ಆ್ಯಪ್ನಗರ

ನಾಮಫಲಕಗಳಲ್ಲಿರುವ ಶಾಸಕರು, ಕಾರ್ಪೋರೇಟರ್‌ಗಳ ಹೆಸರಿಗೆ ಬಣ್ಣ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ರಸ್ತೆಗಳ ಫಲಕಗಳಲ್ಲಿನ ಶಾಸಕರು, ಸಂಸದರು ಮತ್ತು ಕಾರ್ಪೋರೇಟರ್‌ಗಳ ಹೆಸರುಗಳ ಮೇಲೆ ಬಣ್ಣ ಬಳಿಯಲಾಗುತ್ತಿದೆ. ಕೆಲವೆಡೆ ಹೆಸರುಗಳ ಮೇಲೆ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ.

Vijaya Karnataka 13 Mar 2019, 5:00 am
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ರಸ್ತೆಗಳ ಫಲಕಗಳಲ್ಲಿನ ಶಾಸಕರು, ಸಂಸದರು ಮತ್ತು ಕಾರ್ಪೋರೇಟರ್‌ಗಳ ಹೆಸರುಗಳ ಮೇಲೆ ಬಣ್ಣ ಬಳಿಯಲಾಗುತ್ತಿದೆ. ಕೆಲವೆಡೆ ಹೆಸರುಗಳ ಮೇಲೆ ಸ್ಟಿಕ್ಕರ್‌ ಅಂಟಿಸಲಾಗುತ್ತಿದೆ.
Vijaya Karnataka Web 1203-2-2-01 (8)


ನಗರದ ಬಸ್‌ ತಂಗುದಾಣ, ಸಾರ್ವಜನಿಕ ಶೌಚಾಲಯ, ಸ್ಕೈವಾಕ್‌ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಮೇಲೆ ಅಳವಡಿಸಿದ್ದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಶಾಸಕರು, ಸಚಿವರು, ಸಂಸದರು, ಕಾರ್ಪೋರೇಟರ್‌ಗಳ ಭಾವಚಿತ್ರವುಳ್ಳ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ. ಹಾಗೆಯೇ ಸರಕಾರದ ಸಾಧನೆಗಳ ಹೋರ್ಡಿಂಗ್ಸ್‌ಗಳನ್ನು ಸಹ ತೆಗೆಯಲಾಗಿದೆ. ಈವರೆಗೆ 2 ಸಾವಿರಕ್ಕೂ ಅಧಿಕ ಫ್ಲೆಕ್ಸ್‌, ಹೋರ್ಡಿಂಗ್ಸ್‌ ತೆರವುಗೊಳಿಸಿ, ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ.

ನಗರದ ಪ್ರತಿಯೊಂದು ಅಡ್ಡರಸ್ತೆ, ಮುಖ್ಯರಸ್ತೆಗಳಲ್ಲಿ ನಾಮಫಲಕಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಫಲಕದಲ್ಲೂ ಆಯಾ ಕ್ಷೇತ್ರದ ಶಾಸಕರು, ಸಂಸದರು ಮತ್ತು ಕಾರ್ಪೋರೇಟರ್‌ಗಳ ಹೆಸರು, ದೂರವಾಣಿ ಸಂಖ್ಯೆಯನ್ನು ಬರೆಯಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ