ಆ್ಯಪ್ನಗರ

ಸಿಸಿಬಿ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಸೈಲೆಂಟ್‌ ಸುನಿಲ

ಸಿಸಿಬಿ ಮುಖ್ಯಸ್ಥ ಅಲೋಕ್‌ ಕುಮಾರ್‌ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೈಲೆಂಟ್‌ ಸುನಿಲ ಹೈಕೋರ್ಟ್‌ ಮೊರೆ ಹೋಗಿದ್ದಾನೆ.

Vijaya Karnataka 3 May 2019, 5:00 am
ಬೆಂಗಳೂರು: ಸಿಸಿಬಿ ಮುಖ್ಯಸ್ಥ ಅಲೋಕ್‌ ಕುಮಾರ್‌ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸೈಲೆಂಟ್‌ ಸುನಿಲ ಹೈಕೋರ್ಟ್‌ ಮೊರೆ ಹೋಗಿದ್ದಾನೆ.
Vijaya Karnataka Web silent sunil complaints against ccb
ಸಿಸಿಬಿ ವಿರುದ್ಧ ಹೈಕೋರ್ಟ್‌ ಮೊರೆ ಹೋದ ಸೈಲೆಂಟ್‌ ಸುನಿಲ


ಸುನೀಲ ಸಲ್ಲಿಸಿರುವ ಅರ್ಜಿಯನ್ನು ಇತ್ತೀಚೆಗೆ ವಿಚಾರಣೆ ನಡೆಸಿರುವ ನ್ಯಾ.ಅಲೋಕ್‌ ಅರಾಧೆ ಅವರಿದ್ದ ಹೈಕೋರ್ಟ್‌ನ ಏಕಸದಸ್ಯಪೀಠ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.

ಪ್ರಕರಣವೊಂದರಲ್ಲಿ ತನಗೆ ಜಾಮೀನು ಸಿಕ್ಕಿತ್ತು. ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಕೂಡಲೇ ವಶಕ್ಕೆ ಪಡೆದ ಪೊಲೀಸರು ರಾತ್ರಿ 11 ರವರೆಗೆ ಬಂಧನದಲ್ಲಿಟ್ಟಿದ್ದರು. ರೌಡಿಗಳ ಪೆರೇಡ್‌ ಹೆಸರಲ್ಲಿ ಅಲೋಕ್‌ ಕುಮಾರ್‌ ದೌರ್ಜನ್ಯ ಎಸಗಿದ್ದಾರೆ. ತುಮಕೂರಿನ ಮಾಜಿ ಮೇಯರ್‌ ಕೊಲೆ ಕೇಸ್‌ನಲ್ಲಿ ಸಿಲುಕಿಸುವ ಎಚ್ಚರಿಕೆ ನೀಡಿದ್ದಾರೆ. ಪೊಲೀಸರು ಸುಳ್ಳು ಕೇಸ್‌ ದಾಖಲಿಸುವ ಸಾಧ್ಯತೆ ಇದೆ ಎಂದು ಸುನಿಲ ಮನವಿಯಲ್ಲಿ ತಿಳಿಸಿದ್ದಾನೆ. ತನ್ನ ಮೇಲೆ ದೌರ್ಜನ್ಯ ಎಸಗದಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ತನ್ನನ್ನು 3 ದಿನ ಅಕ್ರಮ ಬಂಧದಲ್ಲಿಟ್ಟುಕೊಂಡಿದ್ದಕ್ಕೆ ಪÜರಿಹಾರ ಕೊಡಿಸಬೇಕು ಎಂದೂ ಸಹ ಸುನಿಲ ನ್ಯಾಯಾಲಯವನ್ನು ಕೋರಿದ್ದಾನೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ