ಆ್ಯಪ್ನಗರ

ಕೋವಿಡ್‌ ಸೋಂಕಿತರಿಗೆ ಪ್ರವೇಶ ನಕಾರ; ಜಯನಗರದ ಅಪೊಲೊ, ವಿಕ್ರಮ್‌ ಆಸ್ಪತ್ರೆ ಹೊರ ರೋಗಿ ವಿಭಾಗ ಬಂದ್ ಶಿಕ್ಷೆ

ಕೋವಿಡ್‌ ಸೋಂಕಿತರನ್ನು ನಿರ್ಲಕ್ಷ್ಯ ಮಾಡಿ, ಪ್ರವೇಶ ನೀಡದೆ, ಚಿಕಿತ್ಸೆಯನ್ನೂ ನಿರಾಕರಿಸಿದ ಹಿನ್ನೆಲೆಯಲ್ಲಿ ಜಯನಗರದ ಅಪೊಲೊ ನರ್ಸಿಂಗ್ ಹೋಮ್‌ ಮತ್ತು ವಿಕ್ರಮ್‌ ಆಸ್ಪತ್ರೆಗೆ ರಾಜ್ಯ ಸರಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

Vijaya Karnataka Web 14 Jul 2020, 5:32 pm
ಬೆಂಗಳೂರು: ಕೊರೊನಾ ಸೋಂಕಿತರಿಗೆ ಪ್ರವೇಶ ನೀಡಿ, ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಸರಕಾರ ಈಗಾಗಲೇ ಸೂಚನೆ ನೀಡಿದ್ದರೂ, ಅದನ್ನು ಉಲ್ಲಂಘಿಸಿದ ಆಸ್ಪತ್ರೆಗಳಿಗೆ 'ದಂಡ'ದ ಬಿಸಿ ತಟ್ಟಿದೆ.
Vijaya Karnataka Web ಕೊರೊನಾ
ಕೊರೊನಾ


ಕೋವಿಡ್‌ ಸೋಂಕಿತರಿಗೆ ಪ್ರವೇಶ ನಿರಾಕರಿಸಿದ ಜಯನಗರದ ಅಪೊಲೊ ನರ್ಸಿಂಗ್ ಹೋಮ್‌ ಮತ್ತು ವಿಕ್ರಮ್‌ ಆಸ್ಪತ್ರೆಗೆ ಶಿಕ್ಷೆ ನೀಡಿ ಸರಕಾರ ಆದೇಶ ನೀಡಿದೆ. ಸರಕಾರ ಕಳುಹಿಸಿದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ ವಿಕ್ರಮ್ ಆಸ್ಪತ್ರೆ ಹಾಗೂ ಜಯನಗರದ ಅಪೋಲೋ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು 48 ಘಂಟೆ ಬಂದ್/ಸೀಲ್ ಡೌನ್ ಮಾಡಲಾಗಿದೆ.

ಮುಂದಿನ 48 ಗಂಟೆಗಳ ಕಾಲ ಈ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗದಲ್ಲಿ ಸೇವೆಗೆ ನಿಷೇಧ ಹೇರಿ ಸರಕಾರ ಆದೇಶ ಹೊರಡಿಸಿದೆ.

ಕೋವಿಡ್‌ ಸೋಂಕಿತರನ್ನು ನಿರ್ಲಕ್ಷ್ಯ ಮಾಡಿ, ಪ್ರವೇಶ ನೀಡದೆ, ಚಿಕಿತ್ಸೆಯನ್ನೂ ನಿರಾಕರಿಸಿದ ಹಿನ್ನೆಲೆಯಲ್ಲಿ ಜಯನಗರದ ಅಪೊಲೊ ನರ್ಸಿಂಗ್ ಹೋಮ್‌ ಮತ್ತು ವಿಕ್ರಮ್‌ ಆಸ್ಪತ್ರೆಗೆ ಸರಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ