ಆ್ಯಪ್ನಗರ

ದರೋಡೆ ಗ್ಯಾಂಗ್‌ ಬಂಧನ: 43 ಮೊಬೈಲ್‌ಗಳ ವಶ

ರಾತ್ರಿವೇಳೆ ಕೆಲಸ ಮುಗಿಸಿಕೊಂಡು ಒಂಟಿಯಾಗಿ ಮನೆಗೆ ತೆರಳುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮೊಬೈಲ್‌ ಮತ್ತು ಹಣ ದರೋಡೆ ನಡೆಸುತ್ತಿದ್ದ ಗ್ಯಾಂಗನ್ನು ಬಂಧಿಸಿರುವ ಉತ್ತರ ಡಿಸಿಪಿ ವಿಭಾಗದ ಪೊಲೀಸರು 4.5 ಲಕ್ಷ ರೂ ಮೌಲ್ಯದ 43 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 18 Jul 2018, 5:00 am
ಬೆಂಗಳೂರು: ರಾತ್ರಿವೇಳೆ ಕೆಲಸ ಮುಗಿಸಿಕೊಂಡು ಒಂಟಿಯಾಗಿ ಮನೆಗೆ ತೆರಳುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಮೊಬೈಲ್‌ ಮತ್ತು ಹಣ ದರೋಡೆ ನಡೆಸುತ್ತಿದ್ದ ಗ್ಯಾಂಗನ್ನು ಬಂಧಿಸಿರುವ ಉತ್ತರ ಡಿಸಿಪಿ ವಿಭಾಗದ ಪೊಲೀಸರು 4.5 ಲಕ್ಷ ರೂ ಮೌಲ್ಯದ 43 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web robbery


ಜು.11 ರಂದು ಆರ್‌ಎಂಸಿ ಯಾರ್ಡ್‌ ಠಾಣೆ ವ್ಯಾಪ್ತಿಯ ರಿಂಗ್‌ ರಸ್ತೆ ಸಮೀಪ ಇರುವ ಮಾಡರ್ನ್‌ ಬ್ರೆಡ್‌ ಫ್ಯಾಕ್ಟರಿ ಸಮೀಪ ಆರೋಪಿಗಳು ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದಾರೆ ಎನ್ನುವ ಸುಳಿವು ಹಿಡಿದ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಚಂದ್ರಾಲೇಔಟ್‌ ನಿವಾಸಿ ಸಿಕಂದರ್‌ ಪಾಷಾ, ಗೋವಿಂದರಾಜ್‌, ಸೈಯ್ಯದ್‌ ವಸೀಮ್‌ ಮತ್ತು ಜಬ್ಬಾರ್‌ ಖಾನ್‌ ಬಂಧಿತರು. ಅವರು ಐಷಾರಾಮಿ ಜೀವನ ನಿರ್ವಹಣೆಗಾಗಿ ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ