಿಯಲ್ಲಿ ಈಜುತ್ತಿರುವ ಮತ್ತು ಕುಟುಂಬದವರೊಂದಿಗೆ ಕ್ಲಿಕ್ಕಿಸಿದ ಫೋಟೋಗಳನ್ನು ಡಿಕಶಿ ಪೋಸ್ಟ್‌ನೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಡಿಕೆ ಶಿವಕುಮಾರ್‌ ಅವರನ್ನ ಕೆಪಿಸಿಸಿ ಅಧ್ಯಕ್ಷರಾಗಿ ಎಐಸಿಸಿ ಆಯ್ಕೆ ಮಾಡಿತ್ತು. ಆ ನಂತರ ಡಿಕೆಶಿ ಅನೇಕ ಪ್ರಮುಖ ನಾಯಕರನ್ನ ಭೇಟಿಯಾಗುತ್ತ ಬ್ಯುಸಿಯಾಗಿದ್ದರು. ಮುಂದಿನ ತಿಂಗಳು ಡಿಕಶಿಯವರ ಪದಗ್ರಹಣ ನಡೆಯುವ ಸಾಧ್ಯತೆ ಇದೆ. ಪದಗ್ರಹಣಕ್ಕೆ ಈಗಾಗಲೇ ಸರ್ಕಾರ ಅನುಮತಿ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ