ಆ್ಯಪ್ನಗರ

ಗಲಭೆಕೋರರಿಗೆ 'ನಮ್ಮ ವೋಟರ್ಸ್' ಎಂಬ ಮಮತೆ ತೋರಬಾರದು: ಸುರೇಶ್ ಕುಮಾರ್

ರಕ್ಕಸರ ಈ ಅಟ್ಟಹಾಸವನ್ನು ರಾಜಕಾರಣಿಗಳು ಪಕ್ಷಬೇಧ ಮರೆತು ಖಂಡಿಸಿ ದುರುಳರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂತಹ ಕಿಡಿಗೇಡಿಗಳಿಗೆ ನಮ್ಮ ಮತದಾರರು ಎನ್ನುವ ಮಮತೆ ತೋರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 13 Aug 2020, 9:53 am
ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯಲ್ಲಿ ನಡೆದ ಗಲಭೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಈ ಘಟನೆ ರಾಜ್ಯ ರಾಜಧಾನಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.
Vijaya Karnataka Web SURESH KUMAR


'ಪಬ್ಲಿಕ್ ಪ್ರಾಪರ್ಟಿಗಳನ್ನು ನಾಶ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕುವ ಕಾನೂನು ತಕ್ಷಣ ಜಾರಿ

ರಕ್ಕಸರ ಈ ಅಟ್ಟಹಾಸವನ್ನು ರಾಜಕಾರಣಿಗಳು ಪಕ್ಷಬೇಧ ಮರೆತು ಖಂಡಿಸಿ ದುರುಳರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಂತಹ ಕಿಡಿಗೇಡಿಗಳಿಗೆ ನಮ್ಮ ಮತದಾರರು ಎನ್ನುವ ಮಮತೆ ತೋರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

'ಗಲಭೆಕೋರರಿಗೆ ಹಿರಿಯರೇ ಬುದ್ಧಿ ಹೇಳಬೇಕಲ್ವಾ? ನನ್ನ ಹೇಳಿಕೆಯಲ್ಲಿ ತಪ್ಪೇನಿದೆ?: ಸಿದ್ದರಾಮಯ್ಯ

ಈ ಕುರಿತು ತಮ್ಮ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಸುರೇಶ್ ಕುಮಾರ್, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುವವರನ್ನು ಗಲಭೆಕೋರರು, ದಂಗೆಕೋರರು, ಹಲ್ಲೆಕೋರರು, ಶಾಂತಿ‌ಕದಡುವ ಕಿಡಿಗೇಡಿಗಳು, ಸಮಾಜದ್ರೋಹಿಗಳು ಎಂದು ಬಗೆಯ ಬೇಕೇ ಹೊರತು "#ನಮ್ಮ_ವೋಟರ್ಸ್" ಎಂಬ ಮಮತೆ ತೋರಬಾರದು ಎಂದು ಹೇಳಿದ್ದಾರೆ.

'ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು

ಸಚಿವ ಸುರೇಶ್ ಕುಮಾರ್ ಅವರ ಫೇಸ್‌ಬುಕ್‌ ಪೋಸ್ಟ್ ಹೀಗಿದೆ.

1) ಕೋಮು ಗಲಭೆಗೆ ಯತ್ನ.
2) ಸಾರ್ವಜನಿಕರ ಮೇಲೆ ಕಲ್ಲು ತೂರಾಟ.
3) ಸಾರ್ವಜನಿಕ ಆಸ್ತಿಗಳಿಗೆ ಹಾನಿ.
4) ಕರ್ತವ್ಯನಿರತ ಪೋಲಿಸರ ಮೇಲೆ ಹಲ್ಲೆ.
5) ಪೋಲಿಸ್ ಸ್ಟೇಷನಗೆ ಬೆಂಕಿ.
6) ಪೋಲಿಸ್ ವಾಹನಗಳಿಗೆ ಬೆಂಕಿ.
7) ಸಂವಿಧಾನದ ಅಡಿ ಕಾರ್ಯ ನಿರ್ವಹಿಸುತ್ತಿರುವ ಶಾಸಕರ ಮೇಲೆ ಹಲ್ಲೆಗೆ ಯತ್ನ.
8) ಶಾಸಕರ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ.
9) ಶಾಸಕರ ಮನೆಗೆ ಬೆಂಕಿ ಹಾಕಿ ಸಂಪೂರ್ಣ ನಾಶ ಮಾಡಿರುವುದು.‌
10) ಮಾಧ್ಯಮ ಮಿತ್ರರ ಮೇಲೆ ಮಾರಣಾಂತಿಕ‌ಹಲ್ಲೆ.
ಈ ಕೃತ್ಯ ಮಾಡಿದವರನ್ನು ಗಲಭೆಕೋರರು, ದಂಗೆಕೋರರು, ಹಲ್ಲೆಕೋರರು, ಶಾಂತಿ‌ಕದಡುವ ಕಿಡಿಗೇಡಿಗಳು, ಸಮಾಜದ್ರೋಹಿಗಳು.....ಎಂದು ಬಗೆಯ ಬೇಕೇ ಹೊರತು "#ನಮ್ಮ_ವೋಟರ್ಸ್" ಎಂಬ ಮಮತೆ ತೋರಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ