ಆ್ಯಪ್ನಗರ

ಬಿಡಿಎ ಅಧ್ಯಕ್ಷರಾಗಿ ಎಸ್​ಆರ್​ ವಿಶ್ವನಾಥ್‌ ನೇಮಕ ಪ್ರಶ್ನಿಸಿ ಅರ್ಜಿ; ರಾಜ್ಯ ಸರಕಾರಕ್ಕೆ ಹೈಕೋರ್ಟ್​ನಿಂದ ನೋಟಿಸ್‌

ಬಿಡಿಎ ಅಧ್ಯಕ್ಷರು, ಹಣಕಾಸು, ಎಂಜಿನಿಯರ್‌ ಮತ್ತು ನಗರ ಯೋಜನಾ ಸದಸ್ಯ ಸೇರಿ ನಾಲ್ವರು ಪೂರ್ಣಾವಧಿ ಸದಸ್ಯರು ಇರುತ್ತಾರೆ. ಉಳಿದ 18 ಮಂದಿ ಅಲ್ಪಾವಧಿ ಸದಸ್ಯರು ಇರುತ್ತಾರೆ. ಸದ್ಯಕ್ಕೆ ಅಧ್ಯಕ್ಷರು ಸೇರಿ 10 ಮಂದಿ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ನಿರ್ದಿಷ್ಟ ನಿಯಮ ಹಾಗೂ ಮಾರ್ಗಸೂಚಿ ಇಲ್ಲ. ಸರಕಾರ ತನಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ನೇಮಕ ಮಾಡುತ್ತದೆ. ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ’ ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಿನ್ಸ್‌ ಐಸಕ್‌ ಹೇಳಿದರು.

Vijaya Karnataka 22 Oct 2021, 7:57 am
ಬೆಂಗಳೂರು: ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌ ಗುರುವಾರ ರಾಜ್ಯ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web Sr Vishwanath


ನಗರದ ವಕೀಲ ಎ.ಎಸ್‌. ಹರೀಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾಗಿರುವ ಸರಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಬಿಡಿಎ ಮತ್ತು ಅಧ್ಯಕ್ಷ ಶಾಸಕ ಎಸ್‌.ಆರ್‌. ವಿಶ್ವನಾಥ್‌, ಸದಸ್ಯರಾದ ಎಸ್‌.ಎಂ. ರಾಮ್‌ ಪ್ರಸಾದ್‌, ಎಚ್‌.ಆರ್‌. ಶಾಂತ ರಾಜಣ್ಣ, ಜೆ.ಸುಮಾ ಅವರಿಗೂ ನೋಟಿಸ್‌ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಮ್ಯಾಜಿಸ್ಪ್ರೇಟ್‌ ಕೋರ್ಟ್‌ ಅನುಸರಿಸಬೇಕಾದ ಕ್ರಮಗಳ ಕುರಿತು ಹೊಸ ಮಾರ್ಗಸೂಚಿ ಹೊರಡಿಸಿದ ಹೈಕೋರ್ಟ್
ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಿನ್ಸ್‌ ಐಸಕ್‌, ‘ಬಿಡಿಎ ಹಾಲಿ ಅಧ್ಯಕ್ಷರಾಗಿರುವ ಎಸ್‌.ಆರ್‌. ವಿಶ್ವನಾಥ್‌ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಬಿಡಿಎ ಅಧ್ಯಕ್ಷರಾಗಲು ಅವರಿಗೆ ಅರ್ಹತೆ ಇಲ್ಲ. ಹಾಗೆಯೇ, ಶೈಕ್ಷಣಿಕ ಅರ್ಹತೆಯೂ ಹೊಂದಿಲ್ಲ. ಶಾಸಕರಾಗಿಯೂ ವೇತನ ಹಾಗೂ ಇತರೆ ಭತ್ಯೆ ಪಡೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಬಿಡಿಎ ಅಧ್ಯಕ್ಷ ಹುದ್ದೆಗೆ ಸಂಭಾವನೆ ಹಾಗೂ ಇತರೆ ಭತ್ಯೆ ಪಡೆಯುತ್ತಿದ್ದಾರೆ. ಒಬ್ಬ ವ್ಯಕ್ತಿಯು ಸಾರ್ವಜನಿಕ ಹಣದಿಂದ ಎರಡು ಹುದ್ದೆಗಳಿಗೆ ಪ್ರತ್ಯೇಕ ವೇತನ ಹಾಗೂ ಭತ್ಯೆ ಪಡೆಯುವಂತಿಲ್ಲ. ಹಾಗಾಗಿ ಎಸ್‌.ಆರ್‌. ವಿಶ್ವನಾಥ್‌ ನೇಮಕ ಆದೇಶವನ್ನು ರದ್ದುಪಡಿಸಬೇಕು’ ಎಂದರು.

‘ಅಲ್ಲದೆ, ಬಿಡಿಎ ಅಧ್ಯಕ್ಷರು, ಹಣಕಾಸು, ಎಂಜಿನಿಯರ್‌ ಮತ್ತು ನಗರ ಯೋಜನಾ ಸದಸ್ಯ ಸೇರಿ ನಾಲ್ವರು ಪೂರ್ಣಾವಧಿ ಸದಸ್ಯರು ಇರುತ್ತಾರೆ. ಉಳಿದ 18 ಮಂದಿ ಅಲ್ಪಾವಧಿ ಸದಸ್ಯರು ಇರುತ್ತಾರೆ. ಸದ್ಯಕ್ಕೆ ಅಧ್ಯಕ್ಷರು ಸೇರಿ 10 ಮಂದಿ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಅಧ್ಯಕ್ಷರು ಹಾಗೂ ಸದಸ್ಯರ ನೇಮಕಕ್ಕೆ ನಿರ್ದಿಷ್ಟ ನಿಯಮ ಹಾಗೂ ಮಾರ್ಗಸೂಚಿ ಇಲ್ಲ. ಸರಕಾರ ತನಗೆ ಬೇಕಾದವರನ್ನು ಅಧ್ಯಕ್ಷ ಹಾಗೂ ಸದಸ್ಯರ ಸ್ಥಾನಕ್ಕೆ ನೇಮಕ ಮಾಡುತ್ತದೆ. ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ’ ಎಂದರು.
ನ್ಯಾಯಾಧೀಶರ ನಿಂದನೆ; ಬೇಷರತ್‌ ಕ್ಷಮೆ ಕೋರಿದ ವಕೀಲನ ವಿರುದ್ಧದ ಪ್ರಕರಣ ಕೈಬಿಟ್ಟ ಹೈಕೋರ್ಟ್‌
ಎಸ್‌.ಎಂ.ರಾಮ್‌ ಪ್ರಸಾದ್‌, ಎಚ್‌.ಆರ್‌. ಶಾಂತ ರಾಜಣ್ಣ, ಜೆ.ಸುಮಾ ಅವರು ಬಿಡಿಎ ಸದಸ್ಯ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ನಿರ್ಬಂಧ ಹೇರಬೇಕು. ಬಿಡಿಎ ಅಧ್ಯಕ್ಷ ಹಾಗೂ ಸದಸ್ಯರ ನೇಮಕಕ್ಕೆ ಸೂಕ್ತ ಮಾರ್ಗಸೂಚಿ ರಚನೆ ಮಾಡುವಂತೆ ಸರಕಾರಕ್ಕೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ