ಆ್ಯಪ್ನಗರ

ಬಳೇಪೇಟೆಯಲ್ಲಿ ನೆಲಕ್ಕುರುಳಿದ ಹಳೆಯ ಕಟ್ಟಡ

ಮೆಜೆಸ್ಟಿಕ್ ಬಳಿಯ ಬಳೇಪೇಟೆ ವೃತ್ತದಲ್ಲಿ 60 ವರ್ಷದ ಹಳೆಯದಾದ ಎರಡು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ. ಏಕಾಏಕಿ ಕಟ್ಟಡ ಕುಸಿದು ಬಿದ್ದುದರಿಂದ ಏನಾಯಿತೆಂದು ತಿಳಿಯದ ಜನ ಗಾಬರಿಗೊಂರು ದೂರ ಓಡಿದರು.

ವಿಕ ಸುದ್ದಿಲೋಕ 16 Mar 2016, 4:49 am
ಕೂದಲೆಳೆಯ ಅಂತರದಲ್ಲಿ ಪಾರಾದ ಕಾರ್ಮಿಕರು
Vijaya Karnataka Web old building fell balepete
ಬಳೇಪೇಟೆಯಲ್ಲಿ ನೆಲಕ್ಕುರುಳಿದ ಹಳೆಯ ಕಟ್ಟಡ


ಬೆಂಗಳೂರು: ಮೆಜೆಸ್ಟಿಕ್ ಬಳಿಯ ಬಳೇಪೇಟೆ ವೃತ್ತದಲ್ಲಿ 60 ವರ್ಷದ ಹಳೆಯದಾದ ಎರಡು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ ಏಕಾಏಕಿ ಕುಸಿದು ಬಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಲಿಲ್ಲ. ಏಕಾಏಕಿ ಕಟ್ಟಡ ಕುಸಿದು ಬಿದ್ದುದರಿಂದ ಏನಾಯಿತೆಂದು ತಿಳಿಯದ ಜನ ಗಾಬರಿಗೊಂರು ದೂರ ಓಡಿದರು.

ಈ ಕಟ್ಟಡ ಬಳೇಪೇಟೆ ನಿವಾಸಿ ಅಶ್ವತಪ್ಪ ಎಂಬುವರಿಗೆ ಸೇರಿದ್ದಾಗಿದೆ. ನೆಲಕ್ಕುರುಳಿದ ಕಟ್ಟಡದ ನೆಲ ಅಂತಸ್ತಿನಲ್ಲಿ ಬೇಕರಿ ಮತ್ತು ಮೊಬೈಲ್ ಅಂಗಡಿಗಳಿದ್ದವು. ನವೀಕರಣ ಕಾರ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೇಕರಿ ಮತ್ತು ಮೊಬೈಲ್ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು.

ಕ್ಷಣದಲ್ಲಿ ಪಾರಾದ ಕಾರ್ಮಿಕರು

ಮಂಗಳವಾರ ಎಂದಿನಂತೆ ಮಹಡಿ ಮೇಲೆ ಇಬ್ಬರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕಟ್ಟಡದ ನೆಲ ಅಂತಸ್ತಿನಲ್ಲಿ ಕಂಬವೊಂದು ಕುಸಿದು ಬಿತ್ತು. ಅದನ್ನು ಕಂಡ ಇಬ್ಬರು ಕಾರ್ಮಿಕರು ತಕ್ಷಣ ಎಚ್ಚೆತ್ತು ಕೆಳಗಿಳಿದರು. ಅವರು ಕೆಳಗಿಳಿದು ಬಂದ ಕೆಲವೇ ಸೆಕೆಂಡುಗಳಲ್ಲಿ ಕಟ್ಟಡ ಉರುಳಿಬಿತ್ತು. ನೋಡನೋಡುತ್ತಿದ್ದಂತೆ ಕಟ್ಟಡ ನೆಲಸಮಗೊಂಡಿತು.

ಸುದ್ದಿ ತಿಳಿದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಜೆಸಿಬಿ ಯಂತ್ರದ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಿಕ್ಕಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತಷ್ಟು ಹಳೆಯ ಕಟ್ಟಡಗಳು

ಬಳೇಪೇಟೆಯಲ್ಲಿ ಸಾಕಷ್ಟು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಬಿಬಿಎಂಪಿ ಅಧಿಕಾರಿಗಳು ಅಂತಹ ಕಟ್ಟಡಗಳನ್ನು ಗುರುತಿಸಿ ಮನೆ ಮಾಲೀಕರಿಗೆ ನೋಟಿಸ್ ನೀಡಬೇಕು. ಆದರೆ, ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಕಿಡಿಕಾರಿದರು. ಕಟ್ಟಡ ಮಾಲೀಕರು ಕೂಡ ಅನಾಹುತ ಸಂಭವಿಸುವ ಮೊದಲೇ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಬೇಕೆಂದು ಸ್ಥಳೀಯ ವರ್ತಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ