ಆ್ಯಪ್ನಗರ

'ಕನ್ನಡಕ್ಕಾಗಿ ಓಟ ೨೦೧೮' ನಾಳೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು 'ವಿಜಯ ಕರ್ನಾಟಕ'ದ ಸಹಯೋಗದೊಂದಿಗೆ ಜ. 7ರಂದು ಬೆಳಗ್ಗೆ 6.30ಕ್ಕೆ ಕಬ್ಬನ್‌ಪಾರ್ಕ್‌ನಲ್ಲಿ 'ಕನ್ನಡಕ್ಕಾಗಿ ಓಟ ೨೦೧೮ ' ಹಮ್ಮಿಕೊಂಡಿದೆ.

Vijaya Karnataka Web 6 Jan 2018, 10:03 am
ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರವು 'ವಿಜಯ ಕರ್ನಾಟಕ'ದ ಸಹಯೋಗದೊಂದಿಗೆ ಜ. 7ರಂದು ಬೆಳಗ್ಗೆ 6.30ಕ್ಕೆ ಕಬ್ಬನ್‌ಪಾರ್ಕ್‌ನಲ್ಲಿ'ಕನ್ನಡಕ್ಕಾಗಿ ಓಟ2018' ಹಮ್ಮಿಕೊಂಡಿದೆ.
Vijaya Karnataka Web run for kannada
'ಕನ್ನಡಕ್ಕಾಗಿ ಓಟ ೨೦೧೮' ನಾಳೆ


'ಪ್ರಣತಿ ಕನ್ನಡಕ್ಕಾಗಿ ಓಟ' ಹೆಸರಿನಲ್ಲಿ ಸಾವಿರ ಮಂದಿ ಇದರಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳು ಮತ್ತು ಕುಟುಂಬಕ್ಕೂ ಪ್ರತ್ಯೇಕ ಅಂತರದ ಓಟವನ್ನು ಆಯೋಜಿಸಲಾಗಿದೆ. ಕನ್ನಡದ ಬಗೆಗಿನ ಗೌರವ ಹೆಚ್ಚಿಸಲು, ಎಲ್ಲಾ ಪ್ರಾದೇಶಿಕ ಭಾಷೆಗಳ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿಓಟ ಆಯೋಜಿಸಲಾಗಿದೆ.

ಪ್ರಣತಿ ಓಟ 10 ಕಿ.ಮೀ. ಇದ್ದರೆ, ಮಕ್ಕಳಿಗಾಗಿ ವಿಶೇಷವಾಗಿ 2 ಕಿ.ಮೀ. ಅಂತರದ ಓಟ ಹಾಗೂ ಕುಟುಂಬ ಸದಸ್ಯರಿಗಾಗಿ 3 ಕಿ.ಮೀ. ಓಟ ಮತ್ತು ಫನ್‌ ರನ್‌ ಹೆಸರಿನಲ್ಲಿ5 ಕಿ.ಮೀ. ಓಟ ಆಯೋಜಿಸಲಾಗಿದೆ.

ಓಟದಲ್ಲಿಪಾಲ್ಗೊಳ್ಳುವ ಪ್ರಮುಖರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ , ಚಿತ್ರನಟನಟಿಯರಾದ ದಿಗಂತ್‌, ಅಕುಲ್‌ ಬಾಲಾಜಿ, ಎ.ಪಿ.ಅರ್ಜುನ್‌, ರೆಹಮಾನ್‌, ಶ್ವೇತಾ ಚಂಗಪ್ಪ. ಫಿಟ್‌ನೆಸ್‌ ಎಕ್ಸ್‌ಪರ್ಟ್‌ ವನಿತಾ ಅಶೋಕ್‌

ಓಟದ ವೆಬ್‌ಸೈಟ್‌ : htpp://runforkannada.com/


ಪ್ರಣತಿ ಓಟ 10 ಕಿಮೀ

ಫನ್‌ ರನ್‌ 5ಕಿಮೀ

ಫ್ಯಾಮಿಲಿ ರನ್‌ 3 ಕಿಮೀ

ಮಕ್ಕಳ ಓಟ 2 ಕಿಮೀ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ