ಆ್ಯಪ್ನಗರ

ಡಿಜೆ ಹಳ್ಳಿ ಗಲಭೆಗೆ ಪೊಲೀಸರ ನಿರ್ಲಕ್ಷ್ಯ ವರ್ತನೆ ಕಾರಣವಂತೆ ! ಖಾಕಿ ವಿರುದ್ಧ ಎಸ್‌ಡಿಪಿಐ ಆರೋಪ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಪೊಲೀಸರ ನಿರ್ಲಕ್ಷ್ಯ ವರ್ತನೆ ಕಾರಣ ಎಂದು ಎಸ್‌ಡಿಪಿಐ ಆರೋಪ ಮಾಡಿದೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತಾಗಿ ಹೇಳಿದ್ದು ಹೀಗೆ.

Vijaya Karnataka Web 12 Aug 2020, 4:17 pm
ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಗೆ ಪೊಲೀಸರ ನಿರ್ಲಕ್ಷ್ಯ ವರ್ತನೆ ಕಾರಣ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಆರೋಪಿಸಿದೆ. ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಎಸ್‌ಡಿಪಿಐ ಮುಖಂಡರು ಪೊಲೀಸರ ಮೇಲೆಯೇ ಗೂಬೆ ಕೂರಿಸಿದ್ದಾರೆ.
Vijaya Karnataka Web dj halli


ಪ್ರವಾದಿ ಮುಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದ ನವೀನ್‌ ವಿರುದ್ಧ ಪೊಲೀಸರು ದೂರು ದಾಖಲು ಮಾಡಿಕೊಂಡಿಲ್ಲ. ಪ್ರವಾದಿ ನಿಂದನೆ ಮಾಡಿದಂತ ವ್ಯಕ್ತಿಯ ವಿರುದ್ಧ ಜನರು ಪ್ರತಿಭಟನೆ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿಲ್ಲ. ಶಾಸಕರ ಒತ್ತಡದಿಂದ ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಎಸ್‌ಡಿಪಿಐ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.


ಗಲ್ಲಿಗಲ್ಲಿಗೆ ನುಗ್ಗಿ ಕೆ.ಜಿ. ಹಳ್ಳಿ ಆರೋಪಿಗಳ ಎಡೆಮುರಿ ಕಟ್ಟುತ್ತೇವೆ: ಆರ್‌. ಅಶೋಕ್‌ ಶಪಥ

ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ. ಈ ಹಿಂದೆಯೂ ಹಲವಾರು ಪೋಸ್ಟ್‌ಗಳನ್ನು ನವೀನ್ ಹಾಕಿದ್ದ ಆ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಇದರಿಂದ ಜನರು ಆಕ್ರೋಶಗೊಂಡು ದೂರು ಕೊಡಲಿಕ್ಕೆ ಹೋಗಿದ್ದಾರೆ. ಮಂಗಳವಾರ ಸಂಜೆ ಐದು ಗಂಟೆಯಿಂದ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ. ಸಂಜೆ 6 ಗಂಟೆಯ ವರೆಗೂ ಜನರು ಸಂಯಮ ಕಾಯ್ದುಕೊಂಡಿದ್ದಾರೆ. ದೂರು ದಾಖಲು ಮಾಡದ ಕಾರಣ ಪ್ರತಿಭಟನೆ ಮಾಡಿದ್ದಾರೆ ಹಾಗೂ ಆರೋಪಿಯ ಬಂಧನಕ್ಕೆ ಒತ್ತಾಯ ಮಾಡಿದ್ದಾರೆ.

ಬಳಿಕ ಡಿಸಿಪಿ ಸೂಚನೆ ನೀಡಿದ ಮೇಲೆ ಎಫ್‌ಐಆರ್‌ ದಾಖಲು ಮಾಡಲು ಮುಂದಾಗಿದ್ದಾರೆ. ಇದರಿಂದ ಜನರುಆಕ್ರೋಶ ಮಾಡಿ ಗಲಭೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವುದು ಸರಿಯಲ್ಲ, ಆದರೆ ಮೂರು ಜನರು ಪೊಲೀಸ್ ಗೋಲಿಬಾರ್‌ನಲ್ಲಿ ಬಲಿಯಾಗಲು ಪೊಲೀಸರ ನಿಧಾನಗತಿ ಕಾರಣ. ಈ ನಿಟ್ಟಿನಲ್ಲಿ ಸರ್ಕಾರ ಮೃತರ ಕುಟುಂಬಕ್ಕರ ಪರಿಹಾರ ನೀಡಬೇಕು ಎಂದು ಎಸ್‌ಡಿಪಿಐ ಮುಖಂಡರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ