ಆ್ಯಪ್ನಗರ

ಬಾಡಿಗೆದಾರನ ಮನೆಗೆ 'ನವ ವಧು' ಬಂದಾಗ ಮನೆ ಯಜಮಾನಿಗೆ ಸಿಟ್ಟು ಬಂದಿದ್ದೇಕೆ..?!

ಮಾತಿಗೆ ಮಾತು ಬೆಳೆದಾಗ ಸವಿತಾ ಅವರು ಶಬಾನಾ ಅವರಿಗೆ ಮತ್ತು ಶಬಾನಾ ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ದಿಕ್ಕೆಟ್ಟ ಶಬಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸವಿತಾ ಕೂಡಾ ದೂರು ದಾಖಲಿಸಿದ್ಧಾರೆ.

Vijaya Karnataka Web 13 Feb 2020, 4:09 pm
ಬೆಂಗಳೂರು: ಅದೊಂದು ತುಂಬು ಕುಟುಂಬ. ಗಂಡ-ಹೆಂಡ್ತಿ 5 ಮಕ್ಕಳು, ಒಂದಷ್ಟು ಗಿಳಿ ಹಿಂಡು, ಒಂದು ಕುರಿ ಕೂಡಾ ಆ ಕುಟುಂಬದ ಸದಸ್ಯರು! ಹುಬ್ಬಳ್ಳಿ ಮೂಲದ ಈ ಕುಟುಂಬ ಬೆಂಗಳೂರಿನ ಕೆಂಪಾಪುರ ಅಗ್ರಹಾರದಲ್ಲಿ 8 ತಿಂಗಳ ಹಿಂದೆ ಮನೆ ಭೋಗ್ಯಕ್ಕೆ ಹಾಕಿಸಿಕೊಂಡಿದ್ದರು. ಆದ್ರೆ, ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮನೆ ಮಾಲೀಕರ ಜೊತೆಗಿನ ಇವರ ಕಿತ್ತಾಟ ಪೊಲೀಸ್ ಠಾಣೆ ತಲುಪಿದೆ.
Vijaya Karnataka Web assault
ಬಾಡಿಗೆದಾರನ ಮನೆಗೆ 'ನವ ವಧು' ಬಂದಾಗ ಮನೆ ಯಜಮಾನಿಗೆ ಸಿಟ್ಟು ಬಂದಿದ್ದೇಕೆ..?!


ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಕಿತ್ತಾಟ ಶುರುವಾಗಲು ಮೊದಲ ಕಾರಣ, ಮನೆಗೆ ಬಂದ ಹೊಸ ಅತಿಥಿ..! ಶಬಾನಾ ಹಾಗೂ ಜಾವೇದ್ ಶಬ್ಬೀರ್ ಜೋಡಿಯ 5 ಮಕ್ಕಳ ಪೈಕಿ ಮೊದಲನೆಯವನಿಗೆ ಮದುವೆಯಾಯ್ತು. ನವ ವಧು ಮನೆಗೆ ಬಂದ ಕೂಡಲೇ ಮನೆ ಮಾಲೀಕರ ಕಿರಿಕ್ ಶುರುವಾಯ್ತು.

ಶಬಾನಾ ಹಾಗೂ ಜಾವೇದ್ ಶಬ್ಬೀರ್, 4 ಲಕ್ಷ 10 ಸಾವಿರ ರೂ.ಗೆ ಈ ಮನೆಯನ್ನು 2 ವರ್ಷಗಳ ಅವಧಿಗೆ ಸವಿತಾ ಎಂಬುವರಿಂದ ಭೋಗ್ಯಕ್ಕೆ ಹಾಕಿಸಿಕೊಂಡಿದ್ದರು. ವಿಜಯನಗರ ಪೈಪ್‌ಲೈನ್ ರಸ್ತೆಯ ಮೊದಲ ಕ್ರಾಸ್‌ನಲ್ಲೇ ಮನೆ ಇತ್ತು. ಈ ಮನೆಯ ಔಟ್‌ ಹೌಸ್‌ನಲ್ಲಿ ಮನೆಯ ಮಾಲೀಕರಾದ ಸವಿತಾ ಅವರ ತಾಯಿ ವಾಸವಿದ್ದರು. ಹತ್ತಿರಲ್ಲೇ ಇದ್ದ ಮತ್ತೊಂದು ಮನೆಯಲ್ಲಿ ಸವಿತಾ ಕುಟುಂಬ ವಾಸವಿತ್ತು.

ನಾಯಿಗೆ ಚಿಕಿತ್ಸೆ ಕೊಡ್ಲಿಲ್ಲ ಅಂತಾ ಸಿಟ್ಟಿಗೆದ್ದ ರೌಡಿ..! ವೃದ್ಧ ವೈದ್ಯರಿಗೆ ಹಲ್ಲೆ ಮಾಡಿ ಕ್ಲಿನಿಕ್‌ನಲ್ಲಿ ದಾಂಧಲೆ

ಮಗಳ ಮನೆಯ ಕೇರ್‌ ಟೇಕರ್ ಆಗಿದ್ದ ಸವಿತಾ ತಾಯಿ ಅವರಿಗೆ ಶಬಾನಾ ಕುಟುಂಬ ಸರಿಹೊಂದುತ್ತಿರಲಿಲ್ಲ. ಅವರ ಮನೆಯಲ್ಲಿ ಜನ ಜಾಸ್ತಿ, ಹೆಚ್ಚು ನೀರು ಬಳಸ್ತಾರೆ ಎಂದು ಕ್ಯಾತೆ ತೆಗೆಯುತ್ತಿದ್ದ ಸವಿತಾ ಅವರ ತಾಯಿ, ಆ ಮನೆಗೆ ನವವಧು ಬಂದಾಗ ಮತ್ತೊಂದು ತಲೆ ಜಾಸ್ತಿ ಆಯ್ತು ಎಂದು ಬೊಬ್ಬೆ ಇಟ್ಟರು. ಏಕಾಏಕಿ ಮನೆಗೆ ನೀಡಿದ್ದ ನೀರಿನ ಸಂಪರ್ಕವನ್ನು ಬಂದ್ ಮಾಡಿದರು.

ಜೂಮ್ ಕಾರಲ್ಲಿ ಬಂದು ಮನೆ ಲೂಟಿ ಮಾಡಿ ಅಲ್ಲೇ ಪಾರ್ಟಿ ಮಾಡ್ತಿದ್ದ ಫಟಿಂಗರು ಅಂದರ್..!

ನೀರಿನ ಸಂಪರ್ಕವನ್ನು ಏಕೆ ಕಡಿತ ಮಾಡಿದ್ದೀರಿ ಎಂದು ಶಬಾನಾ ಅವರು ಸವಿತಾ ಅವರ ತಾಯಿಯನ್ನು ಕೇಳಿದಾಗ ಆಕೆ ನನ್ನ ಮಗಳ ಜೊತೆ ಮಾತನಾಡಿ ಎಂದುಬಿಟ್ಟರು. ಸವಿತಾ ಅವರ ಮನೆಗೆ ಶಬಾನಾ ಮತ್ತು ಆಕೆಯ ಕುಟುಂಬ ಸದಸ್ಯರು ಹೋದಾಗ ಆಕೆ ಹೊಸ ವರಸೆ ತೆಗೆದಳು. ನಿಮ್ಮ ಮನೆಯಲ್ಲಿ ಜನ ಜಾಸ್ತಿ, ಹೆಚ್ಚು ನೀರು ಬಳಸ್ತೀರಾ ಎಂದು ಕಿರಿಕ್ ಮಾಡಿದಳು. ಇದರಿಂದ ಸಿಟ್ಟಿಗೆದ್ದ ಶಬಾನಾ, ಈ ಮನೆಗೆ ಬರುವಾಗಲೇ ನಾವು ಎಷ್ಟು ಮಂದಿ ಇದ್ದೇವೆ ಎಂದು ತಿಳಿಸಿದ್ದೆವು ಎಂದು ವಾದಿಸಿದರು. ಈ ವೇಳೆ ಮಾತಿಗೆ ಮಾತು ಬೆಳೆದಾಗ ಸವಿತಾ ಅವರು ಶಬಾನಾ ಅವರಿಗೆ ಮತ್ತು ಶಬಾನಾ ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ದಿಕ್ಕೆಟ್ಟ ಶಬಾನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇದಕ್ಕೆ ಪ್ರತಿಯಾಗಿ ಸವಿತಾ ಕೂಡಾ ದೂರು ದಾಖಲಿಸಿದ್ಧಾರೆ.

ಅಪಘಾತಕ್ಕೆ ಕಾರಣವಾಗಿದ್ದ ಬೈಕ್ ಬಿಡುಗಡೆ ಮಾಡಲು ಲಂಚ: ರೆಡ್‌ ಹ್ಯಾಂಡ್‌ ಆಗಿ ಎಸಿಬಿ ಬಲೆಗೆ ಬಿದ್ದ ಹೆಡ್‌ ಕಾನ್ಸ್‌ಟೇಬಲ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ