ಆ್ಯಪ್ನಗರ

ಜನರಿಗೊಂದು ಕಾನೂನು, ಡಿಕೆಶಿಗೊಂದು ಕಾನೂನು ಮಾಡೋಕಾಗುತ್ತಾ? ಸಚಿವ ಅಶ್ವತ್ಥ ನಾರಾಯಣ್‌ ಚಾಟಿ

'ಎಲ್ಲರಿಗೂ ಕೂಡ ಒಂದೇ ಕಾನೂನು ಅನ್ವಯ ಆಗುತ್ತದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ಡಿ. ಕೆ. ಶಿವಕುಮಾರ್‌ಗೆ ಒಂದು ಕಾನೂನಾ..? ಡಿಕೆ ಶಿವಕುಮಾರ್‌ಗೆ ಪ್ರತ್ಯೇಕ ಕಾನೂನು ಮಾಡೋದಕ್ಕಾಗುತ್ತಾ?' - ಅಶ್ವತ್ಥ ನಾರಾಯಣ್‌ ಸವಾಲು

Lipi 16 Jan 2022, 4:33 pm

ಹೈಲೈಟ್ಸ್‌:

  • ಕಾನೂನಿನ ಅಡಿಯಲ್ಲೇ ಎಲ್ಲರೂ ಬದುಕಿ ಬಾಳಬೇಕು
  • ಹಲವಾರು ಸ್ಥಾನ ಅಲಂಕರಿಸಿದ ಡಿ. ಕೆ. ಶಿವಕುಮಾರ್‌ ಬೇಜವಾಬ್ದಾರಿ ಹೇಳಿಕೆ ಕೊಡಬಾರದು
  • ಡಿ. ಕೆ. ಶಿವಕುಮಾರ್ ಅವರ ಭಾಗದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗ್ತಿದೆ: ಸಚಿವ ಡಾ. ಅಶ್ವತ್ಥ ನಾರಾಯಣ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web dk shivakumar and ashwath narayan
ಜನರಿಗೊಂದು ಕಾನೂನು, ಡಿಕೆಶಿಗೊಂದು ಕಾನೂನು ಮಾಡೋಕಾಗುತ್ತಾ? ಸಚಿವ ಅಶ್ವತ್ಥ ನಾರಾಯಣ್‌ ಚಾಟಿ
ಬೆಂಗಳೂರು: ಡಿ. ಕೆ. ಶಿವಕುಮಾರ್‌ ಆಗ್ಲಿ, ಯಾರೇ ಆಗ್ಲಿ.. ಕಾನೂನನ್ನು ಗೌರವಿಸಬೇಕು. ಸಾಮಾನ್ಯ ಜನರಿಗೆ ಒಂದು ಕಾನೂನು, ಡಿ. ಕೆ. ಶಿವಕುಮಾರ್‌ಗೆ ಒಂದು ಕಾನೂನು ಮಾಡೋಕಾಗುತ್ತಾ? ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ್‌ ಪ್ರಶ್ನಿಸಿದರು.
ಪಾದಯಾತ್ರೆ ಬಳಿಕ ಡಿಕೆ ಶಿವಕುಮಾರ್‌ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಮೊದಲೇ ಗುಂಡು ಹೊಡೆಯೋದು, ಏನು ಮಾಡಿದ್ರೂ ಜಯಿಸಿ ಕೊಳ್ತೀವಿ ಅನ್ನೋದು ಅವರ ಲೆಕ್ಕಾಚಾರ ಎಂದು ಕಿಡಿಕಾರಿದರು.

ಕಾನೂನಿನ ಅಡಿಯಲ್ಲೇ ಎಲ್ಲರೂ ಬದುಕಿ ಬಾಳಬೇಕು. ಹಲವಾರು ಸ್ಥಾನ ಅಲಂಕರಿಸಿದ ಡಿ. ಕೆ. ಶಿವಕುಮಾರ್‌ ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡಬಾರದು ಎಂದು ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲರಿಗೂ ಕೂಡ ಒಂದೇ ಕಾನೂನು ಅನ್ವಯ ಆಗುತ್ತದೆ. ಸಾಮಾನ್ಯ ಜನರಿಗೆ ಒಂದು ಕಾನೂನು, ಡಿ. ಕೆ. ಶಿವಕುಮಾರ್‌ಗೆ ಒಂದು ಕಾನೂನಾ..? ಡಿಕೆ ಶಿವಕುಮಾರ್‌ಗೆ ಪ್ರತ್ಯೇಕ ಕಾನೂನು ಮಾಡೋದಕ್ಕಾಗುತ್ತಾ? ಎಂದು ಪ್ರಶ್ನಿಸಿದ ಅವರು, ಡಿ. ಕೆ. ಶಿವಕುಮಾರ್ ಅವರ ಭಾಗದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗ್ತಿದೆ, ಹೇಗೆ ಸಾಮಾನ್ಯ ಜನರ ಧ್ವನಿ ಧ್ವಂಸ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಸಚಿವರು ಚಾಟಿ ಬೀಸಿದರು.

ಸಚಿವ ಅಶ್ವತ್ಥ ನಾರಾಯಣ್ ವರ್ತನೆ ಖಂಡಿಸಿ ಮೈಸೂರು ಪಾಲಿಕೆ ಸದಸ್ಯ ಪ್ರೊಟೆಸ್ಟ್
ಇಂತಹ ಹೇಳಿಕೆಗಳು ಸೂಕ್ತವಲ್ಲ, ಡಿ. ಕೆ. ಶಿವಕುಮಾರ್‌ ಇಂತಹ ಹೇಳಿಕೆಗಳಿಂದ ಆಚೆ ಬರಬೇಕು ಎಂದು ಸಚಿವ ಅಶ್ವತ್ಥ ನಾರಾಯಣ್ ಆಗ್ರಹಿಸಿದರು. ಇನ್ನು, ಬಿಜೆಪಿ ನಾಯಕರಿಗೆ ಕಾನೂನು ಅನ್ವಯ ಆಗಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥ ನಾರಾಯಣ, ಕಾರ್ಯಕ್ರಮದಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ಇದೆ. ಈ ಸಮಯದಲ್ಲಿ ಮಾಸ್ಕ್ ತೆಗೆಯಲು ಅವಕಾಶ ಇದೆ. ಮಾಸ್ಕ್ ಹಾಕದೇ ಇರುವವರ ಮೇಲೆ ಕೇಸ್ ದಾಖಲು ಮಾಡುವ ಅವಕಾಶ ಇದೆ. ಫೋಟೋಗಾಗಿ ಮಾಸ್ಕ್ ತೆಗೆದಿರುವುದನ್ನು ಉದಾಹರಣೆಗೆ ತೆಗದುಕೊಳ್ಳಬಾರದು ಎಂದು ಬಿಜೆಪಿ ನಾಯಕರನ್ನು ಸಮರ್ಥಿಸಿಕೊಂಡರು.

ಡಿ. ಕೆ. ಸುರೇಶ್ 'ರೌಡಿಸಂ' ಸರಿಯಲ್ಲ, ಸಚಿವ ಅಶ್ವತ್ಥ್ ನಾರಾಯಣ ಪರ ಸೋಮಶೇಖರ್ ಬ್ಯಾಟಿಂಗ್
ಇದೇ ವೇಳೆ, ರೂಬೆಲ್ಲಾ ಲಸಿಕೆಯಿಂದ ಬೆಳಗಾವಿಯಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ ವಿಚಾರವಾಗಿ ಮಾತನಾಡಿದ ಅವರು, ಲಸಿಕೆಯಿಂದ ಆಗಿದೆಯೋ, ಏನು ಅಂತ ನೋಡಬೇಕು. ತನಿಖೆಯಿಂದ ಗೊತ್ತಾಗಲಿದೆ. ಕ್ಲಿನಿಕಲ್ ಟೆಸ್ಟಿಂಗ್‌ ಮತ್ತು ಮರಣೋತ್ತರ ಪರೀಕ್ಷೆಯ ಬಳಿಕ ಕಾರಣ ತಿಳಿಯುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ