ಆ್ಯಪ್ನಗರ

ಬದಲಿ ಸೈಟ್‌ಗೆ ಷರತ್ತು: ನಾಗರಿಕರು ಕಂಗಾಲು

ಸೈಟ್‌ಗಳಿಗೆ ಬದಲಿ ನಿವೇಶನದ ವಾಗ್ದಾನ ನೀಡಿದ್ದ ಬಿಡಿಎ, ಈಗ ಹೊಸ ಷರತ್ತು ವಿಧಿಸಿರುವುದು ಫಲಾನುಭವಿಗಳನ್ನು ಆತಂಕಕ್ಕೆ ದೂಡಿದೆ.

Vijaya Karnataka 24 Dec 2018, 5:00 am
ಬೆಂಗಳೂರು: ಕೆಂಪೇಗೌಡ ಬಡಾವಣೆಯ ಕೆರೆ, ಕಾಲುವೆಯ ಬಫರ್‌ ವಲಯದ ಬಳಿ ಹಂಚಿಕೆ ಮಾಡಿದ್ದ ಸೈಟ್‌ಗಳಿಗೆ ಬದಲಿ ನಿವೇಶನದ ವಾಗ್ದಾನ ನೀಡಿದ್ದ ಬಿಡಿಎ, ಈಗ ಹೊಸ ಷರತ್ತು ವಿಧಿಸಿರುವುದು ಫಲಾನುಭವಿಗಳನ್ನು ಆತಂಕಕ್ಕೆ ದೂಡಿದೆ.
Vijaya Karnataka Web BDA layout


ಹೊಸ ಷರತ್ತಿನಂತೆ ನಿವೇಶನದ ಪೂರ್ಣ ಮೌಲ್ಯ ಪಾವತಿಸಿದ ನಂತರ ಅರ್ಜಿಯನ್ನು ಅಭಿಯಂತರ ವಿಭಾಗದಿಂದ ದೃಢಪಡಿಸಿದ ಬಳಿಕ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಹಿಂಬರಹವನ್ನು ಹಂಚಿಕೆದಾರರಿಗೆ ನೀಡಲಾಗಿದೆ. ಇದು ಸ್ವತಃ ಬಿಡಿಎ ಆಯುಕ್ತರೇ ನೀಡಿದ್ದ ಭರವಸೆಯ ಉಲ್ಲಂಘನೆಯಾಗಿದ್ದು, ಇಂಥ ನಿಲುವು ಕೈಗೊಳ್ಳುವುದು ಸರಿಯೇ ಎಂದು ಹಂಚಿಕೆದಾರರು ಪ್ರಶ್ನಿಸಿದ್ದಾರೆ.

ಎರಡನೇ ಹಂತದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳಲ್ಲಿ ಕೆಲವೊಂದು ಬಫರ್‌ ವಲಯ, ಹೈಟೆನ್ಶನ್‌ ಮಾರ್ಗದ ಕೆಳ ಭಾಗದಲ್ಲಿವೆ. ಈ ಲೋಪ ದೃಢಪಟ್ಟ ವೇಳೆ ಹಂಚಿಕೆದಾರರಿಗೆ ಬದಲಿ ನಿವೇಶನ ನೀಡುವುದಾಗಿ ಪ್ರಾಧಿಧಿಕಾರ ಭರವಸೆ ನೀಡಿತ್ತು. ಬಳಿಕ 50ಕ್ಕೂ ಹೆಚ್ಚು ಮಂದಿಗೆ ಸೈಟ್‌ ನೀಡಲು ಪಟ್ಟಿ ಸಿದ್ಧಪಡಿಸಲಾಗಿತ್ತು. ಇದರ ಹೊರತಾಗಿಯೂ ಹಿಂಬರಹ ನೀಡಿ ಗೊಂದಲ ಮೂಡಿಸಿದೆ ಎಂದು ಕೆಲ ಹಂಚಿಕೆದಾರರು 'ವಿಕ'ಗೆ ತಿಳಿಸಿದರು.

ಹೊಸ ಷರತ್ತಿನಿಂದಾಗಿ ಬಾಕಿ ಹಣ ಪಾವತಿಗೆ ಇನ್ನೂ 2-3 ತಿಂಗಳು ಕಾಯಬೇಕು. ಆ ಬಳಿಕ ಅರ್ಜಿ ಸಲ್ಲಿಸಿ ಒಪ್ಪಿಗೆ ಪಡೆಯಲು ಪ್ರಾಧಿಕಾರದ ಕಚೇರಿಗೆ ಅಲೆದಾಡಬೇಕಾಗುತ್ತದೆ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ