ಆ್ಯಪ್ನಗರ

ರಂಜಾನ್‌ಗೆ ಮನೆಗೆ ಬಂದ ನಲಪಾಡ್‌: ಆಡಿ ಕಾರಿನಲ್ಲಿ ಜೈಲಿನಿಂದ ವಾಪಸ್

ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಬಿಡುಗಡೆಗಾಗಿ ಕಾಯುತ್ತಿದ್ದ ಮೊಹಮ್ಮದ್‌ ನಲಪಾಡ್‌, ಬರೋಬ್ಬರಿ 114 ದಿನಗಳ ಬಳಿಕ ಗುರುವಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

Vijaya Karnataka 15 Jun 2018, 9:52 am
ಬೆಂಗಳೂರು: ವಿದ್ವತ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಬಿಡುಗಡೆಗಾಗಿ ಕಾಯುತ್ತಿದ್ದ ಮೊಹಮ್ಮದ್‌ ನಲಪಾಡ್‌, ಬರೋಬ್ಬರಿ 114 ದಿನಗಳ ಬಳಿಕ ಗುರುವಾರ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.
Vijaya Karnataka Web mohammed nalapad.


ಇನ್ನುರೆಡು ದಿನಗಳಲ್ಲಿ ರಂಜಾನ್‌ ಹಬ್ಬ ಇರುವ ಕಾರಣ ಕುಟುಂಬ ಸದಸ್ಯರ ಜತೆಗೆ ನಲಪಾಡ್‌ ಹಬ್ಬ ಆಚರಿಸಬಹುದಾಗಿದೆ. ಗುರುವಾರ ಬೆಳಗ್ಗೆ ಹೈಕೋರ್ಟ್‌ ಜಾಮೀನು ಮಂಜೂರು ಆದೇಶ ನೀಡುತ್ತಿದ್ದಂತೆಯೇ ಹ್ಯಾರಿಸ್‌ ಮನೆಯಲ್ಲಿ ಸಂತಸ ಮನೆ ಮಾಡಿತ್ತು. ತಂದೆ ಎನ್‌.ಎ ಹ್ಯಾರಿಸ್‌, ತಾಯಿ ಮತ್ತು ಸಹೋದರ ಕೊನೆಗೂ ಜಾಮೀನು ಸಿಕ್ಕಿತು ಎಂದು ನಿಟ್ಟುಸಿರು ಬಿಟ್ಟರು. ಜಾಮೀನು ಸಿಕ್ಕಿರುವ ಸುದ್ದಿ ತಿಳಿದು ನಲಪಾಡ್‌ ಹಾಗೂ ಸಹೋದರ ಉಮರ್‌ ನಲಪಾಡ್‌ ಸ್ನೇಹಿತರು ಮನೆ ಬಳಿ ಜಮಾಯಿಸಿ ಕುಟುಂಬದವರನ್ನು ಅಭಿನಂದಿಸಿದರು.

ಜಾಮೀನು ಮಂಜೂರು ಕುರಿತು ಸಹೋದರ ಉಮರ್‌ನನ್ನು ಮಾಧ್ಯಮದವರು ಪ್ರತಿಕ್ರಿಯೆ ಕೇಳಿದಾಗ, ''ನನ್ನ ಅಣ್ಣನಿಗೆ ಹೊಡೆದಿದ್ದೇ (ಸುದ್ದಿ ಮಾಡಿದ್ದು) ಸಾಕು. ನನ್ನನ್ನು ಬಿಟ್ಬಿಡಿ'' ಎಂದು ಹೇಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬೆಳಗ್ಗೆ 11 ಗಂಟೆಯ ವೇಳೆಗೆ ಜಾಮೀನು ನೀಡಿಕೆ ಆದೇಶ ಬಂದಿತ್ತು. ಆದರೆ, ನ್ಯಾಯಾಲಯದ ತೀರ್ಪು ಸಂಜೆ ಸುಮಾರು 7 ಗಂಟೆಗೆ ಪರಪ್ಪನ ಅಗ್ರಹಾರ ಜೈಲು ತಲುಪಿತು. ಆದೇಶ ಪ್ರತಿ ತಲುಪಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಳಿಸಿದ ಸುಮಾರು 20 ನಿಮಿಷಗಳಲ್ಲೇ ಅವರನ್ನು ಕರೆದೊಯ್ಯಲು ಐಷಾರಾಮಿ ಆಡಿ ಕಾರಿನಲ್ಲಿ ಇಬ್ಬರು ಬಂದಿದ್ದರು. ಜೈಲಿನ ದ್ವಾರದ ಬಳಿಯೇ ಕಾರನ್ನು ನಿಲ್ಲಿಸಲಾಗಿತ್ತು. ಜೈಲಿನಿಂದ ಹೊರಬಂದ ಮೊಹಮ್ಮದ್‌ ನಲಪಾಡ್‌, ಕಾರು ಹತ್ತಿಕೊಂಡು ಹೊರಟರು.

ಜೈಲು ಸೇರಿದ ಆರಂಭದಲ್ಲಿಯೇ ನಲಪಾಡ್‌ ಪರ ವಕೀಲರು ಜಾಮೀನು ಪಡೆಯಲು ಸರ್ವಪ್ರಯತ್ನ ಮಾಡಿದ್ದರು. ಗಂಭೀರ ಹಲ್ಲೆ ಪ್ರಕರಣ ಹಾಗೂ ಸಾಕ್ಷ್ಯ ನಾಶ ಪಡಿಸುವ ಶಂಕೆ ಮೇಲೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಎರಡು ಬಾರಿ ಅಧೀನ ನ್ಯಾಯಾಲಯ, ಒಮ್ಮೆ ಹೈಕೋರ್ಟ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಇದರಿಂದಾಗಿ ನಲಪಾಡ್‌ಗೆ ಜಾಮೀನು ಸಿಗುವುದೇ ಎಂಬ ಚಿಂತೆ ಕುಟುಂಬ ಸದಸ್ಯರನ್ನು ಆವರಿಸಿತ್ತು. ಈಗ ನಲಪಾಡ್‌ ಮನೆಗೆ ಮರಳಿರುವುದು ಸಹಜವಾಗಿ ಕುಟುಂಬದಲ್ಲಿ ಸಂತಸ ಮೂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ