ಆ್ಯಪ್ನಗರ

ಬೆಂಗಳೂರು: ಮಗುವಿನ ಸಾವಿನ ದುಃಖ ತಾಳಲಾರದೆ ತಾಯಿ ಆತ್ಮಹತ್ಯೆ

ಮನೆಯಲ್ಲಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಲ್ಲಿಯೇ ಸಾವನ್ನಪ್ಪಿತ್ತು. ಕಣ್ಣ ಮುಂದೆಯೇ ಮಗುವಿನ ಸಾವನ್ನು ನೋಡಿದ ತಾಯಿ ಪಲ್ಲವಿ ತೀವ್ರ ಮನನೊಂದು, ಸಾವಿನ ದುಃಖವನ್ನು ತಾಳಲಾರದೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 15 Feb 2022, 9:32 pm
ಬೆಂಗಳೂರು: ಹೆತ್ತ ಕಂದಮ್ಮನ ಸಾವನ್ನು ಕಣ್ಣೆದುರೇ ನೋಡಿ ನೋವು ತಾಳಲಾರದೆ ಡೆತ್‌ನೋಟ್‌ ಬರೆದಿಟ್ಟು ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುದ್ದಗುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಬೆಂಗಳೂರು ಸುದ್ದಗುಂಟೆಪಾಳ್ಯದ ನ್ಯೂ ಗುರಪ್ಪನಪಾಳ್ಯದ ಕೃಷ್ಣಗಾರ್ಡನ್‌ನ ಪಲ್ಲವಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಜೋರಾಗಿ ಗಂಟೆ ಬಾರಿಸಿದರೆ ಬೀಳುತ್ತೆ ಕೇಸು: ದೊಡ್ಡ ಗಣಪತಿ ಸೇರಿ ಹಲವು ದೇಗುಲಗಳಿಗೆ ನೋಟಿಸು

ಖಾಸಗಿ ಲ್ಯಾಬ್‌ವೊಂದರಲ್ಲಿ ಟೆಕ್ನಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್‌ ಮೂರು ವರ್ಷಗಳ ಹಿಂದೆ ಪಲ್ಲವಿಯನ್ನು ವಿವಾಹವಾಗಿದ್ದರು. ಕೆ.ಜಿ ಗಾರ್ಡನ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಇಬ್ಬರು ವಾಸವಾಗಿದ್ದರು. ದಂಪತಿಗೆ ಇತ್ತೀಚೆಗೆ 6 ತಿಂಗಳಿಗೇ ಒಂದು ಮಗು ಜನಿಸಿತ್ತು. ಆದರೆ ಮಗುವಿನ ಹೃದಯದಲ್ಲಿ ರಂಧ್ರವಿರುವುದಾಗಿ ವೈದ್ಯರು ತಿಳಿಸಿದ್ದರು. ಅಲ್ಲದೇ, ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದರು. ದಂಪತಿಯೂ ಮಗುವಿಗೆ ಚಿಕಿತ್ಸೆ ಕೊಡಿಸಲು ನಿರ್ಧರಿಸಿದ್ದರು.

ಆದರೆ, ಬೆಳಗ್ಗೆ ಎಂದಿನಂತೆ ಸಂತೋಷ್‌ ಕೆಲಸಕ್ಕೆ ತೆರಳಿದ್ದಾರೆ. ನಂತರ ಮನೆಯಲ್ಲಿದ್ದ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅಲ್ಲಿಯೇ ಸಾವನ್ನಪ್ಪಿತ್ತು. ಕಣ್ಣ ಮುಂದೆಯೇ ಮಗುವಿನ ಸಾವನ್ನು ನೋಡಿದ ತಾಯಿ ಪಲ್ಲವಿ ತೀವ್ರ ಮನನೊಂದು, ಸಾವಿನ ದುಃಖವನ್ನು ತಾಳಲಾರದೆ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಮಗುವಿಲ್ಲದೇ ಬದುಕಲಾಗುವುದಿಲ್ಲ' ಎಂದು ಡೆತ್‌ನೋಟ್‌ ಕೂಡ ಬರೆದಿಟ್ಟಿದ್ದಾರೆ.

ಜೋರಾಗಿ ಗಂಟೆ ಬಾರಿಸಿದರೆ ಬೀಳುತ್ತೆ ಕೇಸು: ದೊಡ್ಡ ಗಣಪತಿ ಸೇರಿ ಹಲವು ದೇಗುಲಗಳಿಗೆ ನೋಟಿಸು

ಸಂಜೆ ಕೆಲಸ ಮುಗಿಸಿ ಸಂತೋಷ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ಸೇಂಟ್‌ ಜಾನ್ಸ್‌ ಆಸ್ಪತ್ರೆಗೆ ರವಾನಿಸಿದ್ದಾರೆ. ಸುದ್ದಗುಂಟೆ ಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟೋದಲ್ಲಿ ಗಾಂಜಾ ಮಾರಾಟ

ಆಟೋದಲ್ಲಿ ಗಾಂಜಾ ಇಟ್ಟುಕೊಂಡು ಮಾರುತ್ತಿದ್ದ ನಾಲ್ವರು ಆರೋಪಿಗಳನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳ ಉಪನಗರದ ಅಲ್ಲಾಬಕ್ಷ್‌ ಮತ್ತು ನಾಯಂಡಹಳ್ಳಿಯ ಸಲೀಮ್‌ ಖಾನ್‌ (27), ಆಂಧ್ರಪ್ರದೇಶದ ಚಿತ್ತೂರು ಮೂಲದ ಚಂದ್ರು ಮತ್ತು ಶೇಖ್‌ ಮನ್ಸೂರ್‌ (19) ಬಂತರು. ಆರೋಪಿಗಳಿಂದ 43.30 ಕೆ.ಜಿ.ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ವಶಕ್ಕೆಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಇತ್ತೀಚೆಗೆ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯ ಗಾಂನಗರದ ವೈ.ರಾಮಚಂದ್ರ ರಸ್ತೆಯಲ್ಲಿಆಟೋರಿಕ್ಷಾದಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳಾದ ಅಲ್ಲಾ ಬಕ್ಷ್‌ ಮತ್ತು ಸಲೀಮ್‌ ಖಾನ್‌ನನ್ನು ಮಾಲು ಸಹಿತ ಬಂಧಿಸಲಾಗಿತ್ತು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಭಾನುವಾರ ಆಂಧ್ರಪ್ರದೇಶ ಮೂಲದ ಚಂದ್ರು ಮತ್ತು ಶೇಖ್‌ ಮನ್ಸೂರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ