ಆ್ಯಪ್ನಗರ

ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರು ಒಂದಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಹೇಳಿದ್ದೇವೆ; ಸಿದ್ದರಾಮಯ್ಯ

ಹಾವೇರಿ ಜಿಲ್ಲೆಯ ಮುಖಂಡರ ಜೊತೆ ನಿನ್ನೆ ಸಭೆ ನಡೆಸಿದ್ದೇವೆ. ಶ್ರೀನಿವಾಸ್ ಮಾನೆ, ಮನೋಹರ ತಹಶೀಲ್ದಾರ್ ಇಬ್ಬರ ಜೊತೆಯೂ ಮಾತುಕತೆ ನಡೆಸಿದ್ದೇವೆ. ಇನ್ನೂ ನಾವು ಯಾರಿಗೆ ಟಿಕೆಟ್ ಎಂಬುವುದು ಘೋಷಣೆ ಮಾಡಿಲ್ಲ. ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಕ್ಕರೆ, ಮನೋಹರ ತಹಶೀಲ್ದಾರ್ ಮಾನೆ ಪರ ಕೆಲಸ ಮಾಡಬೇಕು. ತಹಶೀಲ್ದಾರ್ ಗೆ ಟಿಕೆಟ್ ಸಿಕ್ಕರೆ ಶ್ರೀನಿವಾಸ್ ಮಾನೆ ಬೆಂಬಲಿಸಬೇಕು. ಈ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

Vijaya Karnataka Web 1 Oct 2021, 2:54 pm
ಬೆಂಗಳೂರು: ಉಪಚುನಾವಣೆ ಟಿಕೆಟ್ ಸಂಬಂಧ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದ್ದು, ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರು ಒಂದಾಗಿ ಚುನಾವಣೆಯಲ್ಲಿ ಕೆಲಸ ಮಾಡಬೇಕೆಂದು ಹೇಳಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
Vijaya Karnataka Web Don’t comply with Cauvery authority’s order: Siddaramaiah
Former Karnataka chief minister Siddaramaiah


ಶುಕ್ರವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲೆಯ ಮುಖಂಡರ ಜೊತೆ ನಿನ್ನೆ ಸಭೆ ನಡೆಸಿದ್ದೇವೆ. ಶ್ರೀನಿವಾಸ್ ಮಾನೆ, ಮನೋಹರ ತಹಶೀಲ್ದಾರ್ ಇಬ್ಬರ ಜೊತೆಯೂ ಮಾತುಕತೆ ನಡೆಸಿದ್ದೇವೆ. ಇನ್ನೂ ನಾವು ಯಾರಿಗೆ ಟಿಕೆಟ್ ಎಂಬುವುದು ಘೋಷಣೆ ಮಾಡಿಲ್ಲ. ಶ್ರೀನಿವಾಸ್ ಮಾನೆಗೆ ಟಿಕೆಟ್ ಸಿಕ್ಕರೆ, ಮನೋಹರ ತಹಶೀಲ್ದಾರ್ ಮಾನೆ ಪರ ಕೆಲಸ ಮಾಡಬೇಕು. ತಹಶೀಲ್ದಾರ್ ಗೆ ಟಿಕೆಟ್ ಸಿಕ್ಕರೆ ಶ್ರೀನಿವಾಸ್ ಮಾನೆ ಬೆಂಬಲಿಸಬೇಕು. ಈ ಸಂಧಾನಕ್ಕೆ ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
Karnataka By Election: ಹಾನಗಲ್‌, ಸಿಂದಗಿಯಲ್ಲಿ ಕಾಂಗ್ರೆಸ್‌ಗೆ ಗೆಲುವು ಫಿಕ್ಸ್‌ ಎಂದ ಈಶ್ವರ್‌ ಖಂಡ್ರೆ
ಸಿಂದಗಿ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇವತ್ತು ಕೆಪಿಸಿಸಿಯಲ್ಲಿ ಸಿಂದಗಿ ಮೀಟಿಂಗ್ ಇದೆ. ಅಲ್ಲಿ ಒಮ್ಮತದ ನಿರ್ಧಾರ ಮಾಡುತ್ತೇವೆ ಎಂದ ಸಿದ್ದರಾಮಯ್ಯ, ಸುಣಗಾರ ಟಿಕೆಟ್ ಕೇಳಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸುಣಗಾರ ಸೀನಿಯರ್ ‌ಲೀಡರ್. ಹನ್ನೆರಡು ವರ್ಷ ಜಿಲ್ಲಾಧ್ಯಕ್ಷರಾಗಿ ಕೆಲಸ‌ ಮಾಡಿದ್ದಾರೆ. ಅವರು ಕೂಡ ಟಿಕೆಟ್ ಆಕಾಂಕ್ಷಿ. ಅವರ ಜೊತೆ ನಾನು ಮಾತನಾಡಿದ್ದೇನೆ. ಹಾಗಾಗಿ ಇವತ್ತಿನ ಮೀಟಿಂಗ್ ನಲ್ಲಿ‌ ನಿರ್ಧಾರವಾಗಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ಆರ್ ಎಸ್ಎಸ್ ಸೇರುವಂತೆ ಸಚಿವ ಸೋಮಶೇಖರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸೋಮಶೇಖರ್ ಆರ್ಎಸ್ಎಸ್ ನಿಂದ ಬಂದವನಾ? ಅದಕ್ಕೆ ಹಾಗೆ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.

ಪಂಚಮಸಾಲಿ ಮೀಸಲಾತಿ ಸಿಗುವ ದಿನ ಹತ್ತಿರ ಬಂದಿದೆ; ಸಿ.ಸಿ ಪಾಟೀಲ್
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಸಿಗುವ ದಿನ ಹತ್ತಿರ ಬಂದಿದೆ. ಮೀಸಲಾತಿ ಬಗ್ಗೆ ಹಿಂದುಳಿದ ವರ್ಗದ ಆಯೋಗದ ವರದಿ ಬಂದ ತಕ್ಷಣವೇ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾಳೆ ಕೋರ್ಟ್ ನಲ್ಲಿ ಸರ್ಕಾರದ ನಿಲುವನ್ನು ಯಾರು ಪ್ರಶ್ನೆ ಮಾಡಬಾರದು. ಆ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವ ಸಿ.ಸಿ ಪಾಟೀಲ್ ಹೇಳಿದ್ದಾರೆ.
ಸಿಂದಗಿ, ಹಾನಗಲ್ ಬೈಎಲೆಕ್ಷನ್‌ಗೆ ಅಭ್ಯರ್ಥಿ ಹೆಸರು ಶೀಘ್ರ ಅಂತಿಮ: ಸಲೀಂ ಅಹ್ಮದ್
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು,ಹೋರಾಟಕ್ಕೆ ಮತ್ತೊಂದು ಹೆಸರು ಜಯಮೃತ್ಯುಂಜಯ ಸ್ವಾಮೀಜಿ. ಅವರು ಪಾದಯಾತ್ರೆ ಆರಂಭ ಮಾಡುವುದು ಕಷ್ಟವಾಗಲಿದೆ ಎಂಬ ಕಾರಣಕ್ಕಾಗಿ ಪಾದಯಾತ್ರೆ ಕೈ ಬಿಡಿ ಎಂದು ಸ್ವಾಮಿಜಿಯವರಿಗೆ ಮನವಿ ಮಾಡಿದ್ವಿ, ಪಾದಯಾತ್ರೆ ಕೈ ಬಿಡಬೇಕಾದರೆ ಮೀಸಲಾತಿ ಘೋಷಣೆ ಮಾಡಿ ಎಂದು ಹೇಳಿದ್ರು.‌ ಕೆಲವರು ಪಾದಯಾತ್ರೆ ಮಾಡಿ ನಾಟಕ ಮಾಡ್ತಾರೆ, ಆದರೆ ನಮ್ಮ ಜಯಮೃತ್ಯುಂಜಯ ಸ್ವಾಮಿಜಿಯವರು ಒಂದೇ ಒಂದು ದಿನ ನನಗೆ ಕಾಲು ನೋವು ಎಂದು ಹೇಳಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ