ಆ್ಯಪ್ನಗರ

ಕ್ರೀಡಾ ಸಾಧಕ ಪೊಲೀಸರಿಗೆ ಬಡ್ತಿ, ವಿಶೇಷ ಭತ್ಯೆ

ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇಲಾಖೆಯ ಗೌರವ ಹೆಚ್ಚಿಸುವ ಕ್ರೀಡಾಪಟುಗಳಿಗೆ ಮುಂಬಡ್ತಿ ಮತ್ತು ವಿಶೇಷ ಭತ್ಯೆ ನೀಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.

Vijaya Karnataka Web 18 Jan 2017, 10:24 am
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಇಲಾಖೆಯ ಗೌರವ ಹೆಚ್ಚಿಸುವ ಕ್ರೀಡಾಪಟುಗಳಿಗೆ ಮುಂಬಡ್ತಿ ಮತ್ತು ವಿಶೇಷ ಭತ್ಯೆ ನೀಡಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
Vijaya Karnataka Web special allowance for soprtman police in karnataka
ಕ್ರೀಡಾ ಸಾಧಕ ಪೊಲೀಸರಿಗೆ ಬಡ್ತಿ, ವಿಶೇಷ ಭತ್ಯೆ


ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಕೋರಮಂಗಲ ಕೆಎಸ್ಆರ್ಪಿ ಪೆರೇಡ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಪೊಲೀಸ್ ವಾರ್ಷಿಕ ಕ್ರೀಡಾಕೂಟ ಸಮಾರೋಪ ಸಮಾರಂಭ-2016’ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಇಲಾಖೆಯ ಕೀರ್ತಿ ತರುವ ಕ್ರೀಡಾಪಟುಗಳಿಗೆ ಈಗ ಸಿಗುತ್ತಿರುವ ಸೌಲಭ್ಯಕ್ಕಿಂತ ಹೆಚ್ಚಿನ ಸೌಲಭ್ಯ ನೀಡಲಾಗುವುದು. ಅಂತಹ ಕ್ರೀಡಾಳುಗಳು ಸಮಸ್ಯೆ ಎದುರಿಸುತ್ತಿದ್ದಲ್ಲಿ ಹಿರಿಯ ಅಧಿಕಾರಿಗಳು ಇಲಾಖೆಗೆ ಪತ್ರ ಬರೆಯಿರಿ. ಆ ಕೊರತೆಯನ್ನು ನೀಗಿಸಲಾಗುವುದು’ಎಂದು ಸಚಿವರು ಭರವಸೆ ನೀಡಿದರು.

ನೇಮಕದಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ:

‘ಕ್ರೀಡೆಯಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಹೆಸರುಗಳಿಸಿರುವವರಿಗೆ ವಿಶೇಷ ಮೀಸಲಾತಿ ಅಡಿ ಪೊಲೀಸ್ ಇಲಾಖೆಗೆ ನೇಮಿಸಿಕೊಳ್ಳಲಾಗುವುದು. ಇಲಾಖೆಯಲ್ಲಿ ಕ್ರೀಡಾಪಟುಗಳು ಹೆಚ್ಚಿದರೆ ಇಲಾಖೆಯ ಗೌರವವೂ ಹೆಚ್ಚುತ್ತದೆ’ ಎಂದರು.

ಮೂವತ್ತು ವರ್ಷಗಳಿಂದ ‘ಹಗ್ಗಜಗ್ಗಾಟ’ದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿರುವ ಕೆಎಸ್ಆರ್ಪಿ ಪೊಲೀಸರು ಈ ಬಾರಿಯೂ ‘ಹಗ್ಗಜಗ್ಗಾಟ ಸ್ಪರ್ಧೆ’ಯಲ್ಲಿ ಮೊದಲ ಸ್ಥಾನ ಗಳಿಸಿ, ಬಹುಮಾನ ಪಡೆದುಕೊಂಡರು.

ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅದಕ್ಕೂ ಮುನ್ನ ಸಮಾರೋಪ ಸಮಾರಂಭದಲ್ಲಿ ನಡೆದ ಓಟ, ರಿಲೇ ಮತ್ತಿತರ ಕ್ರೀಡೆಗಳಿಗೆ ಗುಂಡು ಹಾರಿಸುವ ಮೂಲಕ ಸಚಿವರು ಚಾಲನೆ ನೀಡಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಪ್ರವೀಣ್ ಸೂದ್, ಬಿ.ಎನ್.ಎಸ್.ರೆಡ್ಡಿ, ಕಮಲ್ ಪಂತ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪತ್ನಿಗೂ ಬಹುಮಾನ !
‘ಬಕೆಟ್ ಇನ್ ದಿ ಬಾಲ್’ ಸ್ಪರ್ಧೆಯಲ್ಲಿ ವಿಜೇತರಾದ ಪತ್ನಿ ಕನ್ನಿಕಾ ಪರಮೇಶ್ವರಿ ಅವರಿಗೆ ಖುದ್ದು ಪರಮೇಶ್ವರ್ ಅವರೇ ಪ್ರಶಸ್ತಿ ಹಸ್ತಾಂತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ