ಆ್ಯಪ್ನಗರ

'ಆನ್‌ಲೈನ್ ದೋಖಾ' ಆದಾಗ ಪೊಲೀಸ್ ಕಂಪ್ಲೇಂಟ್ ಕೊಡೋದೇ ಇಲ್ವಂತೆ ಬೆಂಗಳೂರು ಜನ..!

ಜನರು ಸಾಮಾನ್ಯವಾಗಿ ಹಣ ವರ್ಗಾವಣೆ, ಆನ್‌ಲೈನ್ ಶಾಪಿಂಗ್, ಬಿಲ್ ಪಾವತಿ ಕಾರ್ಯಗಳಿಗಾಗಿ ಇಂಟರ್‌ನೆಟ್ ಸೇವೆ ಬಳಸಿಕೊಳ್ತಾರೆ. ಬೆಂಗಳೂರಿನ ಶೇ. 52 ಮಂದಿ ಆನ್‌ಲೈನ್ ಮೂಲಕ ಪಾವತಿ ಮಾಡಲು ಒಗ್ಗಿಕೊಂಡಿದ್ದಾರೆ.

Bangalore Mirror Bureau 7 Feb 2020, 1:59 pm
ಬೆಂಗಳೂರು: ಒಎಲ್‌ಎಕ್ಸ್‌ ಯಾರಿಗೆ ಗೊತ್ತಿಲ್ಲ ಹೇಳಿ..? ಅವರೊಂದು ಸರ್ವೆ ಮಾಡಿದ್ದಾರೆ. ಆನ್‌ಲೈನ್ ವಂಚನೆ ಕುರಿತ ಸರ್ವೆ ಅದು. ಆ ಸರ್ವೆಯಲ್ಲಿ ಬಯಲಾದ ಅಂಶಗಳು ನಿಜಕ್ಕೂ ಆಘಾತಕಾರಿಯಾಗಿವೆ..!
Vijaya Karnataka Web online fraud
'ಆನ್‌ಲೈನ್ ದೋಖಾ' ಆದಾಗ ಪೊಲೀಸ್ ಕಂಪ್ಲೇಂಟ್ ಕೊಡೋದೇ ಇಲ್ವಂತೆ ಬೆಂಗಳೂರು ಜನ..!


ರಾಜಧಾನಿ ಬೆಂಗಳೂರಿನಲ್ಲಿ ಆನ್‌ಲೈನ್‌ ವಂಚನೆಗೆ ಒಳಗಾಗುವ ಶೇ. 47ರಷ್ಟು ಜನರು ಮಾತ್ರ ಈ ಬಗ್ಗೆ ಸೈಬರ್ ಕ್ರೈಂ ಪೊಲೀಸರ ಬಳಿ ದೂರು ದಾಖಲಿಸುತ್ತಿದ್ದಾರೆ. ಬಾಕಿ ಶೇ. 53 ಮಂದಿಯ ಪೈಕಿ ಶೇ. 20ರಷ್ಟು ಜನರಿಗೆ ದೂರು ಕೊಡಲು ಇಷ್ಟವೇನೋ ಇದೆ, ಆದ್ರೆ, ಪೊಲೀಸರ ಜೊತೆಗೆ ವ್ಯವಹರಿಸಲು ಕಷ್ಟಪಡುತ್ತಾರೆ. ಉಳಿದ ಶೇ. 33ರಷ್ಟು ಜನ ವಂಚನೆಯಾದ್ರೂ ತಲೆ ಕೆಡಿಸಿಕೊಳ್ಳದೆ ಸುಮ್ಮನಾಗಿಬಿಡುತ್ತಿದ್ದಾರೆ..! ಜನರ ಈ ಮನಸ್ಥಿತಿಯೇ ಸೈಬರ್‌ ಕ್ರೈಂ ಮಾಡುವವರಿಗೆ ವರವಾಗಿ ಪರಿಣಮಿಸಿದೆ.

ಆಘಾತಕಾರಿ ಸಂಗತಿ ಎಂದರೆ ಬೆಂಗಳೂರಿನ ಶೇ. 30ರಷ್ಟು ಮಂದಿ ತಮ್ಮ ಫೋನ್‌ಗೆ ಬರುವ ಒಟಿಪಿಯನ್ನು ಅಪರಿಚಿತರ ಜೊತೆಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಹಳಷ್ಟು ಮಂದಿ ತಮ್ಮ ಫೋನ್‌ ನಂಬರ್ ಹಾಗೂ ವಿಳಾಸವನ್ನೂ ಅಪರಿಚಿತರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಮಗಳ ಮೇಲೆ ಅತ್ಯಾಚಾರ ಮಾಡಲು ಫ್ರೆಂಡ್‌ಗೆ ಅನುಮತಿ ಕೊಟ್ಟಿದ್ದ ಮಹಾತಾಯಿ..! 14 ವರ್ಷದ ಬಾಲಕಿ ಈಗ ಗರ್ಭಿಣಿ

ಏಳೂವರೆ ಸಾವಿರ ಇಂಟರ್ನೆಟ್ ಬಳಕೆದಾರರನ್ನು ಒಎಲ್‌ಎಕ್ಸ್‌ ಈ ಸರ್ವೆಯಲ್ಲಿ ಬಳಸಿಕೊಂಡಿತ್ತು. 18 ವರ್ಷದಿಂದ 55 ವರ್ಷ ವಯೋಮಾನದವರನ್ನೇ ಗುರಿಯಾಗಿಸಿ ಈ ಸರ್ವೆ ನಡೆಸಲಾಗಿತ್ತು. ಸೈಬರ್ ಕ್ರೈಂ, ಸೈಬರ್ ಸುರಕ್ಷತೆ ಕುರಿತಾಗಿ ಜನರಿಗೆ ಅರಿವು ಮೂಡಿಸಲು ಈ ಸರ್ವೆ ನಡೆಸಲಾಗಿತ್ತು. ಜನರಿಗೆ ಡಿಜಿಟಲ್ ಸಾಕ್ಷರತೆ ಬರಬೇಕಿದೆ. ಹೀಗಾದಾಗ ಮಾತ್ರ ಇಂಟರ್‌ನೆಟ್‌ ವ್ಯವಹಾರ ಮೋಸದಿಂದ ಮುಕ್ತವಾಗುತ್ತೆ.

ಯಾರದ್ದೋ ಮನೆ ತೋರಿಸಿ ಅಡ್ವಾನ್ಸ್‌ ವಸೂಲಿ ಮಾಡಿದ ವಂಚಕ..! ಹಣ ಕಳೆದುಕೊಂಡವರ ಗೋಳಾಟ..

ಜನರು ಸಾಮಾನ್ಯವಾಗಿ ಹಣ ವರ್ಗಾವಣೆ, ಆನ್‌ಲೈನ್ ಶಾಪಿಂಗ್, ಬಿಲ್ ಪಾವತಿ ಕಾರ್ಯಗಳಿಗಾಗಿ ಇಂಟರ್‌ನೆಟ್ ಸೇವೆ ಬಳಸಿಕೊಳ್ತಾರೆ. ಬೆಂಗಳೂರಿನ ಶೇ. 52 ಮಂದಿ ಆನ್‌ಲೈನ್ ಮೂಲಕ ಪಾವತಿ ಮಾಡಲು ಒಗ್ಗಿಕೊಂಡಿದ್ದಾರೆ. ಆದ್ರೆ, ಶೇ. 17ರಷ್ಟು ಮಂದಿ ಆನ್‌ಲೈನ್ ಪಾವತಿಯನ್ನು ನಂಬೋದೇ ಇಲ್ಲ. ಮಿಕ್ಕ ಶೇ. 31ರಷ್ಟು ಮಂದಿ ಆನ್‌ಲೈನ್, ಆಫ್‌ಲೈನ್ ಎರಡಕ್ಕೂ ಓಕೆ ಅಂತಾರೆ.

'ರೈಸ್ ಪುಲ್ಲಿಂಗ್ ಯಂತ್ರ'ದ ಹೆಸರಲ್ಲಿ ಕೋಟ್ಯಂತರ ರೂ ಸುಲಿಗೆ..! 'ವಿಜ್ಞಾನಿ' ವೇಷದ ವಂಚಕಿ ಅಂದರ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ