ಆ್ಯಪ್ನಗರ

ಗೋಮಾಂಸ ಸೇವನೆ: ವಿವಾದಿತ ಟ್ವೀಟ್‌ ತೆಗೆದುಹಾಕಿದ ರಾಮಚಂದ್ರ ಗುಹಾ ಮನೆಗೆ ಪೊಲೀಸ್ ಭದ್ರತೆ

ಬಲಪಂಥೀಯ ಸಂಘಟನೆಗಳ ಬೆಂಬಲಿಗರು ಅವರನ್ನು ಟ್ವಿಟರ್‌ನಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಂತರ ವಿವಾದಿತ ಟ್ವೀಟ್‌ ಅನ್ನು ತೆಗೆದುಹಾಕಿದ್ದಾರೆ.

Vijaya Karnataka Web 10 Dec 2018, 12:33 pm
ಬೆಂಗಳೂರು: ಗೋವಾದಲ್ಲಿ ದನದ ಮಾಂಸ ಸೇವಿಸಿದ್ದರ ಕುರಿತು ಚಿತ್ರ ಸಮೇತ ಟ್ವೀಟ್‌ ಮಾಡಿದ ಹೆಸರಾಂತ ಇತಿಹಾಸಕಾರ ರಾಮಚಂದ್ರ ಗುಹಾ ಅವರಿಗೆ ಬೆದರಿಕೆ ಕರೆಗಳು ಬಂದಿವೆ.
Vijaya Karnataka Web guha2


ಬಲಪಂಥೀಯ ಸಂಘಟನೆಗಳ ಬೆಂಬಲಿಗರು ಅವರನ್ನು ಟ್ವಿಟರ್‌ನಲ್ಲಿಯೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಂತರ ವಿವಾದಿತ ಟ್ವೀಟ್‌ ಅನ್ನು ತೆಗೆದುಹಾಕಿದ್ದಾರೆ.


ಬಿಜೆಪಿ ಆಡಳಿತವಿರುವ ಗೋವಾದಲ್ಲಿ ದನದ ಮಾಂಸ ಸೇವಿಸಲು ಖುಷಿಯಾಗುತ್ತದೆ ಎಂಬ ಧಾಟಿಯಲ್ಲಿ ಅವರು ಟ್ವೀಟ್‌ ಮಾಡಿದ್ದರು. ಈ ಮಧ್ಯೆ ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಬೀಫ್ ಸಂಬಂಧ ರಾಮಚಂದ್ರ ಗುಹಾ ಮಾಡಿರುವ ಟ್ವೀಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.


ಗೋವಾದಲ್ಲಿ ಊಟ ಮಾಡುತ್ತಿದ್ದ ಚಿತ್ರವನ್ನು ಸದಭಿರುಚಿಯಿಂದ ಕೂಡಿಲ್ಲ ಹಾಗೂ ಈ ಟ್ವೀಟ್ ಬಳಿಕ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಪೋಸ್ಟ್ ಡಿಲಿಟ್ ಮಾಡಿದ್ದೇನೆ ಎಂದು ಗುಹಾ ಟ್ವೀಟ್ ಮಾಡಿದ್ದಾರೆ.


ಬೀಫ್ ವಿಚಾರದಲ್ಲಿ ಕೇಸರಿ ಪಕ್ಷ ಬಿಜೆಪಿ ಮಾಡುತ್ತಿರುವ ಪುಂಡಾಟವನ್ನು ಹೇಳುವ ಉದ್ದೇಶವಿತ್ತು. ತಮಗಿಷ್ಟವಾದ ಆಹಾರ, ಇಷ್ಟ ಪಡುವ ಉಡುಪು ಹಾಗೂ ಇಷ್ಟ ಪಟ್ಟವರನ್ನು ಪ್ರೀತಿಸುವ ಹಕ್ಕು ಎಲ್ಲರಿಗೂ ಇದೆ ಎಂಬ ನಂಬಿಕೆಯನ್ನು ಒತ್ತಿಹೇಳುತ್ತಿದ್ದೇನೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ