ಆ್ಯಪ್ನಗರ

ಜಯದೇವದಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ: ಫಲಕ ಹಾಕಿದ ನಿರ್ದೇಶಕರು!

ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಯಾವುದೇ ಹುದ್ದೆಗಳು ಖಾಲಿ ಇಲ್ಲ ಎಂದು ಬೋರ್ಡ್‌ ಹಾಕಲಾಗಿದೆ.

TIMESOFINDIA.COM 13 Aug 2018, 5:27 pm
ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ಯಾವುದೇ ಹುದ್ದೆಗಳು ಖಾಲಿ ಇಲ್ಲ ಎಂದು ಬೋರ್ಡ್‌ ಹಾಕಲಾಗಿದೆ.
Vijaya Karnataka Web JAYADEVA


ಸಂಸ್ಥೆ ನಿರ್ದೇಶಕ ಡಾ. ಸಿ.ನ್‌. ಮಂಜುನಾಥ್‌ ಅವರ ಕೊಠಡಿ ಮುಂದೆ, ಯಾವುದೇ ಕೆಲಸ ಖಾಲಿ ಇಲ್ಲ ಎಂಬ ಫಕಲ ಹಾಕಲಾಗಿದೆ.

ಇತ್ತೀಚಿನ ದಿನಗಳಲ್ಲಿ ಕೆಲಸ ಕೇಳಿಕೊಂಡು ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಅನೇಕರು ಆಸ್ಪತ್ರೆಯಲ್ಲಿನ ಕ್ಲರಿಕಲ್‌ ಕೆಲಸ ಮಾಡಲೂ ಸಿದ್ಧವಾಗಿದ್ದಾರೆ. ಪ್ರತಿಯೊಬ್ಬರ ಬಳಿ ಸುಮಾರು 30 ಸೆಕೆಂಡುಗಳಷ್ಟು ನನ್ನ ಸಮಯ ಹಾಳಾಗುತ್ತಿದೆ. ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಯಲ್ಲೂ ಬೋರ್ಡ್‌ ಹಾಕಲಾಗದೆ ಎಂದು ಮಂಜುನಾಥ್‌ ಹೇಳಿದ್ದಾರೆ.

ಕೆಲಸ ಕೇಳಿಕೊಂಡು ಬರುವವರಲ್ಲಿ ಹೆಚ್ಚಿನವರು ಈ ಹಿಂದಿದ್ದ ಉದ್ಯೋಗವನ್ನು ಕಳೆದುಕೊಂಡವರು. ನೋಟು ಅಮಾನ್ಯೀಕರಣದ ಬಳಿಕ ಈ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಹೃದ್ರೋಗ ಆಸ್ಪತ್ರೆಯಾಗಿರುವುದರಿಂದ ಅತಿ ಹೆಚ್ಚು ರೋಗಿಗಳು ಬರುತ್ತಾರೆ. ಇವರ ಜತೆಯಲ್ಲಿ ಕೆಲಸ ಕೇಳಿಕೊಂಡು ಬರುವವರ ರೆಸ್ಯೂಮ್‌ ನೋಡುವುದು ಕಷ್ಟವಾಗುತ್ತದೆ. ಇದಕ್ಕಾಗಿ ಬೋರ್ಡ್‌ ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ರೋಗಿಗಳು ಮತ್ತು ಕೆಲಸಕ್ಕಾಗಿ ಬರುವವರನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಲ್ಲದೆ ಆಸ್ಪತ್ರೆಗೆ ಬರುವವರಲ್ಲಿ ರೋಗಿಗಳ ಸಂಬಂಧಿಕರೂ ಇರುತ್ತಾರೆ. ಇವರೆಲ್ಲರನ್ನು ಗುರುತಿಸುವುದು ಹೇಗೆ ಎಂದು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ