ಆ್ಯಪ್ನಗರ

ಈ ಬಾರಿ ಎನ್‌ಡಿಆರ್‌ಎಫ್‌ನಿಂದ ರಾಜ್ಯಕ್ಕೆ 1036 ಕೋಟಿ ರೂ. ಮಂಜೂರು: ಆರ್‌.ಅಶೋಕ್‌

ಮಳೆರಾಯನ ಆಗಮನವಾಗುತ್ತಿರುವ ಬೆನ್ನಲ್ಲೆ ಕಂದಾಯ ಸಚಿವ ಆರ್‌.ಅಶೋಕ್‌ 'ಬೆಂಗಳೂರು ಮೇಘ ಸಂದೇಶ' ಮೊಬೈಲ್ ಆ್ಯಪ್ ಹಾಗೂ‌ 'ವರುಣ ಮಿತ್ರ' ಅಂತರ್ಜಾಲ ತಾಣವನ್ನ ಬಿಡುಗಡೆಗೊಳಿಸಿದ್ದಾರೆ. ಮಳೆ ಹಾಗೂ ಪ್ರಕೃತಿ ವಿಕೋಪದ ಬಗ್ಗೆ ಮಾಹಿತಿ ನೀಡುವ ಉದ್ದೇಶವಾಗಿದೆ.

Vijaya Karnataka Web 6 Jun 2020, 3:10 pm
ಬೆಂಗಳೂರು: 'ಬೆಂಗಳೂರು ಮೇಘ ಸಂದೇಶ' ಮೊಬೈಲ್ ಆ್ಯಪ್ ಹಾಗೂ‌ 'ವರುಣ ಮಿತ್ರ' ಅಂತರ್ಜಾಲ ತಾಣವನ್ನ ಕಂದಾಯ‌ ಸಚಿವ ‌ಆರ್.ಅಶೋಕ್ ಬಿಡುಗಡೆಗೊಳಿಸಿದರು. ಯಲಹಂಕದಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಬೆಂಗಳೂರು ಮೇಘ ಸಂದೇಶ' ಮೊಬೈಲ್ ಆ್ಯಪ್ ಹಾಗೂ‌ 'ವರುಣ ಮಿತ್ರ' ಅಂತರ್ಜಾಲ ತಾಣವನ್ನ ಬಿಡುಗಡೆಗೊಳಿಸಿದರು.
Vijaya Karnataka Web LqZZbS6u


ಬಳಿಕ ಮಾತನಾಡಿದ ಸಚಿವರು, ಕಳೆದ ವರ್ಷ ಕೇಂದ್ರದಿಂದ ರಾಜ್ಯಕ್ಕೆ ಎನ್ ಡಿಆರ್ ಎಫ್ ಮೂಲಕ‌ 386 ಕೋಟಿ ರೂ. ಅನುದಾನ‌ ಸಿಕ್ಕಿತ್ತು.‌ ಈ‌‌ ಬಾರಿ 1036 ಕೋಟಿ ರೂ. ಮಂಜೂರು ಮಾಡಲಾಗಿದೆ. ಮುಂಗಡವಾಗಿ‌ 350 ಕೋಟಿ ರೂ. ಹಣವನ್ನು ನೀಡಿದೆ ಎಂದು‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆಎಸ್ ಡಿಎಂಎ‌ ಆಯುಕ್ತ ಮನೋಜ್‌ ರಾಜನ್, ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ, ಬಿಬಿಎಂಪಿ‌ ಆಯುಕ್ತ ಅನಿಲ್ ಕುಮಾರ್, ಶಾಸಕ ಎಸ್.ಆರ್.ವಿಶ್ವನಾಥ್ ಮತ್ತಿತರರಿದ್ದರು. ಕಾರ್ಯಕ್ರಮದ ಬಳಿಕ ರಾಜಧಾನಿಯಲ್ಲಿ ಪ್ರವಾಹ‌ ನಿರ್ವಹಣೆ ಕುರಿತು ಪಾಲಿಕೆ‌ ಸಹಿತ ನಗರದ ನಾನಾ ಸರಕಾರಿ ಸಂಸ್ಥೆಗಳ‌‌‌ ಆಯ್ದ 40 ಮಂದಿ‌ ಅಧಿಕಾರಿಗಳಿಗೆ ಕಾರ್ಯಾಗಾರ‌ ಆಯೋಜಿಸಲಾಗಿತ್ತು.

ಮಳೆ ಆರಂಭವಾಗುತ್ತಿದ್ದಂತೆ ಸಿಲಿಕಾನ್‌ ಸಿಟಿಯಲ್ಲಿ ಅಲ್ಲೋಲಕಲ್ಲೋಲವಾಗಿತ್ತು. ತಗ್ಗುಪ್ರದೇಶಕ್ಕೆ ನೀರು ನುಗ್ಗಿ ಜಲಾವೃತವಾಗಿತ್ತು. ಇನ್ನು ಹಲವೆಡೆ ಮರಗಳು ಉರುಳಿ ಕಾರು ಜಖಂಗೊಂಡಿರುವುದು ಅಲ್ಲದೇ ಸಾವು ಕೂಡ ಸಂಭವಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ