ಆ್ಯಪ್ನಗರ

ಸ್ಮಾರ್ಟ್ ಸಿಟಿ ರಿಯಾಲಿಟಿ ಚೆಕ್‌: ಬೆಂಗಳೂರಿನಲ್ಲಿ ತಿಂಗಳ ಹಿಂದಷ್ಟೇ ಆರಂಭವಾಗಿದೆ ಕಾಮಗಾರಿ !

ಸ್ಮಾರ್ಟ್ ಸಿಟಿ ನಗರವೊಂದರ ಸರ್ವಾಂಗೀಣ ಅಭಿವೃದ್ಧಿಯ ಕನಸಿನ ಸಾಕಾರ. ಬೆಂಗಳೂರಿನಲ್ಲಿ ಕೊನೆಯ ಹಂತದಲ್ಲಿ ಸ್ಮಾರ್ಟ್ ಸಿಟಿ ಯೋಜನೆಗೆ ಅನುಮತಿ ಸಿಕ್ಕಿದ್ದು, ಇದುವರೆಗೆ 12 ಕೋಟಿ ರೂ. ಖರ್ಚು ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿ ತಿಂಗಳ ಹಿಂದಷ್ಟೇ ಆರಂಭಗೊಂಡಿದೆ.

Vijaya Karnataka Web 9 Jan 2020, 1:11 pm
ಬೆಂಗಳೂರು: ಕೊನೆಯ ಹಂತದಲ್ಲಿ ಘೋಷಣೆಯಾದ ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ 200 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ, ಇದುವರೆಗೆ ಖರ್ಚಾಗಿದ್ದು 12 ಕೋಟಿ ಮಾತ್ರ. ಟೆಂಡರ್‌ಶ್ಯೂರ್‌ ಮಾದರಿಯಡಿ ಹಲವು ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ತಿಂಗಳ ಹಿಂದಷ್ಟೇ ಆರಂಭಗೊಂಡಿವೆ.
Vijaya Karnataka Web smart city bccl


ಸ್ಮಾರ್ಟ್‌ ಸಿಟಿ ಯೋಜನೆಯಡಿ ಎರಡು ಹಂತಗಳಲ್ಲಿ ಒಟ್ಟು 13 ಪ್ಯಾಕೇಜ್‌ಗಳಲ್ಲಿ 36 ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ 455 ಕೋಟಿ ರೂ. ವ್ಯಯಿಸಲಾಗುತ್ತಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, 16 ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ.

ಟೆಂಡರ್‌ಗೆ ಯಾರೂ ಬಂದಿಲ್ಲ
ಕಾಮರಾಜ ರಸ್ತೆ, ಬೌರಿಂಗ್‌ ಆಸ್ಪತ್ರೆ ರಸ್ತೆ, ರಾಜಭವನ ರಸ್ತೆ, ಕಸ್ತೂರಬಾ ರಸ್ತೆ, ಕ್ವೀನ್ಸ್‌ ರಸ್ತೆ, ರೇಸ್‌ ಕೋರ್ಸ್‌ ರಸ್ತೆ, ವಿಲ್ಲರ್ಸ್‌ ರಸ್ತೆ, ಕಂಟೋನ್ಮೆಂಟ್‌ ರಸ್ತೆ, ಅಲಿ ಅಸ್ಗರ್‌ ರಸ್ತೆ ಸೇರಿದಂತೆ 16 ರಸ್ತೆಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಉಳಿದ ರಸ್ತೆಗಳಲ್ಲೂ ಶೀಘ್ರದಲ್ಲೇ ಕಾಮಗಾರಿ ಶುರುವಾಗಲಿದೆ ಎನ್ನುತ್ತಾರೆ ಸ್ಮಾರ್ಟ್‌ ಸಿಟಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ. ಕೆ.ಆರ್‌.ಮಾರುಕಟ್ಟೆಯ ಪುನರ್‌ನವೀಕರಣಕ್ಕೆ 2-3 ಸಲ ಟೆಂಡರ್‌ ಕರೆದರೂ ಯಾರೊಬ್ಬರೂ ಭಾಗವಹಿಸಿಲ್ಲ. ಹೀಗಾಗಿ ಮರು ಟೆಂಡರ್‌ ಕರೆಯಲಾಗುತ್ತಿದೆ. ಶಿವಾಜಿನಗರ ಬಸ್‌ ನಿಲ್ದಾಣ ಅಭಿವೃದ್ಧಿ, ಕಬ್ಬನ್‌ ಪಾರ್ಕ್‌ನ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಲಾಗಿದೆ.

ಈ ಸುದ್ದಿ ಓದಿ: ಇನ್ನೂ 'ಸ್ಮಾರ್ಟ್‌' ಆಗದ ರಾಜ್ಯದ ನಗರಗಳು: 4 ವರ್ಷ ಕಳೆದರೂ ನಿಧಾನಗತಿ

ಮಂಜೂರಾದ ಅನುದಾನ


ಇದನ್ನೂ ಓದಿ: ಸ್ಮಾರ್ಟ್‌ ಆಗದ ದಾವಣಗೆರೆ: 73 ಕೋಟಿ ರೂ. ಬಡ್ಡಿ ಬಂದಿದ್ದೇ ಸಾಧನೆ

ಸ್ಮಾರ್ಟ್ ಸಿಟಿ ಶಿವಮೊಗ್ಗದಲ್ಲಿ ಇಲಾಖೆಗಳ ನಡುವೆ ಸಮನ್ವಯವೇ ಇಲ್ಲ: 6 ತಿಂಗಳಿಂದ ಮಾತ್ರ ಶರವೇಗದಲ್ಲಿ ಕಾಮಗಾರಿಗಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ