ಆ್ಯಪ್ನಗರ

70ಬಾರಿ ನಿಯಮ ಉಲ್ಲಂಘನೆ, ತರಕಾರಿ ವ್ಯಾಪಾರಿಯಿಂದ 15,400 ದಂಡ ವಸೂಲಿ ಮಾಡಿದ ಸಂಚಾರ ಪೊಲೀಸರು

ಕೇವಲ ಒಂದೇ ವರ್ಷದಲ್ಲಿ70 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ತರಕಾರಿ ವ್ಯಾಪಾರಿಗೆ ಮಾರುದ್ದದ ದಂಡ ಚಲನ್‌ಗಳನ್ನು ನೀಡಿರುವ ರಾಜಾಜಿನಗರ ಸಂಚಾರ ಠಾಣೆ ಪೊಲೀಸರು 15,400 ರೂ. ದಂಡ ವಸೂಲಿ ಮಾಡಿದ್ದಾರೆ.

Vijaya Karnataka Web 16 Dec 2019, 12:25 pm
ಬೆಂಗಳೂರು: ಕೇವಲ ಒಂದೇ ವರ್ಷದಲ್ಲಿ 70 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ತರಕಾರಿ ವ್ಯಾಪಾರಿಗೆ ಮಾರುದ್ದದ ದಂಡ ಚಲನ್‌ಗಳನ್ನು ನೀಡಿರುವ ರಾಜಾಜಿನಗರ ಸಂಚಾರ ಠಾಣೆ ಪೊಲೀಸರು 15,400 ರೂ. ದಂಡ ವಸೂಲಿ ಮಾಡಿದ್ದಾರೆ.
Vijaya Karnataka Web vegetable vendor


ಲಗ್ಗೆರೆ ನಿವಾಸಿ ಮಂಜುನಾಥ ದಂಡ ಶಿಕ್ಷೆಗೆ ಗುರಿಯಾದವರು. ಎರಡು ದಿನಗಳ ಹಿಂದೆ ಹೆಲ್ಮೆಟ್‌ ಧರಿಸದೆ ಸ್ಕೂಟರ್‌ ಸವಾರಿ ಮಾಡುತ್ತಿದ್ದಾಗ ಮಹಾಲಕ್ಷ್ಮಿ ಲೇಔಟ್‌ನ ಶಂಕರನಗರ ಬಸ್‌ ನಿಲ್ದಾಣ ಸಮೀಪ ರಾಜಾಜಿನಗರ ಸಂಚಾರ ಪೊಲೀಸರಿಗೆ ಸಿಕ್ಕಿ ಬಿದ್ದರು.

ಸಂಚಾರ ಪೊಲೀಸರು ಪಿಡಿಎ ಯಂತ್ರದಲ್ಲಿ ವಾಹನ ಸಂಖ್ಯೆ ನಮೂದಿಸುತ್ತಿದ್ದಂತೆ ಬೆಚ್ಚಿಬಿದ್ದರು. 70 ಪ್ರಕರಣಗಳು ಇದ್ದ ಕಾರಣ ಸ್ಕೂಟರ್‌ ಜಪ್ತಿ ಮಾಡಿದ ಪೊಲೀಸರು 15,400 ರೂ. ಮೊತ್ತದ ದಂಡದ ಚಲನ್‌ ಹರಿದರು. ಶನಿವಾರ ದಂಡ ಪಾವತಿಸಿದ ಮಂಜುನಾಥ, ಸ್ಕೂಟರ್‌ ಬಿಡಿಸಿಕೊಂಡಿದ್ದಾರೆ. ವಿಜಯನಗರದ ಬಸ್‌ ನಿಲ್ದಾಣ ಬಳಿ ತರಕಾರಿ ಮಾರಾಟ ಮಳಿಗೆ ಹೊಂದಿರುವ ಮಂಜುನಾಥ, ಒಂದು ವರ್ಷದಿಂದ ಸಿಗ್ನಲ್‌ ಜಂಪ್‌, ಹೆಲ್ಮೆಟ್‌ ಧರಿಸದೆ ಚಾಲನೆ, ಮೊಬೈಲ್‌ನಲ್ಲಿ ಸಂಭಾಷಣೆ ಹೀಗೆ 70ಕ್ಕೂ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ