ಆ್ಯಪ್ನಗರ

ಐಪಿಎಲ್‌ಗೆ ಮೆಟ್ರೊ ಸೇವೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿರುವ ದಿನಗಳಂದು ‘ನಮ್ಮ ಮೆಟ್ರೊ’ ಸಂಚಾರ ಅವಧಿಯನ್ನು ರಾತ್ರಿ 11 ರಿಂದ 12.30 ಗಂಟೆವರೆಗೆ ವಿಸ್ತರಿಸಲಾಗಿದೆ. ಏ.13, 21, 25, 29 ಹಾಗೂ ಮೇ 1, 17 ರಂದು ಐಪಿಎಲ್‌ ನಡೆಯಲಿದ್ದು, ಈ ದಿನಗಳಂದು ಹೆಚ್ಚುವರಿ ಸೇವೆ ದೊರೆಯಲಿದೆ.

Vijaya Karnataka Web 13 Apr 2018, 10:24 am
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿ ನಡೆಯಲಿರುವ ದಿನಗಳಂದು ‘ನಮ್ಮ ಮೆಟ್ರೊ’ ಸಂಚಾರ ಅವಧಿಯನ್ನು ರಾತ್ರಿ 11 ರಿಂದ 12.30 ಗಂಟೆವರೆಗೆ ವಿಸ್ತರಿಸಲಾಗಿದೆ.
Vijaya Karnataka Web metro

ಏ.13, 21, 25, 29 ಹಾಗೂ ಮೇ 1, 17 ರಂದು ಐಪಿಎಲ್‌ ನಡೆಯಲಿದ್ದು, ಈ ದಿನಗಳಂದು ಹೆಚ್ಚುವರಿ ಸೇವೆ ದೊರೆಯಲಿದೆ.

ಹೆಚ್ಚುವರಿ ಅವಧಿಯಲ್ಲಿ ಎಲ್ಲ ನಿಲ್ದಾಣಗಳಲ್ಲಿ 15 ನಿಮಿಷಕ್ಕೊಂದು ರೈಲು ದೊರೆಯಲಿದೆ. ರಾತ್ರಿ 12.30 ಗೆ ಕೊನೆ ರೈಲು ಕಬ್ಬನ್‌ ಉದ್ಯಾನ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದ ಕಡೆ ಹೊರಡಲಿದೆ.
ಪೇಪರ್‌ ಟಿಕೆಟ್‌ ಪ್ರತಿ ಪಂದ್ಯ ಮುಗಿದ ಬಳಿಕ ಟಿಕೆಟ್‌ಗಾಗಿ ಸಾಲು ನಿಲ್ಲುವುದನ್ನು ತಪ್ಪಿಸಲು 50 ರೂ. ದರದ ಪೇಪರ್‌ ಟಿಕೆಟ್‌ ನೀಡಲಾಗುತ್ತಿದೆ.

ಪ್ರತಿ ದಿನ ಪಂದ್ಯ ಆರಂಭವಾಗುವ ಸಮಯಕ್ಕೆ ಯಾವುದೇ ನಿಲ್ದಾಣದಿಂದ ಪೇಪರ್‌ ಟಿಕೆಟ್‌ ಖರೀದಿಸಬಹುದು. ಆದರೆ ಇದನ್ನು ಕಬ್ಬನ್‌ ಉದ್ಯಾನ ಹಾಗೂ ಎಂ.ಜಿ.ರಸ್ತೆ ನಿಲ್ದಾಣದಿಂದ ಪ್ರಯಾಣಿಸುವವರು ಮಾತ್ರ ಬಳಸಬೇಕು. ರಾತ್ರಿ 11 ರ ನಂತರ ಬಳಸಲು ಅನುಕೂಲವಾಗುವಂತೆ ಇದನ್ನು ನೀಡಲಾಗುತ್ತಿದೆ. ಈ ಟಿಕೆಟ್‌ ಅನ್ನು ಒಂದು ಬಾರಿ ಮಾತ್ರ ಬಳಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ