ಆ್ಯಪ್ನಗರ

‘ವಿಕ’ ಕಚೇರಿಯಲ್ಲಿ ಮಿಜೋ ವಿದ್ಯಾರ್ಥಿಗಳ ಕಲರವ

ಈಶಾನ್ಯ ರಾಜ್ಯ ಮಿಜೋರಾಂನಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡ 'ವಿಜಯ ಕರ್ನಾಟಕ' ಕಚೇರಿಯಲ್ಲಿ ಪತ್ರಿಕೆ ಮಾಧ್ಯಮ ಕುರಿತು ಮಾಹಿತಿ ಪಡೆದು ಪುಳಕಿತಗೊಂಡರು.

Vijaya Karnataka Web 1 Feb 2017, 9:00 am

ವಿಕ ಸುದ್ದಿಲೋಕ ಬೆಂಗಳೂರು

ಈಶಾನ್ಯ ರಾಜ್ಯ ಮಿಜೋರಾಂನಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡ 'ವಿಜಯ ಕರ್ನಾಟಕ' ಕಚೇರಿಯಲ್ಲಿ ಪತ್ರಿಕೆ ಮಾಧ್ಯಮ ಕುರಿತು ಮಾಹಿತಿ ಪಡೆದು ಪುಳಕಿತಗೊಂಡರು.

ಶೈಕ್ಷಣಿಕ ವರ್ಷದ ಅಧ್ಯಯನ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಮಿಜೋ ವಿದ್ಯಾರ್ಥಿಗಳ ತಂಡ ಮಂಗಳವಾರ ವಿಕ ಕಚೇರಿಗೆ ಭೇಟಿ ನೀಡಿ, ಸಂಪಾದಕೀಯ ವಿಭಾಗದಲ್ಲಿನ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡಿತು. ಪತ್ರಿಕೆಯ ಮಹತ್ವ, ಪ್ರಸರಣ, ಸುದ್ದಿ ಸಂಗ್ರಹ, ಪುಟ ವಿನ್ಯಾಸ ಹಾಗೂ ನಿರ್ವಹಣೆ ಕುರಿತು ಕಚೇರಿಯ ಪ್ರಮುಖರಿಂದ ಮಾಹಿತಿ ಪಡೆದರು.

ಹತ್ತು ದಿನಗಳ ಅಧ್ಯಯನ ಪ್ರವಾಸದಲ್ಲಿ ವಿದ್ಯಾರ್ಥಿಗಳ ತಂಡವು ಬೆಂಗಳೂರು ಹಾಗೂ ಮೈಸೂರಿನ ನಾನಾ ಮಾಧ್ಯಮ ಸಂಸ್ಥೆಗಳಿಗೆ ಭೇಟಿ ನೀಡಿ ಅನುಭವ ಪಡೆಯಲಿದ್ದಾರೆ. ಫೆ.8ರ ವರೆಗೆ ರಾಜ್ಯದಲ್ಲಿ ಉಳಿದುಕೊಳ್ಳಲಿರುವ ತಂಡವು ವಾರ್ತಾ ಇಲಾಖೆ, ಮಾಧ್ಯಮ ಸಂಸ್ಥೆಗಳು, ಹಿರಿಯ ಪತ್ರಕರ್ತರು, ಪ್ರಾದೇಶಿಕ ಭಾಷಾ ಪತ್ರಿಕೆಗಳಲ್ಲಿನ ವೈವಿಧ್ಯತೆಯನ್ನು ಅರಿತುಕೊಳ್ಳುವ ಯತ್ನ ಮಾಡಲಿದೆ. ಮಿಜೋರಾಂ ವಿವಿಗೆ ಸೇರಿದ 18 ವಿದ್ಯಾರ್ಥಿಗಳು ತಮ್ಮ ಮೂವರು ಅಧ್ಯಾಪಕ ವೃಂದದೊಂದಿಗೆ ಕನ್ನಡ ಪತ್ರಿಕೆಯ ಬೆಳವಣಿಗೆ ಕುರಿತು ಮಾಹಿತಿ ಹಂಚಿಕೊಂಡರು.

ಬೆಂಗಳೂರಿನ ಮಾದರಿ ಅಳವಡಿಕೆಗೆ ಯತ್ನ

ತಂಡದ ನೇತೃತ್ವ ವಹಿಸಿರುವ ಮಿಜೋರಾಂ ವಿವಿ ಮಾಧ್ಯಮ ವಿಭಾಗದ ಪ್ರಾಧ್ಯಾಪಕಿ ರೂತ್‌ ''ಈಶಾನ್ಯ ಭಾಗದಲ್ಲಿನ ಮಾಧ್ಯಮ ರಂಗ ನಿಧಾನವಾಗಿ ಮುಖ್ಯವಾಹಿನಿಗೆ ಬರುತ್ತಿದೆ. ಮಿಜೋರಾಂನಲ್ಲಿ 100 ನಿಯತಕಾಲಿಕೆಗಳಿದ್ದು, ಮಿಜೋ ಭಾಷೆಯದ್ದೇ ಪ್ರಾಬಲ್ಯವಿದೆ,'' ಎಂದು ಪ್ರತಿಕ್ರಿಯಿಸಿದರು.

ವಾರ್ತಾ ಇಲಾಖೆಯ ನಿರ್ದೇಶಕ ವಿಶುಕುಮಾರ್‌, ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ಪತ್ರಕರ್ತ ಖಾದ್ರಿ ಅಚ್ಯುತನ್‌ ಅವರು ರಾಜ್ಯದ ಮಾಧ್ಯಮ ಕ್ಷೇತ್ರದ ಕುರಿತು ವಿದ್ಯಾರ್ಥಿಗಳ ತಂಡಕ್ಕೆ ಮಾರ್ಗದರ್ಶನ ನೀಡಿದರು.

Vijaya Karnataka Web mezoram students in vijaya karnataka office
‘ವಿಕ’ ಕಚೇರಿಯಲ್ಲಿ ಮಿಜೋ ವಿದ್ಯಾರ್ಥಿಗಳ ಕಲರವ

ಬೆಂಗಳೂರಿನ ಕಟ್ಟಡಗಳ ವಾಸ್ತುಶಿಲ್ಪ ಸುಂದರವಾಗಿದೆ. ಇಲ್ಲಿನ ಜನ ಸ್ನೇಹಮಯಿಗಳು. ಈಶಾನ್ಯ ಜನರಿಗೆ ಸುರಕ್ಷಿತ ನಗರವೂ ಆಗಿದೆ. ಬಿಎಂಟಿಸಿ ಪ್ರಯಾಣ ಖುಷಿ ನೀಡಿದ್ದು, ಟ್ರಾಫಿಕ್‌ ಜಾಮ್‌ ಮಾತ್ರ ಕೆಂಗೆಡುವಂತೆ ಮಾಡುತ್ತದೆ. 'ವಿಕ' ಕಚೇರಿಗೆ ನೀಡಿದ್ದ ಭೇಟಿ ಅವಿಸ್ಮರಣೀಯ''.

- ಕೊಲೀಕೆಂಟ್‌, ಮಿಜೋ ವಿದ್ಯಾರ್ಥಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ