ಆ್ಯಪ್ನಗರ

ಎರಡು ರಾತ್ರಿ 'ಕಳೆದರೆ' ಸಾಲ ಮನ್ನಾ, ಬೆಂಗಳೂರಿನ ಮಹಿಳೆಗೆ ಹೀಗೊಂದು ಆಫರ್!

ಮೊದಲೇ ಬಸವಳಿದಿದ್ದ ಈ ಮಹಿಳೆಗೆ ಇದು ಶಾಕ್ ಕೊಟ್ಟಿತು. ಆದರೆ ಇದಕ್ಕಿಂತಲೂ ದೊಡ್ಡದಾಗಿ ಶಾಕ್ ಮೇಲೆ ಶಾಕ್‌ ಕೊಡುತ್ತಲೇ ಬಂದರು ಸಾಲಗಾರರು. ಮೊದಲು ದಿನಕ್ಕೆ ಐದಾರು ಬಾರಿ ಫೋನ್ ಕರೆ ಮಾಡಿ ಸಾಲ ತೀರಿಸುವಂತೆ ಆಗ್ರಹಿಸಿದರು.

Vijaya Karnataka Web 2 Sep 2020, 1:47 pm
ಬೆಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಹಲವಾರು ಮಂದಿ ಭವಿಷ್ಯವೇ ಮಂಕಾಗಿದೆ. ಇಂಥ ಸಂದರ್ಭವನ್ನು "ಅವಕಾಶವಾದಿ'ಗಳು, 'ಕಾಮುಕರು' ಯಾವ ಯಾವ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಕೇಳಿದರೆ ನಿಜಕ್ಕೂ ರೋಷ ಉಕ್ಕಿ ಬರುತ್ತದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡಿದ್ದ ಮಹಿಳೆಯೊಬ್ಬಳು ಪಟ್ಟ ಕಷ್ಟ ನಿಜಕ್ಕೂ ಮನಸನ್ನು ವಿಲವಿಲಗೊಳಿಸುತ್ತದೆ. ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಈ ಮಹಿಳೆ ವೈದ್ಯಕೀಯ ಚಿಕಿತ್ಸೆಗಾಗಿ 4 ಸಾವಿರ ರೂ. ಸಾಲವನ್ನು ಪಡೆದಿದ್ದರು. ಆದರೆ ಇಷ್ಟು ಸಣ್ಣ ಮೊತ್ತದ ಸಾಲವೇ ಶೂಲವಾಗುತ್ತದೆ ಎಂದು ಆಕೆ ಕನಸಿನಲ್ಲೂ ನೆನಸಿರಲಿಲ್ಲ.

ಜೀವನ ಭೀಮಾನಗರದ ಈ ಮಹಿಳೆ ಲಾಕ್‌ಡೌನ್‌ ನಂತರ ಕೆಲಸವನ್ನು ಕಳೆದುಕೊಂಡು ಮನೆ ಸಾಗಿಸುವುದೇ ಕಷ್ಟವಾಗಿತ್ತು. ಆದರೆ ಸಾಲಗಾರರು ಕಾಟ ಕೊಡಲು ಶುರು ಮಾಡಿದರು. ಸಾಲದ ಮೇಲೆ ಬಡ್ಡಿ ಸೇರಿಸಿ ಅದಕ್ಕೆ ಚಕ್ರಬಡ್ಡಿ ಹಾಕಿ 4 ಸಾವಿರ ಇರುವ ಮೊತ್ತ 8 ಸಾವಿರ ಆಗಿದೆ ಎಂದರು.

ಮೊದಲೇ ಬಸವಳಿದಿದ್ದ ಈ ಮಹಿಳೆಗೆ ಇದು ಶಾಕ್ ಕೊಟ್ಟಿತು. ಆದರೆ ಇದಕ್ಕಿಂತಲೂ ದೊಡ್ಡದಾಗಿ ಶಾಕ್ ಮೇಲೆ ಶಾಕ್‌ ಕೊಡುತ್ತಲೇ ಬಂದರು ಸಾಲಗಾರರು. ಮೊದಲು ದಿನಕ್ಕೆ ಐದಾರು ಬಾರಿ ಫೋನ್ ಕರೆ ಮಾಡಿ ಸಾಲ ತೀರಿಸುವಂತೆ ಆಗ್ರಹಿಸಿದರು. ನಂತರ ಅವಾಚ್ಯ ನಿಂದನೆ ಆರಂಭವಾಯಿತು. ನಂತರ ಆಕೆಯ ಮೇಲೆ ಧಮಕಿ ಹಾಕಲು ಮುಂದಾದರು.

ನಂತರ ಆಕೆಯ ಫೋನ್‌ಗೆ ಕೆಲಸು ಮೆಸೇಜ್‌ಗಳನ್ನು ಕಳುಹಿಸಲು ಮುಂದಾದರೂ. ಇದನ್ನು ತಡೆದುಕೊಳ್ಳಲು ಮಹಿಳೆಗೆ ಸಾಧ್ಯವಾಗಲಿಲ್ಲ. ಅಲ್ಲಿ ಇಲ್ಲಿ ಅಡ್ಜೆಸ್ಟ್ ಮಾಡಿ ಐದು ಸಾವಿರ ರೂ. ತೀರಿಸಿದರು. ಇನ್ನೂ ಮೂರು ಸಾವಿರ ರೂ. ಕೊಡಬೇಕು ಎಂದು ಸಾಲ ನೀಡಿದವರು ಆಗ್ರಹಿಸಿದರು.

ಇದು ಆಕೆಯನ್ನು ಇನ್ನೂ ಆತಂಕಕ್ಕೆ ದೂಡಿತು. ಕೆಲವು ದಿನಗಳ ನಂತರ ಮತ್ತೆ ಫೋನ್‌ ಕರೆ ಮಾಡಿದ ಕೆಲವು ಏಜೆಂಟರು. ನಿಮ್ಮ ಸಾಲವನ್ನು ಮನ್ನಾ ಮಾಡಿಬಿಡುತ್ತೇವೆ. ಆದರೆ ನೀವು "ಎರಡು ರಾತ್ರಿ ಕಳೆಯಬೇಕು' ಎಂದು ಹೇಳಿದ್ದೇ ತಡ ಆ ಮಹಿಳೆಗೆ ನಿಜಕ್ಕೂ ಶಾಕ್‌ ಹೊಡೆದಂತಾಗಿದೆ.

ಈ ಸಂಬಂಧ ಪೊಲೀಸರಿಗೆ ಮಹಿಳೆ ದೂರು ಸಲ್ಲಿಸಿದ್ದಾಳೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಈ ಸಂಬಂಧ ವಿಜಯ ಕರ್ನಾಟಕ ಸೋದರ ಸಂಸ್ಥೆ ಬೆಂಗಳೂರು ಮಿರರ್‌ ಹಿರಿಯ ಪೊಲೀಸ್‌ ಅಧಿಕಾರಿಗಳ ಪ್ರತಿಕ್ರಿಯೆ ಪಡೆದಿದ್ದು, ಈಗಾಗಲೇ ಏಜೆಂಟರ, ಸಾಲ ನೀಡಿದವರ ಫೋನ್‌ ನಂಬರ್ ಪಡೆದಿದ್ದೇವೆ. ಅವರನ್ನು ವಿಚಾರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ