ಆ್ಯಪ್ನಗರ

ಲಾಕ್‌ಡೌನ್‌ ಎಫೆಕ್ಟ್‌: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೆಬ್ಬಾವು ಪಯಣ!

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಹೆಬ್ಬಾವು ಪಯಣ ನಡೆಸಿದೆ. ಬಸ್‌ ಡ್ರೈವರ್‌ನ ಮೀಟರ್‌ ಬೋರ್ಡ್‌ನಲ್ಲಿ ಹಾವು ಇತ್ತು.

Vijaya Karnataka Web 3 Jun 2020, 6:19 pm
ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಹೆಬ್ಬಾವಿನ ಮರಿಯೊಂದು ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದೆ. ಲಾಕ್‍ಡೌನ್‍ನಿಂದಾಗಿ ಕಳೆದ ಎರಡು ತಿಂಗಳಿನಿಂದ ಬಸ್‌ ಸಂಚಾರ ನಿಂತಿತ್ತು. ಇದೀಗ ಮತ್ತೆ ಬಸ್ ಸಂಚಾರ ಆರಂಭವಾಗಿದೆ. ಮಂಗಳವಾರ ಮಂಗಳೂರಿನಿಂದ ರಾತ್ರಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ವೊಂದು‌ ಪ್ರಯಾಣಿಕರ ಸಮೇತ ಬಂದಿತ್ತು.
Vijaya Karnataka Web ksrtc


ಪ್ರಯಾಣಿಕರನ್ನ ಕೆಳಗಿಳಿಸಿ ಬಸ್ಸನ್ನು ಸ್ಯಾನಿಟೈಸರ್ ಮಾಡುವ ವೇಳೆ ಬಸ್ಸಿನ ಮೀಟರ್ ಬೋರ್ಡ್ ಬಳಿ ಹೆಬ್ಬಾವಿನ ಮರಿ ಕಾಣಿಸಿಕೊಂಡಿದೆ. ಸುಮಾರು ಒಂದೂವರೆ ಅಡಿ ಉದ್ದದ ಅಂದಾಜು ಐದು ತಿಂಗಳಿನ ಹೆಬ್ಬಾವು ಎಂದು ತಿಳಿದುಬಂದಿದೆ. ಗಾಬರಿಗೊಂಡ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಕೂಡಲೇ ಬಿಬಿಎಂಪಿ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕಾಗಮಿಸಿದ ಬಿಬಿಎಂಪಿ ಅರಣ್ಯಸಂರಕ್ಷಾ ಘಟಕದ ಸಿಬ್ಬಂದಿ ಹೆಬ್ಬಾವಿನ ಮರಿಯನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಲಾಕ್‍ಡೌನ್‌ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ಮಂಗಳೂರು ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಲಾಗಿತ್ತು. ಮಳೆ ಹಿನ್ನೆಲೆ ಬೆಚ್ಚಗಿನ ಜಾಗವೆಂದು ತಿಳಿದು ಬಸ್ಸಿನಳಗೆ ಹಾವು ಕುಳಿತಿರುವ ಸಾಧ್ಯತೆ ಇದೆ. ಆದ್ರೆ ಮಂಗಳೂರಿನಿಂದ ಬೆಂಗಳೂರಿನವರೆಗೂ ಚಾಲಕನಿಗೆ ಇದು ಗೊತ್ತೆ ಆಗಲಿಲ್ಲ.

ಮಂಗಳೂರು: ಪೊಲೀಸರ ಬೈಕ್‌ನಲ್ಲೇ ಪರಾರಿಯಾದ ಕೊಲೆ ಯತ್ನ ಆರೋಪಿ!


ಕೊರೊನಾ ಸೋಂಕುವ ಹರಡುವ ಭೀತಿ ಹಿನ್ನೆಲೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತ್ತು. ಕಳೆದ 2 ತಿಂಗಳಿನಿಂದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಸ್ಥಗಿತಗೊಳಿಸಿತ್ತು. ‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ