ಆ್ಯಪ್ನಗರ

ಒಣ ಕಸ ನೀಡಿ ಹಣ ಪಡೆಯಿರಿ

ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಿದ ನಿವಾಸಿಗಳಿಗೆ ಹಣವನ್ನು ನೀಡುತ್ತಿದ್ದಾರೆ.

Vijaya Karnataka Web 11 Dec 2017, 11:19 am
ಬೆಂಗಳೂರು: ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಿ ಸ್ವಚ್ಛತೆ ಬಗ್ಗೆ ಮತ್ತಷ್ಟು ಅರಿವು ಮೂಡಿಸಲು ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಒಂದು ವಿನೂತನ ವಿಧಾನವನ್ನು ಕಂಡುಕೊಂಡಿದೆ.
Vijaya Karnataka Web put the dry waste out
ಒಣ ಕಸ ನೀಡಿ ಹಣ ಪಡೆಯಿರಿ


ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ನೀಡಿದ ನಿವಾಸಿಗಳಿಗೆ ಹಣವನ್ನು ನೀಡುತ್ತಿದ್ದಾರೆ. ಹಳೆಯ ಪತ್ರಿಕೆಗಳಿಗೆ ಕೆಜಿ 8 ರೂಪಾಯಿ, ಪ್ಲಾಸ್ಟಿಕ್‌ಗೆ ಕೆಜಿಗೆ 14 ರೂಪಾಯಿ, ಕಾರ್ಡ್‌ಬೋರ್ಡ್‌ ಶೀಟ್‌ಗಳಿಗೆ ಕೆಜಿಗೆ 5 ರೂಪಾಯಿ, ಹಳೆಯ ಪುಸ್ತಕಗಳೆಗೆ ಹಣ ನೀಡುತ್ತಿದ್ದಾರೆ.

ಪ್ರತೀದಿನ ಪೌರಕಾರ್ಮಿಕರು ತಮ್ಮ ಕೆಲಸ ಮುಗಿಸಿದ ಬಳಿಕ ಮನೆ ಮನೆಗೆ ಹೋಗಿ ಒಣ ಕಸ ಸಂಗ್ರಹಿಸಿ ಅದನ್ನು ಆ ಏರಿಯಾದ ಸಂಗ್ರಹಣ ಸ್ಥಳಕ್ಕೆ ಸಾಗಿಸುತ್ತಾರೆ. ಈ ವಿನೂತನ ವಿಧಾನ ಒಣಕಸವನ್ನು ಸೂಕ್ತವಾಗಿ ವಿಂಗಡಿಸಲು ಮತ್ತಷ್ಟು ಸಹಕಾರಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ