ಆ್ಯಪ್ನಗರ

ಬಂಧಿಸಲು ಬಂದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ಆರೋಪಿಗಳಿಗೆ ಗುಂಡೇಟು

ಪರಾರಿಯಾಗಿದ್ದ ಆರೋಪಿಗಳ ಇರುವಿಕೆ ಮಾಹಿತಿ ಆಧರಿಸಿ ಬಂಧಿಸಲು ಮಂಗಳವಾರ ನಗರದ ಆಚಾರ್ಯ ಕಾಲೇಜು ಬಳಿ ಪೊಲೀಸರು ತೆರಳಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ‌ ಮಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು.

Vijaya Karnataka Web 12 Nov 2019, 1:52 pm
ಬೆಂಗಳೂರು: ಬಂಧಿಸಲು ಮುಂದಾದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಮೇಲೆ ಉತ್ತರ ವಿಭಾಗದ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ತಮಿಳುನಾಡಿನ ಬಸೀತ್ ಮತ್ತು ರಿಯಾಜ್ ಗುಂಡೇಟು ತಿಂದ ಆರೋಪಿಗಳು. ಘಟನೆಯಲ್ಲಿ ಬಾಗಲಗುಂಟೆ ಠಾಣೆಯ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ.
Vijaya Karnataka Web Bangalore Shoot out


ಟಿ. ದಾಸರಹಳ್ಳಿಯಲ್ಲಿನ ಶ್ರೀನಿವಾಸ್ ಎಂಬವರು ನೀರಿನ ಪ್ಲಾಂಟ್ ನೋಡಿಕೊಳ್ಳುತ್ತಾರೆ. ಅವರ ಬಳಿ 50 ಲಕ್ಷ ರೂಪಾಯಿಗೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆಯನ್ನೂ ಹಾಕಿದ್ದರು.

ಹಣ‌ ನೀಡದ ಕಾರಣ ಸೋಮವಾರ ತಡರಾತ್ರಿ ಟಿ. ದಾಸರಹಳ್ಳಿಯಲ್ಲಿನ ಶ್ರೀನಿವಾಸ್ ಅವರ ಮನೆ ಮುಂದೆ‌ ನಿಲ್ಲಿಸಿದ್ದ ನಾಲ್ಕು ವಾಹನಗಳಿಗೆ ಆರೋಪಿಗಳು ಬೆಂಕಿ ಇಟ್ಟಿದ್ದರು. ಈ ಸಂದರ್ಭದಲ್ಲಿ ವಾಹನಗಳ ಜೊತೆಗೆ, ಮನೆಗೂ ಹಾನಿಯಾಗಿತ್ತು.

ಶ್ರೀನಿವಾಸ್‌ ಮನೆಗೆ ಆರೋಪಿಗಳು ಬೆಂಕಿ ಇಟ್ಟಿರುವುದು



ದೂರು ದಾಖಲಿಸಿಕೊಂಡ ಪೊಲೀಸರು, ಪರಾರಿಯಾಗಿದ್ದ ಆರೋಪಿಗಳ ಇರುವಿಕೆ ಮಾಹಿತಿ ಆಧರಿಸಿ ಬಂಧಿಸಲು ಮಂಗಳವಾರ ನಗರದ ಆಚಾರ್ಯ ಕಾಲೇಜು ಬಳಿ ತೆರಳಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ‌ ಮಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಇಬ್ಬರೂ ಆರೋಪಿಗಳ ಕಾಲಿಗೆ ಸೋಲದೇವನಹಳ್ಳಿ ಪೊಲೀಸ್ ಇನ್ಸ್‌ಪೆಕ್ಟರ್ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ