ಆ್ಯಪ್ನಗರ

ಹಣಕ್ಕಾಗಿ ಕೊರೊನಾ ನೆಗೆಟಿವ್ ವರದಿ ನೀಡ್ತಿದ್ದ ಲ್ಯಾಬ್‌ ಟೆಕ್ನೀಷಿಯನ್, ಆಶಾ ಕಾರ್ಯಕರ್ತೆ ಸಸ್ಪೆಂಡ್..!

ಇಂತಹ ಪ್ರಕರಣ ಮರುಕಳಿಸದಂತೆ ಮತ್ತು ನ್ಯೂನತೆಗಳನ್ನು ಸರಿಪಡಿಸಲು ಕಠಿಣ ಕಾನೂನು ಜಾರಿಗೆ ತರಲಾಗುವುದು. ಅನೈತಿಕವಾಗಿ ಹಣ ಮಾಡುವುದು ವೈದ್ಯ ವೃತ್ತಿಗೆ ಮಾಡುವ ಅನ್ಯಾಯ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಜರುಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

Vijaya Karnataka Web 28 Oct 2020, 8:30 am
ಬೆಂಗಳೂರು: ಚಿಕ್ಕಪೇಟೆ ವಲಯ ವ್ಯಾಪ್ತಿಯ ಪೊಬ್ಬತ್ತಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿದ್ದ ಫಿವರ್‌ ಕ್ಲಿನಿಕ್‌ನಲ್ಲಿ ಜನರಿಂದ ಹಣ ಪಡೆದು ಕೊರೊನಾ ನೆಗೆಟಿವ್‌ ವರದಿ ನೀಡುತ್ತಿದ್ದ ಲ್ಯಾಬ್‌ ಟೆಕ್ನಿಷಿಯನ್‌, ಆಶಾ ಕಾರ್ಯಕರ್ತೆಯನ್ನು ಸೇವೆಯಿಂದ ವಜಾಗೊಳಿಸಿ, ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ.
Vijaya Karnataka Web FILE PHOTO: A lab technician works in the lab at Visby Medical in California
A lab technician works in the lab at Visby Medical in California, U.S., August 28, 2020. REUTERS/Nathan Frandino/File Photo


ಮದ್ಯಪ್ರಿಯರೇ ಇತ್ತ ಗಮನಿಸಿ.. ಇಂದು ನಾಳೆ ಬೆಂಗಳೂರಲ್ಲಿ ಎಣ್ಣೆ ಸಿಗಲ್ಲ..!

ಫಿವರ್‌ ಕ್ಲಿನಿಕ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲ್ಯಾಬ್‌ ಟೆಕ್ನಿಷಿಯನ್‌ ಮಹಾಲಕ್ಷ್ಮಿ ಮತ್ತು ಆಶಾ ಕಾರ್ಯಕರ್ತೆ ಶಾಂತಿ ಎಂಬುವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬಿಬಿಎಂಪಿ ಕೆಲಸ ಕಾರ್ಯಗಳಿಂದ ವಜಾಗೊಳಿಸಲಾಗಿದೆ. ಇವರು ಸಾರ್ವಜನಿಕರಿಂದ 2,500 ರೂ. ಹಣ ಪಡೆದು ನೆಗೆಟಿವ್‌ ವರದಿ ನೀಡುತ್ತಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಹಿಳೆಯರ ನೋವಿಗೆ ಸ್ಪಂದಿಸಲು ರಾಜಕೀಯದಲ್ಲಿ ಮಹಿಳೆಯರಿರಬೇಕು: ಡಿಕೆಶಿ

ಹಾಗೆಯೇ, ಈ ಆರೋಗ್ಯ ಕೇಂದ್ರದ ಉಸ್ತುವಾರಿಯಾಗಿ ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸದೆ ಕರ್ತವ್ಯಲೋಪವೆಸಗಿರುವ ಗುತ್ತಿಗೆ ವೈದ್ಯಾಧಿಕಾರಿ ಡಾ.ಶೈಲಜಾ ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ.

ಇನ್ನೂ ಉಪಯೋಗಿಸದ ಅಡುಗೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಾಯ..!

ಇಂತಹ ಪ್ರಕರಣ ಮರುಕಳಿಸದಂತೆ ಮತ್ತು ನ್ಯೂನತೆಗಳನ್ನು ಸರಿಪಡಿಸಲು ಕಠಿಣ ಕಾನೂನು ಜಾರಿಗೆ ತರಲಾಗುವುದು. ಅನೈತಿಕವಾಗಿ ಹಣ ಮಾಡುವುದು ವೈದ್ಯ ವೃತ್ತಿಗೆ ಮಾಡುವ ಅನ್ಯಾಯ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಜರುಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ