ಆ್ಯಪ್ನಗರ

ಮಕ್ಕಳ ರಕ್ಷಣೆಗಾಗಿ ಇಂಟರ್‌ನೆಟ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ಬ್ಯಾನ್ ಮಾಡಬೇಕು: ಕೈಲಾಶ್‌ ಸತ್ಯಾರ್ಥಿ

ಅಂತರ್ಜಾಲದಲ್ಲಿ ಅಶ್ಲೀಲ ವೀಡಿಯೋ ದೊರೆಯದಂತೆ ಮಾಡಬೇಕು. ಮಕ್ಕಳ ರಕ್ಷಣೆಗಾಗಿ ಸರಕಾರ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನೊಬೆಲ್ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಹೇಳಿದ್ದಾರೆ.

TIMESOFINDIA.COM 15 Jul 2018, 3:27 pm
ಬೆಂಗಳೂರು: ಅಂತರ್ಜಾಲದಲ್ಲಿ ಅಶ್ಲೀಲ ವೀಡಿಯೋ ದೊರೆಯದಂತೆ ಮಾಡಬೇಕು. ಮಕ್ಕಳ ರಕ್ಷಣೆಗಾಗಿ ಸರಕಾರ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ನೊಬೆಲ್ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಹೇಳಿದ್ದಾರೆ. ಅಶ್ಲೀಲ ವೀಡಿಯೋಗಳನ್ನು ಅಂತರ್ಜಾಲ ಬಳಕೆದಾರರಿಗೆ ದೊರೆಯದಂತೆ ಮಾಡಬೇಕು. ಅಲ್ಲದೆ, ಎಲ್ಲ ಡೇಟಾ ಕಂಪನಿಗಳು ಕಾನೂನಿನಡಿ ಬರಬೇಕು. ಅಲ್ಲದೆ, ಇಂತಹ ವೀಡಿಯೋಗಳಿಂದಲೇ ಮಕ್ಕಳ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಹ ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹೇಳಿದರು.
Vijaya Karnataka Web kailash satyarthi


ಡೀಮ್ಡ್ ವಿವಿಯೊಂದರ ಸಮಾರಂಭದಲ್ಲಿ ಮಾತನಾಡಿದ ಸತ್ಯಾರ್ಥಿ, ಮಕ್ಕಳನ್ನು ದುರುಪಯೋಗ ಪಡೆದುಕೊಳ್ಳುವವರನ್ನು ಎಲ್ಲರೂ ದೂರ ಇಡಬೇಕು. ಧಾರ್ಮಿಕ ಮುಖಂಡರ ಪ್ರಭಾವ ದೊಡ್ಡದಿರುತ್ತದೆ. ಹೀಗಾಗಿ ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಅವರು ಪ್ರಯತ್ನಿಸಬೇಕು ಎಂದು ಹೇಳಿದರು. ಮಕ್ಕಳ ಕಳ್ಳಸಾಗಣೆ ವಿರೋಧಿ ಕಾನೂನು ಅಗತ್ಯವಿದ್ದು, ಇದು ಹಲವು ವರ್ಷಗಳಿಂದಲೂ ಬಾಕಿ ಉಳಿದಿದೆ. ಸದ್ಯ, ಕೇಂದ್ರ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಆದರೆ ಸಂಸತ್‌ನಲ್ಲಿ ಇದನ್ನು ಮಂಡಿಸಬೇಕಿದೆ ಎಂದು ಸತ್ಯಾರ್ಥಿ ಹೇಳಿದರು.

ಭಾರತದಲ್ಲಿ ಮಕ್ಕಳಿಗೆ ರಕ್ಷಣೆ ಸಿಗಲು ಯುವಕರ ಚಳುವಳಿಯನ್ನು ಆರಂಭಿಸುವವರೆಗೆ ಕಾನೂನು ಅಥವಾ ನೀತಿಗಳ ಮೂಲಕ ಸಾಮಾಜಿಕ ಪರಿವರ್ತನೆ ಮಾಡಲು ಸಾಧ್ಯವಿಲ್ಲ. ನಾವು ಮಂಗಳ ಗ್ರಹವನ್ನು ಮುಟ್ಟಿರಬಹುದು. ಆದರೆ, ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಹಾಗೂ ಕಳ್ಳ ಸಾಗಣೆಗೊಳಗಾಗಿರುವ ಮಕ್ಕಳನ್ನು ತಲುಪಲು ಸಾಧ್ಯವಾಗಿಲ್ಲ. ಮಕ್ಕಳ ಕಳ್ಳಸಾಗಣೆ ಹಾಗೂ ಮಕ್ಕಳನ್ನು ಮಾರುವುದಂತೆ ತಡೆಯುವುದು ಸದ್ಯದ ಅಗತ್ಯವಾಗಿದೆ ಎಂದು ಸತ್ಯಾರ್ಥಿ ಹೇಳಿದರು.

ಇನ್ನು, ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ದೇವಿ, ಮಾಜಿ ಸಚಿವ ರಾಮಲಿಂಗ ರೆಡ್ಡಿ ಹಾಗೂ ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ