ಆ್ಯಪ್ನಗರ

ನಿಮ್ಹಾನ್ಸ್‌ ಹೊರರೋಗಿಗಳ ವಿಭಾಗ ನಾಳೆಯಿಂದ ಆರಂಭ

ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ನಿಂದ ಮುಚ್ಚಿದ್ದ ನಿಮ್ಹಾನ್ಸ್‌ನ ಹೊರರೋಗಿಗಳ ವಿಭಾಗ ಸೋಮವಾರದಿಂದ(ಜೂ.1) ಮತ್ತೆ ತೆರೆಯಲಿದೆ. ಈಗ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

Vijaya Karnataka Web 31 May 2020, 8:10 am
ಬೆಂಗಳೂರು: ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ನಿಂದ ಮುಚ್ಚಿದ್ದ ನಿಮ್ಹಾನ್ಸ್‌ನ ಹೊರರೋಗಿಗಳ ವಿಭಾಗ ಸೋಮವಾರದಿಂದ(ಜೂ.1) ಮತ್ತೆ ತೆರೆಯಲಿದೆ. ಆದರೆ ಹೆಸರು ನೋಂದಾಯಿಸಿಕೊಳ್ಳುವವರಿಗೆ ಮಾತ್ರ ಸೇವೆ ದೊರೆಯಲಿದೆ.
Vijaya Karnataka Web nimhans outpatient department begins tomorrow
ನಿಮ್ಹಾನ್ಸ್‌ ಹೊರರೋಗಿಗಳ ವಿಭಾಗ ನಾಳೆಯಿಂದ ಆರಂಭ


ಕೊರೊನಾ ಭೀತಿ ಆರಂಭವಾದ ಬಳಿಕ ತುರ್ತು ಆರೋಗ್ಯ ಸೇವೆಗಳನ್ನು ಮಾತ್ರ ನೀಡುವಂತೆ ಸರಕಾರ ಸೂಚನೆ ನೀಡಿತ್ತು. ಅದರಂತೆ, ಮಾ.26ರಂದು ಆಸ್ಪತ್ರೆಯ ಹೊರರೋಗಿ ವಿಭಾಗವನ್ನು ಮುಚ್ಚಲಾಗಿತ್ತು. ಇದರಿಂದಾಗಿ ರೋಗಿಗಳು ಸಾಮಾನ್ಯ ಆರೋಗ್ಯ ಸೇವೆ ಸಿಗದೆ ಪರದಾಡಬೇಕಾಯಿತು. ಹಲವರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆದಿದ್ದರು. ಈಗ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಆಸ್ಪತ್ರೆಯಲ್ಲಿ ಎಂದಿನಂತೆ ಸೇವೆ ಆರಂಭಿಸಲು ತೀರ್ಮಾನಿಸಲಾಗಿದೆ.

ಆದರೆ, ಹೊರರೋಗಿಗಳ ವಿಭಾಗಕ್ಕೆ ಬರುವ ಮುನ್ನ ರೋಗಿಗಳು ನೋಂದಣಿ ಮಾಡಿಕೊಂಡಿರಬೇಕು. ಇದಕ್ಕಾಗಿ ಐವಿಆರ್‌ಎಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ದೂ: 080-26991699ಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಂಡು ಬರುವ ದಿನವನ್ನು ತಿಳಿಸಬೇಕು. ನಂತರ ಸಂಸ್ಥೆಯ ಸಿಬ್ಬಂದಿ ರೋಗಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆಯುತ್ತಾರೆ. ಬಳಿಕ ಚಿಕಿತ್ಸೆಗಾಗಿ ರೋಗಿ ಆಸ್ಪತ್ರೆಗೆ ಬರುವ ಅಗತ್ಯವಿದೆಯೇ ಎಂದು ನಿರ್ಧರಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮಾತ್ರ ರೋಗಿಗೆ ಬರಲು ಸೂಚಿಸಲಾಗುತ್ತದೆ.

ಮಾಹಿತಿಗೆ ಆಸ್ಪತ್ರೆಯ ಸಹಾಯವಾಣಿ ದೂ: 080-46110007ಗೂ ಕರೆ ಮಾಡಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ