ಆ್ಯಪ್ನಗರ

ಯಲಚೇನಹಳ್ಳಿ-ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮೆಟ್ರೊ ಮಾರ್ಗ ಸಂಕ್ರಾಂತಿಯಂದು ಲೋಕಾರ್ಪಣೆ!

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ರೈಲು ಆರಂಭಿಸಿದ ಬಳಿಕ ಇದೀಗ ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮಾರ್ಗದ ಮೆಟ್ರೊ ರೈಲು ಮಾರ್ಗ ಜನವರಿ 14ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

Vijaya Karnataka Web 13 Jan 2021, 10:16 am
ಬೆಂಗಳೂರು: ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮಾರ್ಗದ ಮೆಟ್ರೊ ರೈಲು ಮಾರ್ಗ ಸಂಕ್ರಾಂತಿಯಂದು ಲೋಕಾರ್ಪಣೆಗೊಳ್ಳಲಿದೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಘೋಷಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಯಶಸ್ವಿಯಾಗಿ ರೈಲು ಆರಂಭಿಸಿದ ಬಳಿಕ ಇದೀಗ ಯಲಚೇನಹಳ್ಳಿ– ಸಿಲ್ಕ್‌ ಇನ್‌ಸ್ಟಿಟ್ಯೂಟ್ ವಿಸ್ತರಿತ ಮಾರ್ಗದ ಮೆಟ್ರೊ ರೈಲು ಮಾರ್ಗ ಜನವರಿ 14ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದ್ದಾರೆ.
Vijaya Karnataka Web ErlUqecVkAAI39x



ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಈ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ. 6.29 ಕಿಲೋ ಮೀಟರ್ ಉದ್ದದ ಮಾರ್ಗ ಮೆಟ್ರೋ ಇದಾಗಿದ್ದು, 5 ಎಲಿವೇಟೆಡ್ ಮೆಟ್ರೋ ನಿಲ್ದಾಣ ಹೊಂದಿದೆ. ಕೊನನಕುಂಟೆ ಕ್ರಾಸ್, ದೋಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ಸೇರಿ ಒಟ್ಟು ಐದು ಮೆಟ್ರೋ ನಿಲ್ಧಾಣಗಳಿರಲಿದೆ. ಸದ್ಯ ಮೆಟ್ರೋ ಆರಂಭವಾಗಲಿರುವುದರಿಂದ ಈ ಭಾಗದ ಜನರಲ್ಲಿ ಹೊಸ ಹುರುಪು ಮೂಡಿದೆ. ಜನವರಿ 15ರಿಂದ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಬೆಂಗಳೂರು: ಲಂಚ ಪಡೆಯುವಾಗ ACB ಬಲೆಗೆ ಬಿದ್ದ ಮಹಿಳಾ PSI, ಮಹಡಿಯಿಂದ ಜಿಗಿದ ಕಾನ್ಸ್‌ಟೇಬಲ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ