ಆ್ಯಪ್ನಗರ

ತಾಂತ್ರಿಕ ದೋಷ: ಲಂಡನ್‌ಗೆ ತೆರಳಬೇಕಿದ್ದ ವಿಮಾನ 20 ಗಂಟೆ ವಿಳಂಬ

ಈ ವಿಮಾನ ಶನಿವಾರ ಬೆಳಗ್ಗೆ 5:30ಕ್ಕೆ ಕೆಐಎನಿಂದ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಾರಬೇಕಿತ್ತು. ತಾಂತ್ರಿಕ ದೋಷದ ತಪಾಸಣೆಗಾಗಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ದೋಷವನ್ನು ಶನಿವಾರವೇ ಸರಿಪಡಿಸಲಾಯಿತಾದರೂ, ಹೀಥ್ರೂ ನಿಲ್ದಾಣದಲ್ಲಿ ರಾತ್ರಿ ವೇಳೆ ಕರ್ಫ್ಯೂ ಇದ್ದುದರಿಂದ ವಿಮಾನ ಹೊರಡಲಿಲ್ಲ. ಮಧ್ಯರಾತ್ರಿ 12:45ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟಿತು. ಎಲ್ಲ 206 ಪ್ರಯಾಣಿಕರಿಗೂ ಸಮೀಪದ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು' ಎಂದು ಏರ್‌ ಇಂಡಿಯಾ ವಕ್ತಾರರು ಸಂಡೇ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

TNN 2 Jun 2019, 10:18 am
ಬೆಂಗಳೂರು: ಬೆಂಗಳೂರಿನಿಂದ ಲಂಡನ್‌ಗೆ ಹಾರಬೇಕಿದ್ದ ಏರ್‌ ಇಂಡಿಯಾ ವಿಮಾನ (ಎಐ 177) ತಾಂತ್ರಿಕ ದೋಷದಿಂದಾಗಿ 20 ಗಂಟೆಗಳಿಗೂ ಹೆಚ್ಚು ಕಾಲ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಉಳಿದ ಘಟನೆ ಶನಿವಾರ ನಡೆದಿದೆ. 206 ಪ್ರಯಾಣಿಕರು ವಿಮಾನದಲ್ಲಿದ್ದು, ವಿಳಂಬದಿಂದಾಗಿ ಯಾತನೆಪಟ್ಟರು.
Vijaya Karnataka Web Air India Flight

ಈ ವಿಮಾನ ಶನಿವಾರ ಬೆಳಗ್ಗೆ 5:30ಕ್ಕೆ ಕೆಐಎನಿಂದ ಲಂಡನ್ನಿನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಹಾರಬೇಕಿತ್ತು. ತಾಂತ್ರಿಕ ದೋಷದ ತಪಾಸಣೆಗಾಗಿ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ದೋಷವನ್ನು ಶನಿವಾರವೇ ಸರಿಪಡಿಸಲಾಯಿತಾದರೂ, ಹೀಥ್ರೂ ನಿಲ್ದಾಣದಲ್ಲಿ ರಾತ್ರಿ ವೇಳೆ ಕರ್ಫ್ಯೂ ಇದ್ದುದರಿಂದ ವಿಮಾನ ಹೊರಡಲಿಲ್ಲ. ಮಧ್ಯರಾತ್ರಿ 12:45ಕ್ಕೆ ವಿಮಾನ ಬೆಂಗಳೂರಿನಿಂದ ಹೊರಟಿತು. ಎಲ್ಲ 206 ಪ್ರಯಾಣಿಕರಿಗೂ ಸಮೀಪದ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿತ್ತು' ಎಂದು ಏರ್‌ ಇಂಡಿಯಾ ವಕ್ತಾರರು ಸಂಡೇ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದರು.

'ಮುಂಗಡ ಬುಕಿಂಗ್ ಮಾಡಿದರ ಕಾರಣ ಪ್ರಯಾಣಿಕರು ಬಹಳ ಹೊತ್ತು ಹೋಟೆಲ್‌ ಲಾಬಿಯಲ್ಲೇ ಕಾಲ ಕಳೆಯಬೇಕಾಯಿತು' ಎಂದು ಪ್ರಯಾಣಿಕರಲ್ಲಿ ಒಬ್ಬರಾದ ಸೌರವ್‌ ಟ್ವೀಟ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ