ಬೆಂಗಳೂರು: 'ಬುಲ್ ಬುಲ್ ದಾರಿ ಬಿಡಕ್ಕಿಲ್ವಾ' ಎಂದ ಲಾರಿ ಚಾಲಕನಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕಾಮಾಕ್ಷೀಪಾಳ್ಯದ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.
ರಸ್ತೆ ದಾಟುತ್ತಿದ್ದ ಮಹಿಳೆಯನ್ನು ಚುಡಾಯಿಸಿ ಧರ್ಮದೇಟು ತಿಂದ ಚಾಲಕನ ಹೆಸರು ಅಂಬರೀಶ್. ಇತ ಚಿಕ್ಕ ವಯಸ್ಸಿನಿಂದಲೂ ನಟ ಅಂಬರೀಶ್ ಅಭಿಮಾನಿಯಾಗಿದ ಎಂದು ತಿಳಿದುಬಂದಿದೆ.
'ಬುಲ್ ಬುಲ್ ದಾರಿ ಬಿಡಕ್ಕಿಲ್ವಾ' ಎಂದು ಚುಡಾಯಿಸಿದ್ದಕ್ಕೆ ರೊಚ್ಚಿಗೆದ್ದ ಮಹಿಳೆ ಲಾರಿಗೆ ಅಡ್ಡ ಹಾಕಿ, ಚಾಲಕನಿಗೆ ಧರ್ಮದೇಟು ನೀಡಿದ್ದಾರೆ. ಪೊಲೀಸರ ಎದುರೇ ಲಾರಿ ಚಾಲಕನ ಮುಖಕ್ಕೆ ಪಂಚ ಕೊಟ್ಟು ತಕ್ಕ ಉತ್ತರ ನೀಡಿದ್ದಾರೆ.
ಅಂಬರೀಶ್ ಕೆಎಂಎಫ್ಗೆ ಸೇರಿದ್ದ ನಂದಿನಿ ಮಿಲ್ಕ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸರ ಪರಿಶೀಲನೆ ವೇಳೆ ಚಾಲಕ ಮದ್ಯ ಸೇವಿಸಿದ್ದು ಬೆಳಕಿಗೆ ಬಂದಿದೆ. ಡ್ರಂಕ್ ಆ್ಯಂಡ್ ಡ್ರೈವ್ ಪ್ರಕರಣ ದಾಖಲಿಸಿಕೊಂಡ ಪೊಲೀಸರು, 'ಬುಲ್ ಬುಲ್ ದಾರಿ ಬಿಡಕ್ಕಿಲ್ವಾ' ಎಂದು ಮಹಿಳೆಯನ್ನು ಚುಡಾಯಿಸಿದ ಲಾರಿ ಚಾಲಕನಿಗೆ ದಂಡ ವಿಧಿಸಿದ್ದಾರೆ.