ಆ್ಯಪ್ನಗರ

​ಸ್ಪೀಕ್‌ ಫಾರ್‌ ಇಂಡಿಯಾ ಭಾಷಣ ಸ್ಪರ್ಧೆ

ವಿಜಯ ಕರ್ನಾಟಕ, ದಿ ಟೈಮ್ಸ್‌ ಆಫ್‌ ಇಂಡಿಯಾ ಹಾಗೂ ಫೆಡರಲ್‌ ಬ್ಯಾಂಕ್‌ ಸಹಯೋಗದಲ್ಲಿನಡೆಯುವ 'ಸ್ಪೀಕ್‌ ಫಾರ್‌ ಇಂಡಿಯಾಕರ್ನಾಟಕ' ಸ್ಪರ್ಧೆಯ 2017 ನೇ ಸಾಲಿನ ಆವೃತ್ತಿಯು ಡಿ.4 ರಂದು ನಗರದ ಧರ್ಮಾರಾಂ ಕಾಲೇಜಿನಲ್ಲಿ ನಡೆಯಲಿದೆ.

Vijaya Karnataka Web 3 Dec 2017, 10:20 am
ಬೆಂಗಳೂರು: ವಿಜಯ ಕರ್ನಾಟಕ, ದಿ ಟೈಮ್ಸ್‌ ಆಫ್‌ ಇಂಡಿಯಾ ಹಾಗೂ ಫೆಡರಲ್‌ ಬ್ಯಾಂಕ್‌ ಸಹಯೋಗದಲ್ಲಿನಡೆಯುವ 'ಸ್ಪೀಕ್‌ ಫಾರ್‌ ಇಂಡಿಯಾಕರ್ನಾಟಕ' ಸ್ಪರ್ಧೆಯ 2017 ನೇ ಸಾಲಿನ ಆವೃತ್ತಿಯು ಡಿ.4 ರಂದು ನಗರದ ಧರ್ಮಾರಾಂ ಕಾಲೇಜಿನಲ್ಲಿ ನಡೆಯಲಿದೆ.
Vijaya Karnataka Web speak for india competition
​ಸ್ಪೀಕ್‌ ಫಾರ್‌ ಇಂಡಿಯಾ ಭಾಷಣ ಸ್ಪರ್ಧೆ


ಪ್ರತಿ ವರ್ಷ ನಡೆಯುವ 'ಸ್ಪೀಕ್‌ ಫಾರ್‌ ಇಂಡಿಯಾ' ಭಾಷಣ ಸ್ಪರ್ಧೆಯಲ್ಲಿಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದಾರೆ. ಪ್ರಚಲಿತ ವಿದ್ಯಮಾನ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ಪರ್ಧಿಗಳು ಮಾತನಾಡುತ್ತಾರೆ. ಈ ಬಾರಿ ರಾಜ್ಯಾದ್ಯಂತ ಸ್ಪರ್ಧೆ ನಡೆಯುತ್ತಿದೆ. ಡಿ.4 ರಂದು ಬೆಳಗ್ಗೆ 10.30ಕ್ಕೆ ಧರ್ಮಾರಾಂ ಕಾಲೇಜಿನ ಜೆಬಿಸಿ ಸಭಾಂಗಣದಲ್ಲಿಸ್ಪರ್ಧೆಗೆ ಚಾಲನೆ ದೊರೆಯಲಿದೆ.

ವಿದ್ಯಾರ್ಥಿಗಳಲ್ಲಿಭಾಷಣದ ಕಲೆಯನ್ನು ಬೆಳೆಸುವ ಸಲುವಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿಪಾಲ್ಗೊಳ್ಳಲು ಬೆಂಗಳೂರು ಹಾಗೂ ಸುತ್ತಮುತ್ತಲಿನ ಶಾಲೆಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ವಿಷಯವನ್ನು ಸೂಕ್ತವಾಗಿ ಮಂಡಿಸುವುದು, ಮಾಹಿತಿಪೂರ್ಣ ವಿಷಯಗಳನ್ನು ಹೇಳುವುದು, ಭಾಷಣ ಕಲೆಯನ್ನು ಸಿದ್ಧಿಸಿಕೊಂಡಿರುವುದು ಸೇರಿದಂತೆ ಹಲವಾರು ಅಂಶಗಳನ್ನು ಗಮನಿಸಿ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ 8590553989 ಸಂಪರ್ಕಿಸಬಹುದು.

ಸ್ಪರ್ಧೆ ನಡೆಯುವ ಸ್ಥಳ

ಧರ್ಮಾರಾಂ ಕಾಲೇಜು, ಕ್ರೈಸ್ಟ್‌ ವಿಶ್ವವಿದ್ಯಾಲಯ ಸಮೀಪ, ಹೊಸೂರು ರಸ್ತೆ , ಬೆಂಗಳೂರು.

ಯಾವತ್ತು : ಡಿ.4

ಸಮಯ : ಬೆಳಗ್ಗೆ 10.30 ಗಂಟೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ