ಆ್ಯಪ್ನಗರ

ಮುನಿರತ್ನಗೆ ಒಲಿಯುತ್ತೆ ಮಂತ್ರಿ ಸ್ಥಾನ! ಸಚಿವ ನಾರಾಯಣಗೌಡ ಭವಿಷ್ಯ

ಆರ್‌ಆರ್‌ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸಚಿವ ಸ್ಥಾನ ಸಿಗಲಿದೆ ಎಂದು ಸಚಿವ ಕೆ.ಸಿ ನಾರಾಯಣಗೌಡ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು ಈ ಕುರಿತಾಗಿ ಹೇಳಿದ್ದಿಷ್ಟು.

Vijaya Karnataka Web 20 Oct 2020, 12:00 pm
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ರಚನೆಯಲ್ಲಿ ಮುನಿರತ್ನ ಅವರ ಪಾತ್ರ ದೊಡ್ಡದಿದ್ದು ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಸಚಿವ ಕೆಸಿ ನಾರಾಯಣ ಗೌಡ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ನಾಗರಭಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮುನಿರತ್ನ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
Vijaya Karnataka Web kc narayanagowda


ಮುನಿರತ್ನ ಹಗಲು- ರಾತ್ರಿ ಜನರ ಸೇವೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಮಂತ್ರಿ ಆಗುತ್ತಾರೆ. ಹೀಗಾಗಿ ಅತಿ ಹೆಚ್ಚು ಮತಗಳಿಂದ ಮುನಿರತ್ನ ಅವರನ್ನ ಗೆಲ್ಲಿಸಬೇಕು ಸಚಿವ ಡಾ. ನಾರಾಯಣಗೌಡ ಮನವಿ ಮಾಡಿಕೊಂಡರು.

ಬಿಜೆಪಿಯಲ್ಲಿ ಮತ್ತೆ ನಾಯಕತ್ವ ಬದಲಾವಣೆ ಸದ್ದು, ಬಿಎಸ್‌ವೈಗೆ ಆಪ್ತರದ್ದೇ ಕಾಟ!

ಕುಸುಮಾ ವಿರುದ್ಧ ಟೀಕೆ

ಆರ್ ಆರ್ ನಗರ ಕ್ಷೇತ್ರದಲ್ಲಿರುವ ಮಂಡ್ಯ ಜಿಲ್ಲೆಯ ಜನರನ್ನ ಒಂದೆಡೆ ಸೇರಿಸಿ ಸಚಿವರು ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ನಿಜ ಗುಣ ಏನೆಂದು ಜನರಿಗೆ ತಿಳಿಸಿದ ಸಚಿವರು, ಬಡ ಕುಟುಂಬದಲ್ಲಿ ಹುಟ್ಟಿದರೂ, ಕಷ್ಟ ಪಟ್ಟು ಮಗನನ್ನು ಓದಿಸಿ ಐಎಎಸ್ ಮಾಡಿಸಿದರು. ಆದ್ರೆ ಆ ವ್ಯಕ್ತಿ ಮೃತ ಹೊಂದಿದ ಸಂದರ್ಭದಲ್ಲಿ ಅವರ ಬಳಿ ಅವರ ಪತ್ನಿ ಇರಲೇ ಇಲ್ಲ. ಆ ಬಳಿಕ ಅವರ ತಂದೆತಾಯರನ್ನೂ ಸರಿಯಾಗಿ ನೋಡಿಕೊಳ್ಳದೆ ದೂರವಿದ್ದಾರೆ‌ ಎಂದು ಆರೋಪಿಸಿದರು.

ತಮ್ಮ ಕುಟುಂಬದವರನ್ನೇ ಸರಿಯಾಗಿ ನೋಡಿಕೊಳ್ಳದವರು, ಕ್ಷೇತ್ರದ ಜನರನ್ನ ನೋಡಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದ ನಾರಾಯಣಗೌಡ, ಮುನಿರತ್ನ ಪ್ರತಿ ಕ್ಷಣ ಜನರೊಂದಿಗೆ ಇರುತ್ತಾರೆ‌. ಅವರನ್ನ ಗೆಲ್ಲಿಸಿದರೆ ಕೆಲವೇ ದಿನಗಳಲ್ಲಿ ಸಚಿವರಾಗುತ್ತಾರೆ. ಪಕ್ಷದ ಎಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಆರ್‌ಆರ್‌ ನಗರ ಬೈಎಲೆಕ್ಷನ್: ಸವಾಲಾದ ಪಕ್ಷಾಂತರ ಪರ್ವ!

ಕೇಂದ್ರದಲ್ಲಿ ಸರಿಯಾದ ನಾಯಕರೇ ಇಲ್ಲದ ಪಕ್ಷ ಕಾಂಗ್ರೆಸ್. ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಪ್ರಧಾನಿ ಮೋದಿ ಅವರಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ಅವರೂ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಕೈ ಬಲಪಡಿಸಲು ಮುನಿರತ್ನ ಅವರನ್ನ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಮಂಡ್ಯ ಜಿಲ್ಲೆಯಲ್ಲಿ 7 ಕ್ಕೆ ಏಳೂ ಕ್ಷೇತ್ರವನ್ನ ಗೆಲ್ಲಿಸಿಕೊಟ್ಟರೂ ಯಾವುದೆ ರೀತಿ ಅಭಿವೃದ್ಧಿ ಮಾಡಿಲ್ಲ. 7 ಸಾವಿರ ಕೋಟಿ ಅಲ್ಲ, 70 ಕೋಟಿ ರೂಪಾಯಿಯನ್ನೂ ಕೊಟ್ಟಿಲ್ಲ. ಆ ಕಾರಣಕ್ಕಾಗಿಯೇ ನಾವೆಲ್ಲ ಒಟ್ಟಾಗಿ ಬಿಜೆಪಿಗೆ ಬಂದು ಅಭಿವೃದ್ಧಿಗೆ ಕೈ ಜೋಡಿಸಿದ್ದೇವೆ. ಮುಂದೆ ಮಂಡ್ಯದಲ್ಲೂ ಬಿಜೆಪಿ 4 ಕ್ಕಿಂತ ಹೆಚ್ಚು ಸ್ಥಾ‌ನ ಗೆಲ್ಲಲಿದೆ. ಈಗ ಶಿರಾ ಹಾಗೂ ಆರ್ ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಸಚಿವ ಡಾ. ನಾರಾಯಣ ಗೌಡ ಮತಪ್ರಚಾರದ ಭಾಷಣದಲ್ಲಿ ಹೇಳಿದರು.

ಸಭೆಯಲ್ಲಿ ತುರುವೆಕೆರೆ ಶಾಸಕ ಜಯರಾಮ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಮನ್ಮುಲ್ ನಿರ್ದೇಶಕ ಸ್ವಾಮಿ ಗೌಡ, ಜಿ.ಪಂ. ಸದಸ್ಯ ಶಿವಣ್ಣ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ