ಆ್ಯಪ್ನಗರ

ಬೆಂಗಳೂರಿನಲ್ಲಿ 847.56 ಕಿಲೋ ಮೀಟರ್‌ ರಸ್ತೆಯಲ್ಲಿ ಗುಂಡಿ: ಜಂಟಿ ಸಮೀಕ್ಷೆಯಲ್ಲಿ ಪತ್ತೆ

ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತ 2015ರಲ್ಲಿಕೋರಮಂಗಲದ ವಿಜಯ್‌ ಮೆನನ್‌ ಸಲ್ಲಿಸಿರುವ ಪಿಐಎಲ್‌ ಕುರಿತು ಸಿಜೆ ರಿತುರಾಜ್‌ ಅವಸ್ಥಿ ಹಾಗೂ ನ್ಯಾ.ಅಶೋಕ್‌ ಕಿಣಗಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

Vijaya Karnataka Web 30 Jun 2022, 10:24 pm
ಬೆಂಗಳೂರು: ಬೆಂಗಳೂರು ನಗರದಲ್ಲಿನ 1392 ಕಿ.ಮೀ. ಉದ್ದದ ಮುಖ್ಯ ರಸ್ತೆಯ ಪೈಕಿ 847.56 ಕಿ.ಮೀ. ರಸ್ತೆಗಳಲ್ಲಿ ಗುಂಡಿಗಳಿವೆ ಎಂಬ ಅಂಶ ಬಿಬಿಎಂಪಿ ಮತ್ತು ಪೈಥಾನ್‌ ಯಂತ್ರ ಬಳಸಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಸುವ ಅಮೆರಿಕನ್‌ ರೋಡ್‌ ಟೆಕ್ನಾಲಜಿ ಸೊಲ್ಯೂಷನ್ಸ್‌ (ಎಆರ್‌ಟಿಎಸ್‌) ನಡೆಸಿದ ಜಂಟಿ ಸರ್ವೆಯಲ್ಲಿ ದೃಢಪಟ್ಟಿದೆ.
Vijaya Karnataka Web ರಸ್ತೆ ಗುಂಡಿ
ರಸ್ತೆ ಗುಂಡಿ


ನ್ಯಾಯಾಲಯದ ನಿರ್ದೇಶನದಂತೆ ನಡೆಸಿದ ಸಮೀಕ್ಷೆಯಲ್ಲಿಈ ಅಂಶ ಕಂಡುಬಂದಿದೆ. ಸದ್ಯ ಎಆರ್‌ಟಿಎಸ್‌ಗೆ 397 ಕಿಲೋಮೀಟರ್‌ ರಸ್ತೆಯಲ್ಲಿ ಗುಂಡಿ ಮುಚ್ಚಲು ಕಾರಾರ‍ಯದೇಶ ನೀಡಲಾಗಿದೆ ಮತ್ತು ಉಳಿದ 576 ಕಿಲೋಮೀಟರ್‌ ರಸ್ತೆ ಗುಂಡಿಗಳನ್ನು ಮುಚ್ಚಲು ಟೆಂಡರ್‌ ಕರೆಯಲಾಗಿದೆ ಎಂದು ಹೈಕೋರ್ಟ್‌ಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ತಿಳಿಸಿತು.

ಭ್ರಷ್ಟಾಚಾರ ನಿಗ್ರಹ ದಳವೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ: ಎಸಿಬಿ ವಿರುದ್ಧ ಹೈಕೋರ್ಟ್‌ ಕಿಡಿ

ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತ 2015ರಲ್ಲಿ ಕೋರಮಂಗಲದ ವಿಜಯ್‌ ಮೆನನ್‌ ಸಲ್ಲಿಸಿರುವ ಪಿಐಎಲ್‌ ಕುರಿತು ಸಿಜೆ ರಿತುರಾಜ್‌ ಅವಸ್ಥಿ ಹಾಗೂ ನ್ಯಾ.ಅಶೋಕ್‌ ಕಿಣಗಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಕೋರ್ಟ್‌ಗೆ ಹಾಜರು

ನ್ಯಾಯಾಲಯ ಮಂಗಳವಾರ ನೀಡಿದ್ದ ನಿರ್ದೇಶನದಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮತ್ತು ಚೀಫ್‌ ಎಂಜಿನಿಯರ್‌ ಎಂ.ಲೋಕೇಶ್‌ ನ್ಯಾಯಪೀಠದ ಮುಂದೆ ವಿಚಾರಣೆಗೆ ಹಾಜರಾದರು.

ವಿಚಾರಣೆ ಆರಂಭಿಸುತ್ತಿದ್ದಂತೆಯೇ ಬಿಬಿಎಂಪಿ ಪರ ವಕೀಲ ವಿ.ಶ್ರೀನಿ, ''ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ 397 ಕಿಲೋಮೀಟರ್‌ ರಸ್ತೆಗಳ ಗುಂಡಿಗಳನ್ನು ಪೈಥಾನ್‌ ಯಂತ್ರದ ಮೂಲಕ ಎಆರ್‌ಟಿಎಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಕಾರಾರ‍ಯದೇಶವನ್ನೂ ನೀಡಲಾಗಿದೆ'' ಎಂದರು.

''ನ್ಯಾಯಾಲಯದ ನಿರ್ದೇಶನದಂತೆ ಬಿಬಿಎಂಪಿ ಮತ್ತು ಎಆರ್‌ಟಿಎಸ್‌ ಸಂಸ್ಥೆ ಜಂಟಿಯಾಗಿ ನಡೆಸಿದ ಸರ್ವೆ ಪ್ರಕಾರ 847.56 ಕಿ.ಮೀ. ರಸ್ತೆಗುಂಡಿ ಸರಿಪಡಿಸಬೇಕಿದೆ. 397 ಕಿಲೋಮೀಟರ್‌ ದುರಸ್ತಿಗೆ ಕಾರಾರ‍ಯದೇಶ ನೀಡಲಾಗಿದ್ದು, ಉಳಿದ 576 ಕಿಲೋಮೀಟರ್‌ ರಸ್ತೆ ದುರಸ್ತಿಗೆ ಟೆಂಡರ್‌ ಕರೆಯಲಾಗಿದೆ. ಜು.15ರಂದು ಟೆಂಡರ್‌ ತೆರೆದು ಅದನ್ನು ಅಂತಿಮಗೊಳಿಸಲಾಗುವುದು,'' ಎಂದು ತಿಳಿಸಿದರು.

ಆಗ ನ್ಯಾಯಪೀಠ,''ಮಿಸ್ಟರ್‌ ಕಮಿಷನರ್‌, ರಸ್ತೆ ಗುಂಡಿ ಸರಿಪಡಿಸಲು ಏನಾದರೂ ಕಷ್ಟಗಳಿವೆಯೇ? ರಸ್ತೆ ಗುಂಡಿಗಳಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ. ಬಿಬಿಎಂಪಿ ಅಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು, ಮೊದಲು ಗುಂಡಿಗಳನ್ನು ಸರಿಪಡಿಸಿ'' ಎಂದು ತಾಕೀತು ಮಾಡಿತು.

''ಅಲ್ಲದೆ, ಪ್ರಧಾನಿ ಭೇಟಿ ನೀಡಿದ್ದ ದುರಸ್ತಿಪಡಿಸಿದ್ದ ರಸ್ತೆಗಳು ಹಾಳಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಾಗಿವೆ ಬಂದಿವೆಯೆಲ್ಲಾ ನಿಜವೇ?'' ಎಂದು ಬಿಬಿಎಂಪಿ ಮುಖ್ಯ ಆಯುಕ್ತರನ್ನು ಪ್ರಶ್ನಿಸಿದರು.

ಪಾಲಿಕೆ ಪರ ವಕೀಲರು, ಪ್ರಧಾನಿ ಬಂದಾಗ ಬಳಸಿದ ರಸ್ತೆಗಳು ಹಾಳಾಗಿಲ್ಲ, ಒಳಚರಂಡಿ ಸಮಸ್ಯೆಯಿಂದ ಹಾಳಾದ ರಸ್ತೆಯನ್ನು ದುರಸ್ತಿ ಮಾಡಲಾಗಿದೆ,'' ಎಂದು ಸ್ಪಷ್ಟನೆ ನೀಡಿದರು.

Traffic Fine: ಇನ್‌ಸ್ಟಾಗ್ರಾಂ ರೀಲ್ಸ್‌ ಮಾಡಿ ಟ್ರಾಫಿಕ್‌ ಪೊಲೀಸರಿಂದ ದಂಡ ಹಾಕಿಸಿಕೊಂಡ..!

ಕೊನೆಗೆ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪಾರದರ್ಶಕಗೊಳಿಸಲು ಸಲಹೆ ನೀಡಿ ರಸ್ತೆ ಸರಿಪಡಿಸುವವರೆಗೆ ಪಿಐಎಲ್‌ ಮುಕ್ತಾಯಗೊಳಿಸುವುದಿಲ್ಲಎಂದು ವಿಚಾರಣೆ ಜು.27ಕ್ಕೆ ನಿಗದಿಪಡಿಸಿತು. ಅಷ್ಟರಲ್ಲಿಗುಂಡಿ ಮುಚ್ಚುವ ಕಾಮಗಾರಿಯಲ್ಲಾಗಿರುವ ಪ್ರಗತಿಯ ಕುರಿತು ವಿವರ ಸಲ್ಲಿಸಬೇಕು ಎಂದು ಹೈಕೋರ್ಟ್‌ ಆದೇಶಿಸಿತು.

ಕಾಮಗಾರಿ ಪೂರ್ಣಗೊಂಡ ನಂತರ ಎಆರ್‌ಟಿಎಸ್‌ ಸಂಸ್ಥೆ ಜಿಐ ಟ್ಯಾಗ್‌ಸಹಿತ ಪೋಟೋ ವಿವರಗಳನ್ನು ಒದಗಿಸಬೇಕು, ಅದನ್ನು ಪರಿಶೀಲಿಸಿ ಬಿಬಿಎಂಪಿ ಆ ಸಂಸ್ಥೆಯ ಬಿಲ್‌ಗಳನ್ನು ಅನುಮೋದಿಸಿ ಹಣ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶ ನೀಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ