ಆ್ಯಪ್ನಗರ

ಬೆಂಗಳೂರು: ದುಷ್ಕರ್ಮಿಗಳಿಂದ ನಾಯಿ ಮೇಲೆ ಗುಂಡಿನ ದಾಳಿ, ಜೀವ ಉಳಿಸಲು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ

ಬೆಂಗಳೂರಿನಲ್ಲಿ ಅಮಾಯಕ ಬೀದಿನಾಯಿಯ ಮೇಲೆ ದುಷ್ಕರ್ಮಿಯಿಂದ ಗುಂಡಿನ ದಾಳಿ ನಡೆದಿದೆ. ದಾಳಿಗೆ ಒಳಗಾಗಿರುವ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

Vijaya Karnataka Web 11 Nov 2019, 1:58 pm
ಬೆಂಗಳೂರು: ಜಯನಗರದಲ್ಲಿ ಬೀದಿನಾಯಿ ಮೇಲೆ ಅಪರಿಚಿತ ದುಷ್ಕರ್ಮಿಗಳು ಏರ್‌ಗನ್‌ನಿಂದ ಮೂರು ಸುತ್ತು ಗುಂಡು ಹಾರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ, ಗಂಭೀರವಾಗಿ ಗಾಯಗೊಂಡಿರುವ ಬೀದಿನಾಯಿಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web dog in hospital


ಕೊಚ್ಚಿ: ವೃದ್ಧ ದಂಪತಿ ಮೇಲೆ ಬೀದಿ ನಾಯಿಯ ಅಕ್ಕರೆ!

ಸೋಮವಾರ ಬೆಳಗ್ಗೆ 8.30 ರ ಸುಮಾರಿಗೆ ಜಯನಗರ 5 ನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಾಣಿ ಪ್ರಿಯ ಪ್ರವೀಣ್ ಎಂಬುವರು ನಾಯಿಯನ್ನು ರಕ್ಷಿಸಿ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗುಂಡುಗಳು ನಾಯಿಯ ಹೊಟ್ಟೆ ಸೇರಿರುವ ಕಾರಣ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯಲು ಚಿಕಿತ್ಸೆ ಮುಂದುವರೆದಿದೆ.



ಸಾಕುನಾಯಿಗೆ ಗುಂಡುಹಾರಿಸಿ ಕೊಂದ ಮಾಜಿ ಸೈನಿಕ

ನಾಯಿಯ ದೇಹವನ್ನು ಎಕ್ಸರೇ ಮಾಡಿಸಿದಾಗ ಮೂರು ಗುಂಡುಗಳು ದೇಹವನ್ನು ಹೊಕ್ಕಿರುವುದು ಕಂಡುಬಂದಿದ್ದು, ನಾಯಿ ಬದುಕುವ ಸಾಧ್ಯತೆ 50-50 ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ನಾಯಿಯ ಪ್ರಾಣ ಉಳಿಸಲು ವೈದ್ಯರು ಶಸ್ತ್ರಕ್ರಿಯೆ ನಡೆಸುತ್ತಿದ್ದಾರೆ.

ನಾಯಿಯನ್ನು ರಕ್ಷಿಸಿದ ಐಂದ್ರಿತಾಗೆ ಪೇಟಾ ಗರಿ

ನಾಯಿ ಮೇಲೆ ಗುಂಡಿನ ದಾಳಿ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು, ಗುಂಡು ಹಾರಿಸಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಸೇನೆಯಿಂದ ನಿವೃತ್ತರಾಗಿ ಜಯನಗರದಲ್ಲಿ ವಾಸವಿರುವ ವ್ಯಕ್ತಿ ಗುಂಡು ಹಾರಿಸಿರುವವರು ಎಂದು ತಿಳಿದುಬಂದಿದ್ದು, ಅವರು ಹೊಂದಿರುವ ಗನ್ ಮತ್ತು ಲೈಸೆನ್ಸ್ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಬೀದಿ ನಾಯಿ ಯಾವಾಗಲೂ ತಮ್ಮ ಮನೆ ಮುಂದೆ ಇರುತ್ತದೆ ಮತ್ತು ಗಲೀಜು ಮಾಡುತ್ತದೆ ಎಂಬ ಕಾರಣಕ್ಕೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ