ಆ್ಯಪ್ನಗರ

ನಿಲ್ಲದ ತುಂತುರು ಮಳೆಗೆ ಜನ ಹೈರಾಣ, ಇನ್ನೂ ಕೆಲ ದಿನ ಇದೇ ಸ್ಥಿತಿ ಮುಂದುವರಿಕೆ

ವಾಯುಭಾರ ಕುಸಿತದ ಪರಿಣಾಮ ಇನ್ನೂ ಇರುವುದರಿಂದ ಎರಡು ದಿನ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿಸಾಧಾರಣ ಮಳೆ ಸುರಿಯುವ ಸಂಭವವಿದೆ. ಎರಡು ದಿನ ದಟ್ಟವಾದ ಮಂಜು ಕವಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Vijaya Karnataka Web 2 Dec 2019, 10:29 am
ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿಆಗಾಗ್ಗೆ ಮಳೆ ಸುರಿಯುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.
Vijaya Karnataka Web Bengaluru


ಶನಿವಾರ ರಾತ್ರಿಯಿಂದ ಆರಂಭವಾಗಿರುವ ಮಳೆ ಸೋಮವಾರವೂ ಮುಂದುವರೆದಿದ್ದು, ದಟ್ಟವಾದ ಮೋಡ ಕವಿದ ವಾತಾವರಣವಿದೆ. ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ಬಿಟ್ಟು ಬಿಟ್ಟು ಮಳೆ ಆರಂಭವಾಗಿದೆ.

ಕೆಲ ನಿಮಿಷಗಳವರೆಗೆ ಜೋರಾದ ಗಾಳಿಯೊಂದಿಗೆ ಭಾರಿ ಮಳೆ ಸುರಿದರೆ, ಮತ್ತೆ ಕೆಲಕಾಲ ತುಂತುರು ಮಳೆಯಾಗುತ್ತಿದೆ. ಭಾನುವಾರ ಮಳೆ ನಿಲ್ಲುವ ಖಚಿತತೆ ಇಲ್ಲದಿದ್ದರಿಂದ ಅನೇಕರು ಮನೆಯಲ್ಲೇ ದಿನ ಕಳೆಯುವಂತಾಯಿತು. ಮಳೆ ನಿಂತಿದೆ ಎಂದುಕೊಂಡು ಶಾಪಿಂಗ್‌ ಮಾಲ್‌, ಥಿಯೇಟರ್‌ಗಳಿಗೆ ತೆರಳಿದವರು ಬಿಟ್ಟು ಬಿಟ್ಟು ಬಂದ ಮಳೆಯಲ್ಲಿ ನೆನೆದು ಹೈರಾಣಾದರು.

ತಮಿಳುನಾಡಿನಲ್ಲಿ ಮಳೆ ಆರ್ಭಟ , ಐವರು ಬಲಿ

ಮಳೆ ಬರುವುದಿಲ್ಲ ಎಂದುಕೊಂಡೇ ಮನೆಯಿಂದ ಹೊರಟಿದ್ದ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ಒದ್ದೆಯಾಗಿ ಗಡಗಡ ನಡುಗಿದರು. ಭಾನುವಾರ ಇಡೀ ದಿನ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆಯಾಯಿತು.

ಸುರಿಯುತ್ತಲೇ ಇರುವ ಮಳೆ ತಾಪಮಾನವನ್ನು ಮತ್ತಷ್ಟು ಇಳಿಕೆ ಮಾಡಿದ್ದು ಭಾನುವಾರ ನಗರದ ಕೇಂದ್ರ ಭಾಗಗಳಲ್ಲಿ ಮಳೆ ಹಾಗೂ ತಂಪಾದ ಗಾಳಿಯಿಂದ ತಾಪಮಾನ 23.3 ಡಿಗ್ರಿಗೆ ಇಳಿದಿದೆ. ಎಚ್‌ಎಎಲ್‌ನಲ್ಲಿ 23.6 ಡಿಗ್ರಿ, ಕೆಐಎಎಲ್‌ನಲ್ಲಿ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ದ.ಕ. ಜಿಲ್ಲೆಯ ಹಲವಡೆ ಮಳೆ

ಆರೋಗ್ಯದ ಮೇಲೆ ದುಷ್ಪರಿಣಾಮ:
ನಿರಂತರವಾಗಿ ಸುರಿದ ಮಳೆಯು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇನ್ನೂ ಎರಡು ದಿನ ಮಳೆ ಬರುವ ಸಾಧ್ಯತೆ ಇರುವುದರಿಂದ ಜನರು ಆರೋಗ್ಯದ ಕಡೆ ಗಮನಹರಿಸಬೇಕಿದೆ. ದಿಢೀರನೆ ಮಳೆಯಾಗಿದ್ದರಿಂದ ಕೆಮ್ಮು, ನೆಗಡಿ, ತಲೆನೋವು ಮೊದಲಾದ ರೋಗಗಳು ಹರಡಲು ಆರಂಭವಾಗಿದೆ. ನಿಂತ ನೀರಿನಿಂದ ಸೊಳ್ಳೆಗಳ ಉತ್ಪತ್ತಿಗೂ ಅನುಕೂಲವಾದಂತಾಗಿದೆ. ಕೆಲ ದಿನಗಳ ಹಿಂದೆ ನಗರದಲ್ಲಿಇದ್ದ ಬಿಸಿಲು ಮರೆಯಾಗಿ ಮಳೆಯಾಗುತ್ತಿರುವುದರಿಂದ ಸಾಂಕ್ರಮಿಕ ರೋಗಗಳು ಸುಲಭವಾಗಿ ಹರಡಲು ಸಾಧ್ಯವಾಗಿದೆ.

ಮುಂಗಾರಲ್ಲ, ಹಿಂಗಾರಲ್ಲ.. ಆದ್ರೂ ಬಿತ್ತನೆ ಮಾಡ್ತಾರಲ್ಲ

ಮಳೆ ಪ್ರಮಾಣ:
ಅರಕೆರೆ ಒಂದರಲ್ಲೇ 19 ಮಿ.ಮೀ. ಮಳೆ ಸುರಿದಿದೆ. ಯಶವಂತಪುರ, ನಂದಿನಿ ಲೇಔಟ್‌, ಚಾಮರಾಜಪೇಟೆ, ರಾಜಾಜಿನಗರ, ಹೆಬ್ಬಾಳ, ಆರ್‌.ಟಿ.ನಗರ, ವಿ.ವಿ.ಪುರ, ವಿದ್ಯಾಪೀಠ, ಯಲಹಂಕ, ವಿದ್ಯಾರಣ್ಯಪುರ, ಕೋರಮಂಗಲ, ಎಚ್‌ಎಸ್‌ಆರ್‌ ಲೇಔಟ್‌, ಕೆ.ಆರ್‌.ಮಾರುಕಟ್ಟೆ, ಕಾಟನ್‌ಪೇಟೆ, ಮೆಜೆಸ್ಟಿಕ್‌, ಮಲ್ಲೇಶ್ವರ, ಕೆ.ಆರ್‌.ಪುರ, ಮಹದೇವಪುರ ಮೊದಲಾದ ಭಾಗಗಳಲ್ಲಿಇಡೀ ದಿನ ಜಿಟಿಜಿಟಿ ಮಳೆಯಾಯಿತು.

ವಾಯುಭಾರ ಕುಸಿತ : ರಾಜ್ಯದಲ್ಲಿ ಎರಡು ದಿನ ತುಂತುರು ಮಳೆ

ಬೊಮ್ಮನಹಳ್ಳಿ ವಲಯದಲ್ಲಿಸರಾಸರಿ 10 ಮಿ.ಮೀ., ರಾಜರಾಜೇಶ್ವರಿ ನಗರ ವಲಯದಲ್ಲಿ5 ಮಿ.ಮೀ., ಪಶ್ಚಿಮ ವಲಯದಲ್ಲಿ6 ಮಿ.ಮೀ., ದಕ್ಷಿಣ ವಲಯದಲ್ಲಿ10 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಹವಾಮಾನ ಇಲಾಖೆಯ ಕೇಂದ್ರಭಾಗದ ಮಳೆ ಮಾಪನ ಕೇಂದ್ರದಲ್ಲಿ6.4 ಮಿ.ಮೀ., ಎಚ್‌ಎಎಲ್‌ನಲ್ಲಿ4.5 ಮಿ.ಮೀ., ಕೆಐಎಎಲ್‌ನಲ್ಲಿ1 ಮಿ.ಮೀ. ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ