ಆ್ಯಪ್ನಗರ

ಮೆಟ್ರೊ ಕಲಾ ಕೇಂದ್ರ ಪಾರ್ಕ್‌ಗೆ 25 ಸಿಸಿ ಕ್ಯಾಮೆರಾ ಕಣ್ಗಾವಲು

ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾಕೇಂದ್ರದ ಉದ್ಯಾನವನ್ನು ಸುರಕ್ಷಿತ ಜಾಗವಾಗಿಸಲು 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಸಂಜೆ 7 ಗಂಟೆ ನಂತರ ಉದ್ಯಾನ ಪ್ರವೇಶವನ್ನು ನಿಷೇಧಿಸಲಾಗಿದೆ.

Vijaya Karnataka 30 Oct 2018, 5:00 am
ಬೆಂಗಳೂರು : ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾಕೇಂದ್ರದ ಉದ್ಯಾನವನ್ನು ಸುರಕ್ಷಿತ ಜಾಗವಾಗಿಸಲು 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಜತೆಗೆ ಸಂಜೆ 7 ಗಂಟೆ ನಂತರ ಉದ್ಯಾನ ಪ್ರವೇಶವನ್ನು ನಿಷೇಧಿಸಲಾಗಿದೆ.
Vijaya Karnataka Web metro kala kendra gets 25 cc tv cameras
ಮೆಟ್ರೊ ಕಲಾ ಕೇಂದ್ರ ಪಾರ್ಕ್‌ಗೆ 25 ಸಿಸಿ ಕ್ಯಾಮೆರಾ ಕಣ್ಗಾವಲು


ಇತ್ತೀಚೆಗೆ ಉದ್ಯಾನದಲ್ಲಿ ನಡೆದ ಕಳ್ಳತನ ಹಾಗೂ ಪ್ರೇಮಿಗಳ ಕಿರಿಕಿರಿಯಿಂದಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಜು.1 ರಂದು ಸಂಜೆ ಉದ್ಯಾನಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಡ್ಯಾಗರ್‌ ತೋರಿಸಿ ಮಹಿಳೆಯನ್ನು ಬೆದರಿಸಿ ಚಿನ್ನದ ಸರ ಲೂಟಿ ಮಾಡಿದ್ದ. ಈತನನ್ನು ಸೆರೆಹಿಡಿದ ಬಳಿಕ ಪೊಲೀಸರು ಹೆಚ್ಚು ಸುರಕ್ಷತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಹೀಗಾಗಿ ಉದ್ಯಾನದ ಸುತ್ತ 25 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಉದ್ಯಾನದಲ್ಲಿ ಪ್ರೇಮಿಗಳು ಬಂದು ಕುಳಿತು ರೊಮ್ಯಾನ್ಸ್‌ ಮಾಡುತ್ತಾರೆ ಎಂಬ ದೂರು ಕೂಡಾ ಕೇಳಿಬಂದಿದೆ. ಇವೆಲ್ಲ ಸಮಸ್ಯೆಗಳಿಗೆ ಸಿಸಿಟಿವಿ ಕ್ಯಾಮರಾದಿಂದ ಕಡಿವಾಣ ಬೀಳಲಿದೆ.

ಸದಾ ಸಾಂಸ್ಕೃತಿಕ, ಕಲಾ ಕಾರ್ಯಕ್ರಮಗಳು ನಡೆಯುವ ರಂಗೋಲಿ ಕಲಾ ಕೇಂದ್ರದಲ್ಲಿ ಜನರ ಓಡಾಟ ಹೆಚ್ಚಿದೆ. ಭಾನುವಾರ ಬಂತೆಂದರೆ ಉತ್ಸವದ ಮಾದರಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಸಂಜೆ ಮಕ್ಕಳೊಂದಿಗೆ ಬರುವ ಮಹಿಳೆಯರು ಕಲಾಕೇಂದ್ರದ ಗ್ಯಾಲರಿಗಳಲ್ಲಿ ಮಕ್ಕಳನ್ನು ಆಟವಾಡಲು ಬಿಡುತ್ತಾರೆ. ಕೆಲವರು ಮೇಲಿನ ಉದ್ಯಾನದಲ್ಲಿ ವಿಹಾರ ಮಾಡುತ್ತಾರೆ. ಆದರೆ ಇತ್ತೀಚೆಗೆ ಕಳ್ಳತನವಾಗಿದ್ದರಿಂದ ಈ ಪ್ರದೇಶದ ಮೇಲೂ ಹದ್ದುಗಣ್ಣಿಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಸಿಸಿಟಿವಿ ಕ್ಯಾಮರಾಗಳನ್ನು ಸಂಪರ್ಕಿಸಿರುವ ಕಂಪ್ಯೂಟರ್‌ ನಿರ್ವಹಣಾ ಕೇಂದ್ರದ ಕಚೇರಿಯಲ್ಲಿರುತ್ತದೆ. ಇಡೀ ದಿನ ಇದನ್ನು ನೋಡಿಕೊಂಡು ಕಲಾಕೇಂದ್ರದ ಮೇಲೆ ಕಣ್ಣಿಡಲಾಗುತ್ತದೆ. ಏನಾದರೂ ಅನುಮಾನ ಬಂದರೆ ಕೂಡಲೇ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತದೆ. ಕಳ್ಳತನದ ಘಟನೆ ನಡೆದ ಬಳಿಕ ಸಂಜೆ 7 ಗಂಟೆವರೆಗೆ ಮಾತ್ರ ಉದ್ಯಾನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಸಂಜೆ 7 ಗಂಟೆಯಾದ ಕೂಡಲೇ ಉದ್ಯಾನದಲ್ಲಿ ಕುಳಿತ ಜನರನ್ನು ಹೊರಗೆ ಕಳುಹಿಸಲಾಗುತ್ತದೆ. ಬಳಿಕ ಗೇಟ್‌ ಮುಂಭಾಗ ಬ್ಯಾರಿಕೇಡ್‌ ಹಾಕಿ ಪ್ರವೇಶ ನಿಷೇಧಿಸಲಾಗುತ್ತದೆ. ಕಲಾ ಕೇಂದ್ರದ ಗ್ಯಾಲರಿಯ ಮುಂಭಾಗದಲ್ಲೂ ಮಕ್ಕಳು ಆಟವಾಡುತ್ತಿರುತ್ತಾರೆ. ಇಲ್ಲಿಂದಲೂ ಹೋಗುವಂತೆ ಸೂಚನೆ ನೀಡಲಾಗುತ್ತದೆ.

''ಉದ್ಯಾನದಲ್ಲಿ ಹಿರಿಯ ನಾಗರಿಕರು ಹಾಗೂ ಕುಟುಂಬ ಸಮೇತರಾಗಿ ಬರುವವರು ವಿಹರಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಅನೇಕ ಯುವಕ ಯುವತಿಯರು ಇಲ್ಲಿ ಬಂದು ವಾತಾವರಣ ಹಾಳು ಮಾಡುತ್ತಾರೆ. ಕಳ್ಳತನದ ಘಟನೆಯ ನಂತರ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ,'' ಎಂದು ಸಿಬ್ಬಂದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ