ಆ್ಯಪ್ನಗರ

ಮಯನ್ಮಾರ್ ಪ್ರಜೆಯ ಪ್ರಾಣ ಉಳಿಸಿತು ಕರ್ನಾಟಕದಿಂದ ಕಳುಹಿಸಲಾದ ಅಪರೂಪದ ರಕ್ತ

ಮಯನ್ಮಾರ್‌ನ ಯಾಂಗೋನ್ ಜನರಲ್ ಆಸ್ಪತ್ರೆಯಿಂದ ಈ ರಕ್ತಕ್ಕಾಗಿ ಮನವಿ ಬಂದಿತ್ತು. ದಾನಿ, ಸ್ವೀಕರಿಸುವವ ಅಥವಾ ಅವಳ ಸಂಬಂಧಿ ಯಾರು ಕೂಡ ಇಷ್ಟು ದೂರ ಪ್ರಯಾಣಿಸುವ ಹಾಗಿರಲಿಲ್ಲ.

TIMESOFINDIA.COM 2 Dec 2018, 12:08 pm
ಬೆಂಗಳೂರು: ಅಪರೂಪದಲ್ಲಿ ಅಪರೂಪವೆನ್ನಲಾದ ಬಾಂಬೆ ರಕ್ತದ ಗುಂಪಿನ ಮಯನ್ಮಾರ್ ಪ್ರಜೆಯೊಬ್ಬರ ಜೀವ ಉಳಿಸಲು ಕರ್ನಾಟಕದಿಂದ ರಕ್ತ ಕಳುಹಿಸಬೇಕಾಯಿತು. ದಾವಣಗೆರೆ ಬ್ಲಡ್ ಬ್ಯಾಂಕ್‌ನಿಂದ ಕೋರಿಯರ್ ಮೂಲಕ ರಕ್ತ ಕಳುಹಿಸಿ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ 34 ವರ್ಷದ ಮಹಿಳೆಗೆ ಪೂರೈಸಲಾಯಿತು.
Vijaya Karnataka Web Blood


ಮಯನ್ಮಾರ್‌ನ ಯಾಂಗೋನ್ ಜನರಲ್ ಆಸ್ಪತ್ರೆಯಿಂದ ಈ ರಕ್ತಕ್ಕಾಗಿ ಮನವಿ ಬಂದಿತ್ತು. ದಾನಿ, ಸ್ವೀಕರಿಸುವವ ಅಥವಾ ಅವಳ ಸಂಬಂಧಿ ಯಾರು ಕೂಡ ಇಷ್ಟು ದೂರ ಪ್ರಯಾಣಿಸುವ ಹಾಗಿರಲಿಲ್ಲ. ಹೀಗಾಗಿ ಅಗತ್ಯವಿದ್ದ 2 ಯುನಿಟ್ ರಕ್ತವನ್ನು ಕೊರಿಯರ್‌ನಲ್ಲಿ ಕಳುಹಿಸಲಾಯಿತು. 2-8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಲಾದ ರಕ್ತ ಮೂರು ದಿನಗಳಲ್ಲಿ ಮಯನ್ಮಾರ್ ತಲುಪಿದೆ.

ಬಾಂಬೆ ಬ್ಲಡ್ ದಾನಿಗಳ ವಿಶೇಷ ನೋಂದಾವಣಿ ನಡೆಸುತ್ತಿರುವ ಬೆಂಗಳೂರು ಮೂಲದ ಸಂಕಲ್ಪ ಇಂಡಿಯಾ ಫೌಂಡೇಶನ್‌ನ್ನು ಮಯನ್ಮಾರ್ ವೈದ್ಯರು ಸಂಪರ್ಕಿಸಿದ್ದರು.
ಈ ಸಂಸ್ಥೆ ಬಾಂಬೆ ಬ್ಲಡ್ ಗುಂಪಿನ ರಕ್ತದಾನಿಗಳನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತದೆ.

ಮಯನ್ಮಾರ್‌ನಲ್ಲಿ ಈ ಗುಂಪಿನ ರಕ್ತದಾನಿಗಳ ಬಗ್ಗೆ ಮಾಹಿತಿ ಸಿಗಲಿಲ್ಲವಾದ್ದರಿಂದ ಭಾರತದಿಂದ ರಕ್ತಕ್ಕೆ ಬೇಡಿಕೆ ಇಟ್ಟರು ಎಂದು ಸಂಕಲ್ಪ ಇಂಡಿಯಾ ಫೌಂಡೇಶನ್‌ ಸಂಚಾಲಕ ರಜತ್ ಅಗ್ರವಾಲ್ ತಿಳಿಸಿದ್ದಾರೆ.

ಬಾಂಬೆ ರಕ್ತದ ಗುಂಪು ಎಂದರೇನು?

ಜಾಗತಿಕ ಮಾನವ ಜನಸಂಖ್ಯೆಯಲ್ಲಿ ಕೇವಲ 0.0004% ಜನರಲ್ಲಿ ಕಂಡುಬರುವ ಅಪರೂಪದ ರಕ್ತದ ಗುಂಪಿದು, ಇದು O+ve ವಿಭಾಗಕ್ಕೆ ಸೇರಿದೆ. ಭಾರತದಲ್ಲಿ, 10,000-17,000 ಜನರಲ್ಲಿ ಒಬ್ಬರು ಈ ಗುಂಪಿನ ರಕ್ತವನ್ನು ಹೊಂದಿದ್ದಾರೆ.

ಬಾಂಬೆ ರಕ್ತ ಗುಂಪನ್ನು ಎಚ್/ಎಚ್ ರಕ್ತ ಗುಂಪೆಂದು ಸಹ ಕರೆಯಲಾಗುತ್ತದೆ. ಈ ರಕ್ತದ ಗುಂಪು ಮೊದಲ ಬಾರಿಗೆ 1952ರಲ್ಲಿ ಭಾರತದ ಬಾಂಬೆ ನಗರ ಅಂದರೆ ಇಂದಿನ ಮುಂಬಯಿ ನಗರದಲ್ಲಿ ಬೆಳಕಿಗೆ ಬಂದಿತು. ಈ ರಕ್ತದ ಗುಂಪಿಗೆ ಸೇರಿದ ಯಾವುದೇ ವ್ಯಕ್ತಿ ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ರಕ್ತ ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಈ ಗುಂಪಿನ ರಕ್ತದ ಸಂಗ್ರಹ ಕಡಿಮೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ