ಆ್ಯಪ್ನಗರ

ವಿಶೇಷ ಚೇತನರಿಗೆ ಮೀಸಲಾತಿ ಶೇಕಡ 4ಕ್ಕೇರಿಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರಿ ಹೇಳಿಕೆ

Vijaya Karnataka Web 3 Dec 2017, 10:45 pm
ಬೆಂಗಳೂರು: ರಾಜ್ಯ ಸರ್ಕಾರದ ಎ ಮತ್ತು ಬಿ ವೃಂದದ ಹುದ್ದೆಗಳಲ್ಲಿ ವಿಕಲಚೇತನರ ಮೀಸಲಾತಿಯನ್ನು ಈಗಿರುವ ಶೇಕಡ 3 ರಿಂದ 4ಕ್ಕೆ ಹೆಚ್ಚಿಸಲು ನಿಯಮಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
Vijaya Karnataka Web reservation for different abled umashree
ವಿಶೇಷ ಚೇತನರಿಗೆ ಮೀಸಲಾತಿ ಶೇಕಡ 4ಕ್ಕೇರಿಕೆ


ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿವ್ಯಾಂಗರಿಗೆ ಈ ವರ್ಷ ನೀಡಬೇಕಾದ ಮೋಟಾರು ವಾಹನ ಮತ್ತು ಲ್ಯಾಪ್‌ಟ್ಯಾಪ್ ವಿತರಣೆ ಶೀಘ್ರ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

2016-17ನೇ ಸಾಲಿನ 2 ಸಾವಿರ ಮೋಟರ್ ವಾಹನ ಮತ್ತು 2017-18ರಲ್ಲಿ 4 ಸಾವಿರ ಮೋಟಾರು ವಾಹನಗಳನ್ನು ವಿತರಿಸಲಾಗುವುದು ಎಂದು ಅವರು ಹೇಳಿದರು.

ವಿಕಲಚೇತನರಿಗೆ ನೀಡಲಾಗುವ ವಿವಾಹ ಪ್ರೋತ್ಸಾಹ ಧನ ಕಾರ್ಯಕ್ರಮದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿ ನಿಯಮ ಸಡಿಲಿಸಲು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಮ್ಹಾನ್ಸ್, ಮೊಬಿಲಿಟಿ ಇಂಡಿಯಾ ಸೇರಿದಂತೆ ವಿಕಲಚೇತನರ ಕಲ್ಯಾಣಕ್ಕೆ ದುಡಿಯುತ್ತಿರುವ ಸಂಸ್ಥೆಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ