ಆ್ಯಪ್ನಗರ

ಸಾರ್ವಜನಿಕರಿಗೆ ಕೋಟಿಗಟ್ಟಲೆ ವಂಚನೆ: ಹತ್ತು ಕಂಪೆನಿಗಳ ಜಪ್ತಿ

ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಹತ್ತು ಕಂಪನಿಗಳನ್ನು ಜಪ್ತಿ ಮಾಡಲಾಗಿದೆ.

ವಿಕ ಸುದ್ದಿಲೋಕ 29 Jul 2017, 12:57 pm
ಬೆಂಗಳೂರು: ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಹತ್ತು ಕಂಪನಿಗಳನ್ನು ಜಪ್ತಿ ಮಾಡಲಾಗಿದೆ.
Vijaya Karnataka Web ten companies have gained millions crore rupees from public
ಸಾರ್ವಜನಿಕರಿಗೆ ಕೋಟಿಗಟ್ಟಲೆ ವಂಚನೆ: ಹತ್ತು ಕಂಪೆನಿಗಳ ಜಪ್ತಿ


ಹಿಂದೂಸ್ತಾನ್ ಇನ್ ಪ್ರಾಕಾನ್ ಕಂಪನಿಯಿಂದ 389 ಕೋಟಿ, ಮೈತ್ರಿ ಪ್ಲಾಂಟೇಷನ್ ಹಾಗೂ ಹಾರ್ಟಿಕಲ್ಚರ್ ಕಂಪನಿ 9.82, ಗ್ರೀನ್ ಬಡ್ಸ್ ಆಗ್ರೋ ಫಾರಂ ಲಿಮಿಟೆಡ್‌ 53, ಹರ್ಷ ಎಂಟರ್ಟೈನ್ಮೆಂಟ್ ಕಂಪನಿ 136, ಡ್ರೀಮ್ಸ್ ಇನ್ ಫ್ರಾ 573, ಟಿಜಿಎಸ್ ಕಂಪನಿ 259,ಗೃಹ ಕಲ್ಯಾಣ ಕಂಪನಿ 277, ಸೆವೆನ್ ಹಿಲ್ಸ್ 79, ವೃಕ್ಷ ಬಿಜಿನೆಸ್ ಸಲ್ಯೂಶನ್‌ನಿಂದ 32ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಅಗ್ರಿಗೋಲ್ಡ್ ಕಂಪನಿಯು ಸಾವಿರದ ಆರು ನೂರು ಕೋಟಿ ಹಣ ಸಂಗ್ರಹ ಮಾಡಿದೆ.

ಹಣಕಾಸು ವ್ಯವಹಾರ ನಡೆಸುತ್ತಿದ್ದ ಕಂಪನಿಗಳು ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ನೀಡುವುದಾಗಿ ಹೇಳಿ ವಂಚಿಸಿವೆ. ಕೆಲವು ಕಂಪೆನಿಗಳು ಕಡಿಮೆ ದರದಲ್ಲಿ ಮನೆ ನಿವೇಶನ ನೀಡುವ ಅಮಿಷವೊಡ್ಡಿದ್ದವು. ಕಳೆದ ನಾಲ್ಕು ವರ್ಷಗಳಿಂದ ಹತ್ತು ಸಂಸ್ಥೆಗಳ ಮೇಲೆ ಸಿಐಡಿಯಲ್ಲಿ 422 ಕೇಸ್ ದಾಖಲಾಗಿವೆ.

ಹದಿನೇಳು ಲಕ್ಷಕ್ಕೂ ಹೆಚ್ಚು ಜನರು 3273 ಕೋಟಿ ಹೂಡಿಕೆ ಮಾಡಿದ್ದಾರೆ. ಆಕರ್ಷಣೀಯ ಜಾಹೀರಾತು ನೀಡಿ ಸಾರ್ವಜನಿಕರನ್ನು ತಮ್ಮತ್ತ ಸೆಳೆಯುತ್ತಿದ್ದ ಕಂಪನಿಗಳು‌ ಸಿನಿಮಾ ತಾರೆಗಳು, ಪ್ರಮುಖ ವ್ಯಕ್ತಿಗಳನ್ನು ಜಾಹೀರಾತಿಗೆ ಬಳಸಿಕೊಂಡಿವೆ.

ನಿವೃತ್ತ ಸರಕಾರಿ ನೌಕರರು, ಮಿಲಿಟರಿ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು‌, ವೈದ್ಯರು, ಸಾಪ್ಟ್ ವೇರ್ ಎಂಜಿನಿಯರ್‌ಗಳು, ರೈತರು, ಹಾಗೂ ವ್ಯಾಪಾರಿಗಳಿಂದ ಕಂಪೆನಿಗಳು ಹಣ ಸಂಗ್ರಹಿಸುತ್ತಿದ್ದವು. ದುಬಾರಿ ಬಡ್ಡಿ ಹಾಗೂ ನಿವೇಶನ, ಮನೆ ಸಿಗುವ ಆಸೆಗೆ ಅವರೆಲ್ಲ ಹೂಡಿಕೆ ಮಾಡುತ್ತಿದ್ದರು.

ಸಾರ್ವಜನಿಕರ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದ ಕಂಪನಿಗಳು ಸಂಸ್ಥೆಗಳ ಹೆಸರಲ್ಲಿ ಜಮೀನು, ಐಶಾರಾಮಿ ಮನೆಗಳು, ದುಬಾರಿ ವಾಹನಗಳು, ಬ್ಯಾಂಕುಗಳಲ್ಲಿ ಠೇವಣಿ, ಚಲನಚಿತ್ರ ನಿರ್ಮಾಣಗಳಲ್ಲಿ ಹಣ ತೊಡಗಿಸುತ್ತಿದ್ದವು.

ಅಗ್ರಿಗೋಲ್ಡ್ ಕಂಪನಿಯ 429 ಎಕರೆ,ಮೈತ್ರಿ ಪ್ಲಾಂಟೇಷನ್ ಅಂಡ್ ಹಾರ್ಟಿಕಲ್ಚರ್ ಕಂಪನಿಯ 383 ಎಕರೆ, ಗ್ರೀನ್ ಬಡ್ಸ್ ಆಗ್ರೋ ಫಾರಂನ 205 ಎಕರೆ ಜಮೀನು ಮುಟ್ಟುಗೋಲು ಹಾಕಲು ಸಿಐಡಿ ಅಧಿಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ